Sunday, 27th October 2024

World Stroke Day : ಸಾಕ್ರ ವರ್ಲ್ಡ್ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನಾಚಣೆ ಅಂಗವಾಗಿ ವಾಕಥಾನ್

World Stroke Day:

ಬೆಂಗಳೂರು: ಭಾರತದಲ್ಲಿ ಪಾರ್ಶ್ವವಾಯುವಿಗೆ ಒಳಗಾಗುವ ಪ್ರಕರಣಗಳಲ್ಲಿ ಶೇಕಡಾ 51ರಷ್ಟು ಹೆಚ್ಚಳವಾಗಿದೆ ಎಂಬುದಾಗಿ ಅಧ್ಯಯನಗಳು ಹೇಳುತ್ತಿವೆ. ಆದರೆ ಜಾಗೃತಿ ಮತ್ತು ಪೂರ್ವಭಾವಿ ಕ್ರಮಗಳ ಮೂಲಕ 80% ಪಾರ್ಶ್ವವಾಯು ಪ್ರಕರಣಗಳನ್ನು ತಡೆಗಟ್ಟಬಹುದು ಎಂಬುದು ಆಶಾದಾಯಕ ವಿಚಾರ. ಹೀಗಾಗಿ ವಿಶ್ವ ಪಾರ್ಶ್ವವಾಯು (World Stroke Day) ದಿನದ ಅಂಗವಾಗಿ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನ ಸಾಕ್ರ ವರ್ಲ್ಡ್ ಆಸ್ಪತ್ರೆಯು “ರೈಸ್ ಅಬೌವ್ ಸ್ಟ್ರೋಕ್” ಎಂಬ ಥೀಮ್ ಅಡಿಯಲ್ಲಿ “ಸ್ಟ್ರೈಡ್ ಟು ಸೇವ್ ಲೈವ್ಸ್ ವಾಕಥಾನ್” ಆಯೋಜಿಸಿದೆ. ಇದೇ ಸಂದರ್ಭದಲ್ಲಿ ಪಾರ್ಶ್ವವಾಯು ಚಿಕಿತ್ಸೆಗೆಂದೇ ಮೀಸಲಾಗಿರುವ ” ಸ್ಟ್ರೋಕ್ ಕ್ಲಿನಿಕ್” ಅನ್ನು ಪ್ರಾರಂಭಿಸುವುದಾಗಿ ಘೋಷಿಸಲಾಯಿತು.

ಕಾರ್ಯಕ್ರಮದಲ್ಲಿ ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿನ ತಡೆಯಿಂದಾಗಿ ಉಂಟಾಗುವ ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಮಯೋಚಿತ ಚಿಕಿತ್ಸೆಯ ಮೂಲಕ ಎಂದಿಗೂ ಗುಣಪಡಿಸಲು ಸಾಧ್ಯವೇ ಇಲ್ಲದ ಮೆದುಳಿನ ಅಂಗಾಂಶ ಹಾನಿ ತಡೆಯಬಹುದು ಎಂದು ಹೇಳಲಾಯಿತು. ಟ್ರಾನ್ಸ್ಕ್ರಾನಿಯಲ್ ಡಾಪ್ಲರ್ (ಟಿಸಿಡಿ) ಯಂತ್ರ, ಸ್ಟ್ರೋಕ್ ಜಾಗೃತಿ ವಾಹನ ಮತ್ತು ಜಾಗೃತಿ ಮಳಿಗೆಯಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಾಕ್ರದ ಸ್ಟ್ರೋಕ್ ಕ್ಲಿನಿಕ್‌ ಈ ಕಾರ್ಯಕ್ರಮದ ಪ್ರಮುಖ ಹೈಲೈಟ್ ಎನಿಸಿಕೊಂಡಿತು. ಪಾರ್ಶ್ವವಾಯುವಿನಿಂದ ಬದುಕುಳಿದವರು ಮತ್ತು ಅವರ ಕುಟುಂಬಗಳಿಗೆ ಸರಿಯಾದ ಮತ್ತು ವೇಗದ ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸುವುದು ಕ್ಲಿನಿಕ್ ನ ಉದ್ದೇಶ.

ಆರಂಭಿಕ ಸೂಚನೆ ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆಯಿರಿ

ಸಾಕ್ರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಯುಚಿ ನಗಾನೊ, “ಪಾರ್ಶ್ವವಾಯುವಿನ ಆರಂಭಿಕ ಸೂಚನೆಗಳು ಮತ್ತು ತಡೆಗಟ್ಟುವಿಕೆಗಳನ್ನು ಗುರುತಿಸುವ ಬಗ್ಗೆ ಜಾಗೃತಿ ಮೂಡಿಸಲು ಸಾಕ್ರ ಬದ್ಧವಾಗಿದೆ ” ಎಂದು ಹೇಳಿದರು. ಉಪ ವ್ಯವಸ್ಥಾಪಕ ನಿರ್ದೇಶಕ ನವೋಯಾ ಮಾಟ್ಸುಮಿ ಮಾತನಾಡಿ “ಪಾರ್ಶ್ವವಾಯು ವೈಯಕ್ತಿಕ ಮತ್ತು ಸಮುದಾಯ ಮಟ್ಟಗಳ ಮೇಲೆ ಭಾರಿ ಹೊರೆಯಾಗುತ್ತದೆ. , ಆದ್ದರಿಂದ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ” ಎಂದು ಹೇಳಿದರು.

ಸಾಕ್ರ ಆಸ್ಪತ್ರೆಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ಅಸೋಸಿಯೇಟ್ ಉಪಾಧ್ಯಕ್ಷ ಗುರುಪ್ರದಾ ಪೂಂಜಾ ಪಿಜೆ ಮಾತನಾಡಿ, ಸ್ಟ್ರೋಕ್ ಆದ ಸಂದರ್ಭಗಳಲ್ಲಿ ಸಮಯವು ನಿರ್ಣಾಯಕವಾಗಿದೆ. ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಪಾರ್ಶ್ವವಾಯು ಘಟಕವು ಅತ್ಯಂತ ನಿರ್ಣಾಯಕ ಎಂದು ಹೇಳಿದರು.

ಬಹುತೇಕ ಎಲ್ಲಾ ರೋಗಿಗಳು ಆರಂಭಿಕ ಹಂತದ ಪಾರ್ಶ್ವವಾಯು ರೋಗಲಕ್ಷಣಗಳನ್ನು ಎದುರಿಸಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಏಕೆಂದರೆ ಅವರು ಕೆಲವೇ ನಿಮಿಷಗಳಲ್ಲಿ ಅದನ್ನು ಮರೆತುಬಿಡುತ್ತಾರೆ. ಪಾರ್ಶ್ವವಾಯು ಸಮಸ್ಯೆಯನ್ನು ಆರಂಭಿಕ ಹಂತಗಳಲ್ಲಿ ಹೇಗೆ ನಿರ್ವಹಿಸಬಹುದು ಎಂಬುದರ ಜ್ಞಾನದ ಕೊರತೆಯಿಂದಾಗಿ ಆ ರೀತಿ ಮಾಡುತ್ತಾರೆ. . ಪಾರ್ಶ್ವವಾಯುವಿನಲ್ಲಿ ಎರಡು ವಿಧಗಳಿವೆ. ನಿಮ್ಮ ತಲೆಯ ರಕ್ತನಾಳಗಳಲ್ಲಿ ರಕ್ತಸ್ರಾವವಾಗಲು ಪ್ರಾರಂಭಿಸುವುದು ಮತ್ತು ಆರ್ಟರಿ ಬ್ಲಾಕ್‌ನಿಂದ ಸಂಭವಿಸುವ ಇಸ್ಕೆಮಿಕ್ ಪಾರ್ಶ್ವವಾಯು. ಪಾರ್ಶ್ವವಾಯು ಪ್ರಕರಣಗಳಲ್ಲಿ 87%ನಷ್ಟು ಈ ಎರಡು ಕಾರಣಗಳಿಂದ ಆಗುತ್ತವೆ ಮತ್ತು ಇದು ಭಾರತ ಮತ್ತು ವಿಶ್ವಾದ್ಯಂತ ಸಾಮಾನ್ಯ” ಎಂದು ಇನ್ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ನಿರ್ದೇಶಕ ಮತ್ತು ಎಚ್ಒಡಿ ಡಾ.ಅರ್ಜುನ್ ಶ್ರೀವತ್ಸ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಜೀವನ ಶೈಲಿ ಸುಧಾರಿಸಿ

“ಜಡ ಜೀವನಶೈಲಿಯಿಂದಾಗಿ ರಕ್ತ ಮತ್ತು ಆರ್ಟೀರಿಯಲ್‌ ಆರೋಗ್ಯ ಕ್ಷೀಣಿಸಲು ಕಾರಣವಾಗಬಹುದು. ಜೀವನಶೈಲಿ ಮಾರ್ಪಾಡುಗಳು ಮತ್ತು ಸಮಯೋಚಿತ ವೈದ್ಯಕೀಯ ಹಸ್ತಕ್ಷೇಪ ಅಂದರೆ BE F.A.S.T. ವಿಧಾನದ ಮೂಲಕ ಪಾರ್ಶ್ವವಾಯು ಅಪಾಯ ಕಡಿಮೆ ಮಾಡಬಹುದು. BE F.A.S.Tನಲ್ಲಿ (B) ಎಂದರೆ ಹಠಾತ್ ದೇಹದ ಸಮತೋಲನ ಕಳೆದುಕೊಳ್ಳುವುದು,(E) ಎಂದರೆ ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ಮಂಜಾಗುವುದು. (F) ಎಂದೆರ ಒಂದು ಅಥವಾ ಎರಡೂ ಬದಿಗಳಲ್ಲಿ ಮುಖ ಕುಗ್ಗುವಿಕೆ, (A) ಎಂದರೆ ಒಂದು ತೋಳು ಕೆಳಕ್ಕೆ ಅಲ್ಲಾಡಿಸುವಾಗ ದೌರ್ಬಲ್ಯ ಉಂಟಾಗುವುದ, (S) ಎಂದರೆ ಮಂದ ಮಾತು ಅಥವಾ ಮಾತನಾಡಲು ಕಷ್ಟವಾಗುವುದು. (T) ಎಂದರೆ ಸಮಯ. ಸಮಯ ನಿರ್ಣಾಯಕವಾಗಿರುವುದರಿಂದ ತಕ್ಷಣದ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ. ಈ ಸರಳ ಹಂತಗಳನ್ನು ಅನುಸರಿಸುವುದರಿಂದ ಜೀವ ಉಳಿಸಬಹುದು. ಏಕೆಂದರೆ ಸಮಯೋಚಿತ ಚಿಕಿತ್ಸೆಯು ಶಾಶ್ವತ ಹಾನಿ ತಡೆಗಟ್ಟಲು ಸಹಾಯ ಮಾಡುತ್ತದೆ,” ಎಂದು ನರವಿಜ್ಞಾನ ಮತ್ತು ಪಾರ್ಶ್ವವಾಯು ವಿಭಾಗದ ಮುಖ್ಯಸ್ಥ ಮತ್ತು ಹಿರಿಯ ಸಲಹೆಗಾರ ಡಾ. ಅಮಿತ್ ಕುಲಕರ್ಣಿ ಹೇಳಿದರು.

ಇದನ್ನೂ ಓದಿ: Bengaluru News: ವಿಶ್ವ ಪಾರ್ಶ್ವವಾಯು ದಿನ; ಬೆಂಗಳೂರಿನಲ್ಲಿ ಜಾಗೃತಿ ಅಭಿಯಾನ

ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್‌ನ ನಿರ್ದೇಶಕ ಮತ್ತು ಎಚ್ಒಡಿ ಡಾ.ಅರ್ಜುನ್ ಶ್ರೀವತ್ಸ ನ್ಯೂರಾಲಜಿ & ಸ್ಟ್ರೋಕ್‌ನ ಹಿರಿಯ ಸಲಹೆಗಾರ ಮತ್ತು ಲೀಡ್ ಅಮಿತ್ ಕುಲಕರ್ಣಿ, ನ್ಯೂರಾಲಜಿ ವಿಭಾಗದ ಹಿರಿಯ ಸಲಹೆಗಾರ ಡಾ.ಚಿದಂಬರಂಮೂರ್ತಿ ಉದಯ ಶಂಕರ್, ನ್ಯೂರೋ ಮತ್ತು ಸ್ಟ್ರೋಕ್ ಇಂಟರ್ವೆನ್ಷನ್ ವಿಭಾಗದ ಹಿರಿಯ ಸಲಹೆಗಾರದಾ ರೂಪಾ ಶೇಷಾದ್ರಿ, ನ್ಯೂರೊಸರ್ಜನ್‌ ವಿಭಾಗದ ಹಿರಿಯ ಸಲಹೆಗಾರರಾದ ಚಂದ್ರಶೇಖರ್, ನ್ಯೂರೊಸರ್ಜರಿ ವಿಭಾಗದ ಹಿರಿಯ ಸಲಹೆಗಾರ ಡಾ. ದಿಲೀಪ್ ಮೋಹನ್, ನ್ಯುರೋ ಸರ್ಜರಿ ವಿಭಾಗದ ಕನ್ಸಲ್ಟೆಂಟ್‌ ಡಾ.ಅಲೋಕ್ ಮೋಹನ್ ಉಪ್ಪಾರ್, ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯ ನ್ಯೂರೊಸರ್ಜರಿ ವಿಭಾಗದ ಸಹಾಯಕ ಸಲಹೆಗಾರ ಡಾ.ಶೈಲೇಶ್ ಎಂ.ಪಿ. ಸೇರಿದಂತೆ ಪರಿಣತ ವೈದ್ಯರ ಸಮಿತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.