ಪಹಲ್ಗಾಮ ಉಗ್ರರ ಕುಕೃತ್ಯವನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ : ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರಳಿ
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ರಕ್ಷಣಾ ಇಲಾಖೆಯ ವೈಫಲ್ಯ.ಪಾಕಿಸ್ಥಾನದ ಮೇಲೆ ಯುದ್ದ ಅನಿವಾರ್ಯವಲ್ಲ ಎಂದು ಹೇಳಿಕೆ ನೀಡಿರುವುದು ಗಡಿಯಲ್ಲಿರುವ ನಮ್ಮ ಯೋಧರ ಆತ್ಮಸ್ತೈರ್ಯವನ್ನು ಕುಗ್ಗಿಸುವಂತಿದೆ.ಈವಿಚಾರ ಪಾಕಿಸ್ಥಾನದ ಟಿ.ವಿ.ಮಾಧ್ಯಮಗಳಲ್ಲಿ ಕೂಡ ಬಿತ್ತರ ವಾಗಿರುವುದು ಭಾರತೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಜವಾಬ್ದಾರಿ ಯುತ ಸ್ಥಾನದಲ್ಲಿ ರುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರುಳಿ ಮಾತನಾಡಿದರು.

ಚಿಕ್ಕಬಳ್ಳಾಪುರ : ಏ.೨೨ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಎಂಬ ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾಧಕ ಉಗ್ರರು ೨೬ ನಾಗರೀಕರನ್ನು ಗುಂಡಿಕ್ಕಿ ಕೊಲೆ ಮಾಡಿರುವ ಕುಕೃತ್ಯವನ್ನು ಬಿಜೆಪಿ ಜಿಲ್ಲಾ ಘಟಕವು ಉಗ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರುಳಿ ತಿಳಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಭಾರತದ ಮುಕುಟದಂತಿರುವ ಕಾಶ್ಮೀರ ಕಣಿವೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಿಂದ ಭಾರತವು ಶೋಕಸಾಗರದಲ್ಲಿ ಮುಳುಗಿದೆ.ಭಯೋತ್ಪಾದಕರು ಪ್ರವಾಸಿಗರ ೨೬ ಮೇಲೆ ಕ್ರೂರವಾಗಿ ದಾಳಿಸಿದ್ದಾರೆ.ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಆಯುಧ ಹಿಡಿದು ಬಂದ ಉಗ್ರರು ಹಿಂದೂ ಧರ್ಮೀಯರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿರುವುದು ಅಕ್ಷಮ್ಯ.ಈ ಕುಕೃತ್ಯ ವನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಮತ್ತು ದಾಳಿಕೋರರಿಗೆ ಕ್ರೂರ ಶಿಕ್ಷೆ ನೀಡುವಂತೆ ಕೇಂದ್ರಸರಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
ಈ ವಿಚಾರದಲ್ಲಿ ನಮ್ಮ ಪ್ರಧಾನಮಂತ್ರಿ, ರಕ್ಷಣಾ ಮಂತ್ರಿ ಮತ್ತು ಗೃಹ ಮಂತ್ರಿ ಮತ್ತು ಸೈನಿಕರು ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನು ನಾವು ಬೆಂಬಲಿಸುತ್ತೇವೆ. ಸದಾಕಾಲ ಹೆಮ್ಮೆಯ ಪ್ರಧಾನಿಗಳೊಟ್ಟಿಗೆ ನಾವು ನಿಲ್ಲುತ್ತೇವೆ ಎಂದು ಘೋಷಿಸಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇದು ರಕ್ಷಣಾ ಇಲಾಖೆಯ ವೈಫಲ್ಯ.ಪಾಕಿಸ್ಥಾನದ ಮೇಲೆ ಯುದ್ದ ಅನಿವಾರ್ಯವಲ್ಲ ಎಂದು ಹೇಳಿಕೆ ನೀಡಿರುವುದು ಗಡಿಯಲ್ಲಿರುವ ನಮ್ಮ ಯೋಧರ ಆತ್ಮಸ್ತೈರ್ಯವನ್ನು ಕುಗ್ಗಿಸುವಂತಿದೆ.ಈವಿಚಾರ ಪಾಕಿಸ್ಥಾನದ ಟಿ.ವಿ.ಮಾಧ್ಯಮ ಗಳಲ್ಲಿ ಕೂಡ ಬಿತ್ತರವಾಗಿರುವುದು ಭಾರತೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಜವಾಬ್ದಾರಿ ಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
೭೮ ವರ್ಷದ ಸ್ವತಂತ್ರ ಭಾರತದಲ್ಲಿ ನಮ್ಮ ದೇಶದ ಸೈನಿಕರು ಭಯೋತ್ಪಾಧಕರ ಜತೆ ಸೆಣಸಿ ಪ್ರಾಣಾರ್ಪಣೆ ಮಾಡಿದಷ್ಟು, ನಿತ್ಯವೂ ಹೋರಾಟ ಮಾಡುತ್ತಿರುವಷ್ಟು ಪರಿಸ್ಥಿತಿ ವಿಶ್ವದ ಯಾವ ದೇಶದ ಸೈನಿಕರೂ ಕಂಡಿಲ್ಲ.ಆದರೂ ಸಹ ನಮ್ಮ ಸೇನೆಯ ಸೈನಿಕರು ದೃಢವಿಶ್ವಾಸದಿಂದ ನಕ್ಸಲ್ರೊಂದಿಗೋ,ಪ್ರತ್ಯೇಕತಾವಾದಿಗಳೊಟ್ಟಿಗೆ,ಉಗ್ರವಾದಿಗಳೊಟ್ಟಿಗೆ, ಈಶಾನ್ಯ ರಾಜ್ಯಗಳ ಬಂಡಾಯದೊಟ್ಟಿಗೆ ಸೆಣಸಾಟ ನಡೆಸಿ ಹತರಾಗುತ್ತಿರುವ ಘಟನೆಗಳನ್ನು ನಾವು ಕಾಣುತ್ತಿದ್ದೇವೆ. ಇಂತಹ ವಿರೋಚಿತ ಹೋರಾಟ ನಡೆಸುತ್ತಿರುವ ಸೈನಿಕರಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ರಾಜಕೀಯ ಮುಖಂಡರು ಮಾಡಬೇಕು.ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ಕೊಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.
ಶಾಸಕರು ಸಂಸದರು ಧರ್ಮಾತೀತವಾಗಿ ಪಕ್ಷಾತೀತವಾಗಿ ಈ ಘಟನೆಯನ್ನು ಖಂಡಿಸಬೇಕು ಎಂದು ಮನವಿ ಮಾಡುತ್ತಾ,ಕಾಶ್ಮೀರದ ವಿಚಾರದಲ್ಲಿ ಪ್ರಧಾನಿಗಳಿಗೆ ಸ್ಪಷ್ಟವಾದ ನಿಲುವಿದೆ.ಎಲ್ಲರೂ ಕೂಡಿ ಅವರ ತೀರ್ಮಾನಕ್ಕೆ ಬೆಲೆ ನೀಡಿ ಅವರ ಜತೆ ನಿಲ್ಲೋಣ ಎಂದು ಮನವಿ ಮಾಡಿದರು.
ಇದೇ ವೇಳೆ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎ.ಬಿ. ಬೈರೇಗೌಡ, ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣಗುಪ್ತ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ಶಿಕ್ಷಕರ ಪ್ರಕೋಷ್ಠ ರಾಜ್ಯ ಸದಸ್ಯ ನರಸಪ್ಪ, ಯುವ ಮುಖಂಡ ಲೋಕೇಶ್ಗೌಡ,ಅ ಲ್ಪಸಂಖ್ಯಾತರ ಮೋರ್ಚ ಯೂನಿಸ್ ಇದ್ದರು.