ಬಂಡಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲದ ಗೋಡೆ ಧ್ವಂಸ : ಕಿಡಿಗೇಡಿಗಳ ಬಂಧನಕ್ಕೆ ಗ್ರಾಮಸ್ಥರ ಆಗ್ರಹ
ಬಾಬಾ ಸಾಹೇಬ ಅಂಬೇಡ್ಕರ್ ನೀಡಿರುವ ಸಂವಿಧಾನದ ಫಲವಾಗಿ ದೇಶವು ಅಭಿವೃದ್ಧಿಯತ್ತ ಸಾಗು ತ್ತಿದ್ದರೆ, ಗ್ರಾಮ ಭಾರತದಲ್ಲಿ ಜಾತಿಯ ಅಟ್ಟಹಾಸ, ಅಂಬೇಡ್ಕರ್ ಪುತ್ಥಳಿಗೆ ಅಪಮಾನ,ದಲಿತ ಶೋಷಿತ ಸಮುದಾ ಯಗಳ ಮೇಲೆ ನಿರಂತರ ದಬ್ಬಾಳಿಕೆಯನ್ನು ಮೇಲ್ವರ್ಗಗಳು ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
![ಸ್ಥಳಕ್ಕೆ ನಂದಿ ಪೊಲೀಸರ ಭೇಟಿ, ಪರಿಶೀಲನೆ: ಕಿಡಿಗೇಡಿಗಳ ಬಂಧಿಸುವ ಭರವಸೆ](https://cdn-vishwavani-prod.hindverse.com/media/original_images/namaphalaka.jpg)
ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ 40 ವರ್ಷಗಳಿಂದ ಇದ್ದ ಅಂಬೇಡ್ಕರ್ ಭಾವಚಿತ್ರವಿದ್ದ ಗೋಡೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಚಿತ್ರ.
![Profile](https://vishwavani.news/static/img/user.png)
ಚಿಕ್ಕಬಳ್ಳಾಪುರ : ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಬಂಡಹಳ್ಳಿ ಗ್ರಾಮದಲ್ಲಿ ಯಾರೋ ಕಿಡಿ ಗೇಡಿಗಳು ಅಂಬೇಡ್ಕರ್ ನಾಮಫಲಕ ಮತ್ತು ಭಾವಚಿತ್ರವುಳ್ಳ ಗೋಡೆಯನ್ನು ಯಾರೋ ಕಿಡಿಗೇಡಿ ಗಳು ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರಲ್ಲದೆ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿ ಆಕ್ರೋಶವನ್ನು ಹೊರ ಹಾಕಿದರು. ತಾಲೂಕಿನ ಮುದ್ದೇನಹಳ್ಳಿ ಸಮೀಪದ ದಲಿತರೇ ಹೆಚ್ಚಿರುವ ಬಂಡಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಒಂದು ರೀತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಣ ಇಲ್ಲಿ 40 ವರ್ಷಗಳ ಹಿಂದೆ ನಿರ್ಮಿಸಿದ್ದ ಅಂಬೇಡ್ಕರ್ ಭಾವಚಿತ್ರವಿದ್ದ ನಾಮಫಲಕದ ಗೋಡೆಯನ್ನು ಯಾರೋ ಕಿಡಿಗೇಡಿ ಗಳು ಉದ್ದೇಶಪೂರ್ವಕವಾಗಿ ಧ್ವಂಸಗೈದು ವಿಕೃತಿ ಮೆರೆಯುವ ಮೂಲಕ ಅಶಾಂತಿಗೆ ಕಾರಣ ವಾಗಿದ್ದಾರೆ. ದೇಶದೆಲ್ಲೆಡೆ ಸಂವಿಧಾನ ಉಳಿಸಿ ಜಾಥಾ ಭರ್ಜರಿಯಾಗಿ ನಡೆದಿದ್ದು ರಾಜ್ಯ ಸರಕಾರ ಕೂಡ ಇದಕ್ಕೆ ದನಿಗೂಡಿಸಿದೆ. ಇಂತಹ ಹೊತ್ತಿನಲ್ಲಿ ಈರೀತಿಯ ಘಟನೆ ಮಾಡಿರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Chikkaballapur News: ಚಿಂತಾಮಣಿಯ ಅತಿಥಿ ಉಪನ್ಯಾಸಕ ಎಂ.ನರಸಿಂಹಪ್ಪ ಸಾವು: ಜಿಲ್ಲಾ ಸಂಘ ತೀವ್ರ ಸಂತಾಪ
ಗೃಹಸಚಿವ ಡಾ.ಜಿ.ಪರಮೇಶ್ವರ್ ಸತ್ಯಸಾಯಿಗ್ರಾಮಕ್ಕೆ ಭೇಟಿ ನೀಡುವ ದಿನವೇ ಅಂಬೇಡ್ಕರ್ ನಾಮ ಫಲಕದ ಗೋಡೆಯನ್ನು ಧ್ವಂಸಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದ್ದು ಈ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಎತ್ತಿ ತೋರಿಸಿದೆ. ಬಾಬಾ ಸಾಹೇಬ ಅಂಬೇಡ್ಕರ್ ನೀಡಿರುವ ಸಂವಿಧಾನದ ಫಲವಾಗಿ ದೇಶವು ಅಭಿವೃದ್ಧಿಯತ್ತ ಸಾಗುತ್ತಿದ್ದರೆ, ಗ್ರಾಮ ಭಾರತದಲ್ಲಿ ಜಾತಿಯ ಅಟ್ಟಹಾಸ, ಅಂಬೇಡ್ಕರ್ ಪುತ್ಥಳಿಗೆ ಅಪಮಾನ,ದಲಿತ ಶೋಷಿತ ಸಮುದಾ ಯಗಳ ಮೇಲೆ ನಿರಂತರ ದಬ್ಬಾಳಿಕೆಯನ್ನು ಮೇಲ್ವರ್ಗಗಳು ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಬಂಡಹಳ್ಳಿ ಗ್ರಾಮಸ್ಥ ನಾಗರಾಜು ಭಾನುವಾರ ಬೆಳ್ಳಂಬೆಳಿಗ್ಗೆ ಸಂವಿ ಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್‌ಗೆ ಮಾಡುವ ಅಪಮಾ£ವೀ ದೇಶದ ನಾಗರೀಕ ಸಮಾಜಕ್ಕೆ ಮಾಡುವ ಅಪಮಾನವೆಂದರೆ ತಪ್ಪಾಗಲ್ಲ.ಇಲ್ಲಿರುವ ಸಕಲೆಂಟು ಜಾತಿ,ಜನಾಂಗ, ಧರ್ಮಗಳವರು ಅಂಬೇಡ್ಕರ್ ಬರೆದ ಸಂವಿಧಾನದಿAದ ಲಾಭಪಡೆದುಕೊಂಡವರೇ ಆಗಿದ್ದಾರೆ. ಆದರೂ ಕತಘ್ನರಾಗಿ ಉಂಡಮನೆಯ ಗಳಯಿರಿದಂತೆ ಅವರ ಭಾವಚಿತ್ರಕ್ಕೆ, ಪುತ್ಥಳಿಗೆ ಅಪಮಾನ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಇಂತಹ ದುಷ್ಕೃತ್ಯ ಎಸಗಿರುವ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ನಾಗರೀಕ ಬಂಡಹಳ್ಳಿ ರಾಜಣ್ಣ ಮಾತನಾಡಿ 40 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಅಂಬೇ ಡ್ಕರ್ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ದಲಿತ ಸಮುದಾಯ ಅವರನ್ನು ಆರಾಧಿಸುತ್ತಾ ಬಂದಿದ್ದೇವೆ. ಈವರೆಗೆ ಎಂದೂ ಕೂಡ ಇದಕ್ಕೆ ಅಪಮಾನವಾಗುವಂತಹ ಕೆಲಸ ನಡೆದಿರಲಿಲ್ಲ. ಭಾನುವಾರ ಬೆಳಿಗ್ಗೆ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿ ಬಲವಾಗಿ ಕಲ್ಲು ಮತ್ತು ಇಟ್ಟಿಗೆ ಗಳಿಂದ ನಿರ್ಮಿ ಸಿದ್ದ ಅಂಬೇಡ್ಕರ್ ಭಾವಚಿತ್ರವಿದ್ದ ಗೋಡೆಯನ್ನೇ ಉದ್ದೇಪೂರ್ವಕವಾಗಿ ನಾಶ ಮಾಡಿ ನಮ್ಮ ಮನಸ್ಸಿಗೆ ನೋವುಂಟು ಮಾಡಿದ್ದಾರೆ.ಗ್ರಾಮದ ಶಾಂತಿಯನ್ನು ಕದಡಿದ್ದಾರೆ. ಅವರು ಯಾರೇ ಆಗಿರಲಿ ಎಷ್ಟೇ ದೊಡ್ಡವರಿರಲಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸ ಬೇಕು ಎಂದು ಆಗ್ರಹಿಸಿದರು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ನಂದಿಗಿರಿಧಾಮ ಪೊಲೀಸರು ಸ್ಥಳ ಮಹಜರು ನಡೆಸಿದ್ದು ಈ ದುಷ್ಕೃತ್ಯ ಎಸಗಿರುವ ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಪ್ರತಿಭಟನೆ ವಾಪಸ್ಸು ಪಡೆದರು.
ಪ್ರತಿಭಟನೆಯಲ್ಲಿ ಬಿ.ಜಿ.ನಾಗರಾಜ್,ಬ್ಯಾಂಕ್ ವೆಂಕಟೇಶ್, ಶಶಿಕುಮಾರ್.ಬಿ.ಎಂ. ಶ್ರೀಕಾಂತ್, ರಾಜಪ್ಪ, ಗಂಗಾಧರಪ್ಪ, ಸೂರಜ್, ಪವನ್, ಗಂಗರಾಜು, ನಾಗರಾಜ್ , ಅಮರ್, ಅಂಬರೀಶ್ ಸೇರಿದಂತೆ ಬಂಡಹಳ್ಳಿ ಗ್ರಾಮಸ್ಥರು ಭಾಗಿಯಾಗಿದ್ದರು.