ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪಾಕಿಸ್ತಾನಿ ಪ್ರಜೆಗಳಿಂದ ಸರ್ಕಾರಿ ಯೋಜನೆಗಳ ದುರುಪಯೋಗ?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಬಿಟ್ಟು ಹೋಗಲು ಆದೇಶಿಸಲಾಗಿದೆ. ಈ ನಡುವೆ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬಂದಿರುವ ಕಾರಣ ಮತ್ತು ಅದರ ಹಿಂದಿನ ಕಥೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅಟ್ಟಾರಿ ಗಡಿಯಲ್ಲಿ ಕೇಳಿಬರುತ್ತಿರುವ ಪಾಕಿಸ್ತಾನಿ ಪ್ರಜೆಗಳ ಹೊಸಹೊಸ ಕಥೆಗಳ ನಡುವೆ ಕೆಲವೊಂದು ಆಶ್ಚರ್ಯಕರ ಸಂಗತಿಗಳು ಬಹಿರಂಗವಾಗಿವೆ.

ಪಾಕಿಸ್ತಾನಿ ಪ್ರಜೆಗಳ ವೈರಲ್ ವಿಡಿಯೊದಲ್ಲಿ ಬಯಲಾಯ್ತು ಹೊಸ ಸಮಸ್ಯೆ

ನವದೆಹಲಿ: ಪಹಲ್ಗಾಮ್ (Pahalgam) ಭಯೋತ್ಪಾದಕ ದಾಳಿಯ (Terror attack) ಬಳಿಕ ಪಾಕಿಸ್ತಾನಿ ಪ್ರಜೆಗಳಿಗೆ (Pakistani National) ಭಾರತ ಬಿಟ್ಟು ಹೋಗಲು ಆದೇಶಿಸಲಾಗಿದೆ. ಈ ನಡುವೆ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬಂದಿರುವ ಕಾರಣ ಮತ್ತು ಅದರ ಹಿಂದಿನ ಕಥೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viradl Video) ಆಗುತ್ತಿವೆ. ಕೆಲವರಿಗೆ ತಮ್ಮ ದೇಶಕ್ಕೆ ಮರಳುವ ಆಸೆಯಾದರೆ, ಇನ್ನು ಕೆಲವರಿಗೆ ಹೋಗಲು ಮನಸ್ಸಿಲ್ಲ. ಮತ್ತೆ ಕೆಲವರಿಗೆ ಅನಿವಾರ್ಯ ಕಾರಣಗಳಿಗಾಗಿ ಇಲ್ಲಿಗೆ ಬಂದು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನುವ ಬೇಸರ. ಹೀಗೆ ಅಟ್ಟಾರಿ ಗಡಿಯಲ್ಲಿ ಈಗ ಪಾಕಿಸ್ತಾನಿ ಮತ್ತು ಭಾರತೀಯ ಪ್ರಜೆಗಳ ಹೊಸಹೊಸ ಕಥೆಗಳ ನಡುವೆ ಕೆಲವೊಂದು ಆಶ್ಚರ್ಯಕರ ಸಂಗತಿಗಳು ಬಹಿರಂಗವಾಗಿವೆ.

ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳುತ್ತಿರುವ ಪಾಕಿಸ್ತಾನಿಯರು ತಮ್ಮ ಕಥೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಪಾಕಿಸ್ತಾನಿ ಪ್ರಜೆ ಒಸಾಮಾ ತಮ್ಮ ಕಥೆಯನ್ನು ಹೇಳುವುದು ಹೀಗೆ...ನಾನು ಪ್ರಸ್ತುತ ಪದವಿ ಪಡೆಯುತ್ತಿದ್ದೇನೆ. ಪರೀಕ್ಷೆ ಬಳಿಕ ಉದ್ಯೋಗಕ್ಕಾಗಿ ಸಂದರ್ಶನ ನೀಡುವ ಉದ್ದೇಶ ಹೊಂದಿದ್ದೆ. ಕಳೆದ 17 ವರ್ಷಗಳಿಂದ ಇಲ್ಲೇ ಇದ್ದೇನೆ. ನಮಗೆ ಸ್ವಲ್ಪ ಸಮಯ ನೀಡುವಂತೆ ನಾನು ಸರ್ಕಾರವನ್ನು ಕೋರುತ್ತೇನೆ. ನಾನು ಇಲ್ಲಿ ಮತ ಚಲಾಯಿಸಿದ್ದೇನೆ, ನನ್ನ ಪಡಿತರ ಚೀಟಿ ಇದೆ. 10 ಮತ್ತು 12ನೇ ತರಗತಿಯನ್ನು ಇಲ್ಲಿಯೇ ಪೂರ್ಣಗೊಳಿಸಿದ್ದೇನೆ. ಅಲ್ಲಿ ಹೋಗಿ ನಾನು ಏನು ಮಾಡುವುದು, ನನ್ನ ಭವಿಷ್ಯವೇನು ಎನ್ನುವ ಚಿಂತೆ ಕಾಡುತ್ತಿದೆ ಎನ್ನುತ್ತಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಶ್ಚರ್ಯ ವ್ಯಕ್ತಪಡಿಸಿ ಒಸಾಮಾನಂತೆಯೇ ನೂರಾರು ಪಾಕಿಸ್ತಾನಿಯರು ಭಾರತದಲ್ಲಿ ವಾಸಿಸುತ್ತಿರಬಹುದು ಎಂದು ಹೇಳಿದ್ದಾರೆ. ಮತ್ತೆ ಕೆಲವರು ಒಸಾಮಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಪಾಕಿಸ್ತಾನಿಗಳು ಭಾರತದಲ್ಲಿ ಮತ ಚಲಾಯಿಸಬಹುದೇ ಎಂದು ಕೇಳಿದ್ದಾರೆ.



ಇನ್ನೊಂದು ಕಥೆಯಲ್ಲಿ ಮಧ್ಯ ಪ್ರದೇಶದ ಒಂಬತ್ತು ಮಕ್ಕಳಿಗೆ ಭಾರತೀಯ ತಾಯಿ ಮತ್ತು ಪಾಕಿಸ್ತಾನಿ ತಂದೆ ಇದ್ದಾರೆ ಎನ್ನುವುದು ಬಹಿರಂಗವಾಗಿದೆ. ಇದರಿಂದ ಪೊಲೀಸರು ಮಧ್ಯ ಪ್ರದೇಶ ಸರ್ಕಾರ ಮತ್ತು ಗೃಹ ಸಚಿವಾಲಯದಿಂದ ಮಕ್ಕಳ ಭವಿಷ್ಯದ ಕುರಿತು ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಇದು ಪಾಕಿಸ್ತಾನಿ ಭಯೋತ್ಪಾದನೆಯ ಹೊಸ ಮುಖ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಐದು ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ಮಹಿಳೆಯರು ತಮ್ಮ ವಿವಾಹದ ಅನಂತರ ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರು ಇನ್ನು ಭಾರತೀಯ ಪೌರತ್ವವನ್ನು ಪಡೆದಿಲ್ಲ. ಇದು ಪಾಕಿಸ್ತಾನಿ ಭಯೋತ್ಪಾದನೆಯ ಹೊಸ ಮುಖ. ಒಳಗೆ ಪ್ರವೇಶಿಸಿದ ಈ ಶತ್ರುಗಳ ವಿರುದ್ಧ ಹೇಗೆ ಹೋರಾಡುವುದು ಎಂದು ಪ್ರಶ್ನಿಸಿದ್ದಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಹಲವಾರು ಮಂದಿ ಪಾಕಿಸ್ತಾನಿ ಪ್ರಜೆಗಳು ಹಿಂತಿರುಗುವ ವೇಳೆ ತಮ್ಮ ಕಷ್ಟವನ್ನು ವಿವರಿಸುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.



ಒಬ್ಬ ಬಳಕೆದಾರರು ಅಟ್ಟಾರಿ ಗಡಿಯಲ್ಲಿ ಕಣ್ಣೀರು ಸುರಿಸುತ್ತಿರುವ ಮಹಿಳೆಯ ವಿಡಿಯೊವನ್ನು ಹಂಚಿಕೊಂಡಿದ್ದು, ಪಾಕಿಸ್ತಾನಿ ಪತಿ ತನ್ನ ಕರೆಗಳಿಗೆ ಉತ್ತರಿಸುತ್ತಿಲ್ಲ. ಮೂವರು ಮಕ್ಕಳಿದ್ದಾರೆ. ಮಕ್ಕಳನ್ನು ಕರೆದುಕೊಂಡು ಹೋಗಲು ಯಾರೂ ಬರುತ್ತಿಲ್ಲ. ಮದುವೆಯಾಗಿ 10 ವರ್ಷಗಳಾಗಿವೆ. ಇಲ್ಲಿ ಉಚಿತ ಆರೋಗ್ಯ ರಕ್ಷಣೆ, ಪಡಿತರ ಮತ್ತು ಸರ್ಕಾರಿ ಯೋಜನೆಗಳನ್ನು ಪಡೆಯಲು ಭಾರತೀಯ ಪಾಸ್‌ಪೋರ್ಟ್ ಹೊಂದಿರುವುದಾಗಿ ಹೇಳಿದ್ದಾರೆ.

ಇದಕ್ಕೆ ಅನೇಕರು ಕಾಮೆಂಟ್ ಮಾಡಿ ಭಾರತೀಯ ನಾಗರಿಕರಿಗಾಗಿ ಇರುವ ಸರ್ಕಾರದ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Terrorist attack: 1971ರ ಭಾರತ-ಪಾಕ್‌ ಯುದ್ಧದ ಸಂದರ್ಭದಲ್ಲಿ ತಾಜ್‌ಮಹಲನ್ನು ಹೇಗೆ ರಕ್ಷಣೆ ಮಾಡಲಾಗಿತ್ತು ಗೊತ್ತೆ?

ನಿಯಮ ಏನು ಹೇಳಿದೆ?

ಭಾರತ ಚುನಾವಣಾ ಆಯೋಗವು ಸ್ವೀಪ್‌ನಡಿಯಲ್ಲಿ ವಿದೇಶಿ ಮತದಾರರಿಗೆ ಮತದಾನ ಮಾಡುವ ಪ್ರಕ್ರಿಯೆಯನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಸಾಗರೋತ್ತರ ಪೌರತ್ವ ಪಡೆದಿರುವವರಿಗೆ ಮತದಾನದ ಅಧಿಕಾರದ ಬಗ್ಗೆ ಹೇಳಲಾಗಿದೆ.

2005ರ ಪೌರತ್ವ ಕಾಯ್ದೆಯಡಿ 1950ರ ಜನವರಿ 26ರಂದು ಅಥವಾ ನಂತರ ಭಾರತದ ನಾಗರಿಕರಾಗಿದ್ದ ಅಥವಾ ಭಾರತದ ನಾಗರಿಕರಾಗಲು ಅರ್ಹರಾಗಿರುವ ಎಲ್ಲ ಭಾರತೀಯ ಮೂಲದ ವ್ಯಕ್ತಿಗಳು ಭಾರತದ ಸಾಗರೋತ್ತರ ನಾಗರಿಕರಾಗಿ (OCI) ನೋಂದಾಯಿಸಿಕೊಳ್ಳಬಹುದು. ಆದರೆ ಈ ಯೋಜನೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದ ಇತರ ದೇಶದ ನಾಗರಿಕರನ್ನು ಹೊರಗಿಡಲಾಗಿದೆ. ಹೀಗಾಗಿ ಕೆಲವು ದೇಶಗಳ ಪ್ರಜೆಗಳು ಭಾರತದ ಸಾಗರೋತ್ತರ ನಾಗರಿಕರಾಗಿದ್ದರೂ ಇಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ. ಅಲ್ಲದೇ ಅಧ್ಯಕ್ಷರು, ಉಪಾಧ್ಯಕ್ಷರು, ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಇತರ ನ್ಯಾಯಾಲಯಗಳ ನ್ಯಾಯಾಧೀಶರಂತಹ ಭಾರತೀಯ ಸಾಂವಿಧಾನಿಕ ಹುದ್ದೆಗಳನ್ನು ಹೊಂದಲು ಸಾಧ್ಯವಿಲ್ಲ. ಇವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಕೂಡ ಅವಕಾಶವಿಲ್ಲ.

ಒಸಿಐ ಕಾರ್ಡ್ ಹೊಂದಿರುವವರು ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ, ಭಾರತ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಮಿಷನರಿ ಕೆಲಸ, ಪರ್ವತಾರೋಹಣ ಮತ್ತು ಪತ್ರಿಕೋದ್ಯಮ ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರವು ಸೂಚಿಸಿದ ಸಂರಕ್ಷಿತ ಅಥವಾ ನಿರ್ಬಂಧಿತ ಪ್ರದೇಶದೊಳಗೆ ಇವರು ಭೇಟಿ ನೀಡಲು ಪರವಾನಗಿ ಪಡೆಯುವುದು ಅತ್ಯಗತ್ಯವಾಗಿದೆ.