Thursday, 12th December 2024

Job Guide: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿದೆ 39 ಹುದ್ದೆ; ಇಂದೇ ಅಪ್ಲೈ ಮಾಡಿ

ಬೆಂಗಳೂರು:  10, 12ನೇ ತರಗತಿ ತೇರ್ಗಡೆಯಾಗಿ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ (Karnataka State Souharda Federal Cooperative Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಚಾರ್ಟಡ್‌ ಅಕೌಂಟೆಂಟ್‌, ಲಾ ಆಫೀಸರ್‌, ಎಚ್‌.ಆರ್‌. ಆಫೀಸರ್‌, ಚಾಲಕ ಸೇರಿ ಒಟ್ಟು 39 ಹುದ್ದೆ ಖಾಲಿ ಇದೆ (KSSFCL Recruitment 2024). ಆಸಕ್ತರು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್‌ 9 (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಚಾರ್ಟರ್ಡ್ ಅಕೌಂಟೆಂಟ್ – 1 ಹುದ್ದೆ, ವಿದ್ಯಾರ್ಹತೆ: ಸಿಎ, ಸಿಎಸ್‌, ಐಸಿಡಬ್ಲ್ಯುಎ
ಕಾನೂನು ಅಧಿಕಾರಿ (Law Officer) – 2 ಹುದ್ದೆ, ವಿದ್ಯಾರ್ಹತೆ: ಎಲ್‌ಎಲ್‌ಬಿ, ಕಾನೂನು ವಿಷಯದಲ್ಲಿ ಪದವಿ
ಎಚ್‌.ಆರ್‌. ಆಫೀಸರ್ – 1 ಹುದ್ದೆ, ವಿದ್ಯಾರ್ಹತೆ: ಎಚ್‌ಆರ್‌ ವಿಷಯದಲ್ಲಿ ಎಂಬಿಎ
ಟ್ರೈನಿಂಗ್‌ ಆಫೀಸರ್‌ – 1 ಹುದ್ದೆ, ವಿದ್ಯಾರ್ಹತೆ: ಎಂಎ, ಎಂಎಸ್‌ಡಬ್ಲ್ಯು
ಫ್ರೆಂಡ್ಲಿ ಡೆವಲಪ್‌ಮೆಂಟ್‌ ಆಫೀಸರ್ (Friendly Development Officer) – 11 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಅಸಿಸ್ಟೆಂಟ್ – 8 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಟೈಪಿಸ್ಟ್ & ಸ್ಟೆನೋ – 2 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಜೂನಿಯರ್ ಅಸಿಸ್ಟೆಂಟ್ – 11 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಡೆಪ್ಯುಟಿ ಸ್ಟಾಫ್ & ವೆಹಿಕಲ್ ಡ್ರೈವರ್ – 2 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ

ವಯೋಮಿತಿ ಮತ್ತು ಅರ್ಜಿ ಶುಲ್ಕ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 30-35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಚಾರ್ಟರ್ಡ್ ಅಕೌಂಟೆಂಟ್, ಲಾ ಆಫೀಸರ್, ಎಚ್‌.ಆರ್‌. ಆಫೀಸರ್, ಟ್ರೈನಿಂಗ್ ಆಫೀಸರ್, ಫ್ರೆಂಡ್ಲಿ ಡೆವಲಪ್‌ಮೆಂಟ್‌ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಇನ್ನು ಟ್ರೈನಿಂಗ್‌, ಟೈಪಿಸ್ಟ್ ಮತ್ತು ಸ್ಟೆನೋ, ಜೂನಿಯರ್ ಅಸಿಸ್ಟೆಂಟ್, ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಪಾವತಿಸಬೇಕು. ಪಾವತಿ ವಿಧಾನ: ಡಿಮ್ಯಾಂಡ್‌ ಡ್ರಾಫ್ಟ್‌.

ಆಯ್ಕೆ ವಿಧಾನ

ಎಲ್ಲಾ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಇರಲಿದೆ. ಹೆಚ್ಚುವರಿಯಾಗಿ ಸ್ಟೆನೋಗ್ರಾಫರ್‌ ಮತ್ತು ಚಾಲಕ ಸಿಬ್ಬಂದಿಗೆ ಪ್ರಾಯೋಗಿಕ ಪರೀಕ್ಷೆ ಇರಲಿದೆ. ಎಲ್ಲಾ ಹುದ್ದೆಗಳ ಪರೀಕ್ಷಾ ಕೇಂದ್ರ: ಬೆಂಗಳೂರು.

Application writing

KSSFCL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

“Souharda Sahakari Soudha”, #68, First Floor, 18th Cross Road, Margosa Road, Malleswaram, Bengaluru-560055.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: souharda.coopಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ: RRB Recruitment 2024: ಗುಡ್‌ನ್ಯೂಸ್‌; ಬರೋಬ್ಬರಿ 11,558 ಹುದ್ದೆ ಭರ್ತಿಗೆ ಮುಂದಾದ ರೈಲ್ವೆ ರಿಕ್ರೂಟ್‌ಮೆಂಟ್‌ ಬೋರ್ಡ್‌