ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ನಾಲೆಡ್ಜಿಎಂ ಅಕಾಡೆಮಿಯಿಂದ "ಟ್ರಾನ್ಸೆಂಡೆನ್ಸ್ 2025" ಕಾರ್ಯಕ್ರಮ ಆಚರಣೆ

ಭಾರತೀಯ ಖಗೋಳ ವಿಜ್ಞಾನ ಸಂಸ್ಥೆಯ ಮತ್ತು ಇಂಡಿಯಾ TMT ಕೇಂದ್ರದ ಹಿರಿಯ ವಿಜ್ಞಾನಿಯಾದ ಡಾ.ರಾಮ್ಯಾ ಸೇತುರಾಮ್ ಅವರ ಭಾಷಣವು ವಿದ್ಯಾರ್ಥಿಗಳ ಅನ್ವೇಷಣಾ ಪ್ರಯಾಣಕ್ಕೆ ಪ್ರೇರಣೆ ಯಾಯಿತು. ಅಲ್ಲದೇ ಈ ಹಿರಿಯ ವಿಜ್ಞಾನಿಯು ಭಾರತ ಮಾತ್ರವಲ್ಲದೇ, ಚೀನಾ ಮತ್ತು ಫ್ರಾನ್ಸ್ನಲ್ಲಿ ಕೂಡ ಅವರ ಕಾರ್ಯ ಕ್ಷೇತ್ರವಾದ ಖಗೋಳಶಾಸ್ತ್ರದಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ

ನಾಲೆಡ್ಜಿಎಂ ಅಕಾಡೆಮಿಯಿಂದ "ಟ್ರಾನ್ಸೆಂಡೆನ್ಸ್ 2025" ಕಾರ್ಯಕ್ರಮ ಆಚರಣೆ

Profile Ashok Nayak Apr 28, 2025 12:37 AM

ಬೆಂಗಳೂರಿನ ಪ್ರಮುಖ ಐಬಿ ವಿಶ್ವ ಶಾಲೆಗಳಲ್ಲಿ ಒಂದಾದ ನಾಲೆಡ್ಜಿಎಂ ಅಕಾಡೆಮಿ, 2023-2025ರ ಸಾಲಿನ ಐಬಿಡಿಪಿ (IBDP) ಸಮೂಹದ ಪದವಿ ಪ್ರದಾನ ಸಮಾರಂಭವನ್ನು ಜಯನಗರದ ವಿವೇಕಾ ಆಡಿಟೋರಿಯಂನಲ್ಲಿ ಭವ್ಯವಾಗಿ ಆಯೋಜಿಸಿತು. "ಟ್ರಾನ್ಸೆಂಡೆನ್ಸ್ 2025" ಎಂಬ ಈ ಕಾರ್ಯ ಕ್ರಮವು ಒಂದು ಅಧ್ಯಾಯದ ಅಂತ್ಯವಲ್ಲದೆ, ಹೊಸ ಪ್ರಯಾಣದ ಪ್ರಾರಂಭವನ್ನೂ ಸೂಚಿಸಿತು. ಈ ವರ್ಷದ ಥೀಮ್ "ಪ್ರಾರಂಭದ ಹಂತದಿಂದ ರೂಪಾಂತರ" ಎಂಬುದು ಶಿಕ್ಷಣವು ನಿರಂತರ ಬೆಳವಣಿಗೆ, ಕುತೂಹಲ ಮತ್ತು ಉದ್ದೇಶಪೂರ್ಣ ಪ್ರಯಾಣ ಎಂಬ ನಾಲೆಡ್ಜಿಎಂ ಅಕಾಡೆಮಿಯ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ಐಬಿ ಡಿಪ್ಲೊಮಾ ಪ್ರೋಗ್ರಾಂನ ಮೂಲತತ್ವಗಳೊಂದಿಗೆ ಹೊಂದಾಣಿಕೆಯಾಗಿದೆ – ವಿದ್ಯಾರ್ಥಿಗಳು ಆಳವಾಗಿ ಅನ್ವೇಷಿಸಲು, ಸ್ವತಂತ್ರವಾಗಿ ಚಿಂತಿಸಲು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಲು ಪ್ರೋತ್ಸಾಹ ನೀಡುತ್ತದೆ.

ಇದನ್ನೂ ಓದಿ: Grater Bangalore: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ಆಗಮಿಸಿದ್ದ ಭಾರತೀಯ ಖಗೋಳ ವಿಜ್ಞಾನ ಸಂಸ್ಥೆಯ ಮತ್ತು ಇಂಡಿಯಾ TMT ಕೇಂದ್ರದ ಹಿರಿಯ ವಿಜ್ಞಾನಿಯಾದ ಡಾ.ರಾಮ್ಯಾ ಸೇತುರಾಮ್ ಅವರ ಭಾಷಣವು ವಿದ್ಯಾರ್ಥಿಗಳ ಅನ್ವೇಷಣಾ ಪ್ರಯಾಣಕ್ಕೆ ಪ್ರೇರಣೆಯಾಯಿತು. ಅಲ್ಲದೇ ಈ ಹಿರಿಯ ವಿಜ್ಞಾನಿಯು ಭಾರತ ಮಾತ್ರವಲ್ಲದೇ, ಚೀನಾ ಮತ್ತು ಫ್ರಾನ್ಸ್ನಲ್ಲಿ ಕೂಡ ಅವರ ಕಾರ್ಯ ಕ್ಷೇತ್ರವಾದ ಖಗೋಳಶಾಸ್ತ್ರದಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕಿ ಅಪರ್ಣಾ ಪ್ರಸಾದ್ ಮಾತನಾಡುತ್ತಾ "ಟ್ರಾನ್ಸೆಂಡೆನ್ಸ್ ಕಾರ್ಯಕ್ರಮವು ಕೇವಲ ಶೈಕ್ಷಣಿಕ ಯಶಸ್ಸಿನ ಬಗ್ಗೆ ಮಾತ್ರ ಅಲ್ಲ – ಇದು ಸ್ಥೈರ್ಯ ಮತ್ತು ಪುನರ್ನವೀಕರಣಕ್ಕೆ ನಾಂದಿಯೂ ಸಹ ಹೌದು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ನಾಯಕತ್ವ ಹಸ್ತಾಂತರ (ಹಿರಿಯರಿಂದ ಕಿರಿಯರಿಗೆ), ವಾರ್ಷಿಕ ಪುಸ್ತಕ ಬಿಡು ಗಡೆ ಮತ್ತು ಸಂಗೀತ ಪ್ರದರ್ಶನ ಮತ್ತು 2024ರಲ್ಲಿ 81.25% ಪಾಸ್ ಪ್ರಮಾಣ ಮತ್ತು 39/45 ಅಂಕ ಗಳ (ಅತ್ಯುತ್ತಮ ಸಾಧನೆ) ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

2024ರಲ್ಲಿ ನಾಲೆಡ್ಜಿಎಂ ಅಕಾಡೆಮಿಯ ವಿದ್ಯಾರ್ಥಿಗಳು ಜಾಗತಿಕ ಐಬಿ ಸರಾಸರಿಗಿಂತ ಮೇಲುಗೈ ಸಾಧಿಸಿ ದ್ದಾರೆ. ಹಲವರು ಅಮೆರಿಕಾ, ಯುಕೆ, ಸ್ವಿಟ್ಜರ್ಲ್ಯಾಂಡ್ ಮತ್ತು ಭಾರತದ ಪ್ರತಿಷ್ಠಿತ ಸಂಸ್ಥೆ ಗಳಲ್ಲಿ ಮುಂಚಿತ ಪ್ರವೇಶ ಪಡೆದಿದ್ದಾರೆ.