ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honnegowda: ನಟ ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ ನಿಧನ

Honnegowda: 25 ವರ್ಷಗಳಿಂದ ನನ್ನೊಂದಿಗೆ ಕೆಲಸಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ್ರು ಇಂದು ಅಗಲಿದ ಸುದ್ದಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು ಎಂದು ನಟ ದರ್ಶನ್‌ ಸಂತಾಪ ಸೂಚಿಸಿದ್ದಾರೆ.

ನಟ ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ ನಿಧನ

Profile Prabhakara R May 20, 2025 3:15 PM

ಬೆಂಗಳೂರು: ನಟ ದರ್ಶನ್ ಅವರ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ (Honnegowda) ನಿಧನರಾಗಿದ್ದಾರೆ. 25 ವರ್ಷಗಳಿಂದ ದರ್ಶನ್ ಜತೆ ಇವರು ಕೆಲಸ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಹಿತಿ ಹಂಚಿಕೊಂಡಿರುವ ದರ್ಶನ್ ಅವರು, 25 ವರ್ಷಗಳಿಂದ ನನ್ನೊಂದಿಗೆ ಕೆಲಸಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ್ರು ಇಂದು ಅಗಲಿದ ಸುದ್ದಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೇಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ ಎಂದು ತಿಳಿಸಿದ್ದಾರೆ.



ದರ್ಶನ್‌, ಪವಿತ್ರಾ ಗೌಡ ಕೋರ್ಟ್‌ಗೆ ಹಾಜರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ನಡೆದಿದ್ದು, ನಟ ದರ್ಶನ್‌ ಹಾಗೂ ಅವರ ಗೆಳತಿ ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳು ಹಾಜರಾಗಿದ್ದರು. ನ್ಯಾಯಾಧೀಶ ಜೈಶಂಕರ್‌ ಅವರು ಅರ್ಜಿ ವಿಚಾರಣೆ ನಡೆಸಿದ್ದು, ಕೆಲ ಆರೋಪಿಗಳು ಕೋರ್ಟ್‌ಗೆ ಹಾಜರಾಗಿರದ ಕಾರಣಕ್ಕೆ ವಿಚಾರಣೆಯನ್ನು ಜೂನ್‌ 10 ಕ್ಕೆ ಮುಂದೂಡಲಾಯಿತು.

ಕಳೆದ ತಿಂಗಳು ನಟ ದರ್ಶನ್‌ ಅವರು ಕೋರ್ಟ್‌ಗೆ ಹಾಜರಾಗದೇ ಗೈರಾಗಿದ್ದರು. ಈ ಹಿನ್ನೆಲೆ ನ್ಯಾಯಧೀಶರು ಈ ಬಗ್ಗೆ ಆರೋಪಿ ದರ್ಶನ್‌ ಅವರನ್ನು ಪ್ರಶ್ನೆ ಮಾಡಿ ತರಾಟೆಗೆ ತೆಗದುಕೊಂಡರು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ತಪ್ಪದೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ | Anusha Rai: ‘ನಾನು ಮದುವೆ ಆಗೋ ಹುಡುಗ ದರ್ಶನ್ ಥರ ಇರಬೇಕು’ ಎಂದ ಬಿಗ್ ಬಾಸ್ ಅನುಷಾ ರೈ