Chikkaballapur News: ಆಯುಕ್ತರ ಆದೇಶವನ್ನು ಗಾಳಿಗೆ ತೂರಿ ಅಡುಗೆದಾರನಿಗೆ ವಾರ್ಡನ್ ಮಾಡಿದ ಜಿಲ್ಲಾ ಅಧಿಕಾರಿ
ಮಹಬೂಬ್ ಪಾಷಾ ನಿಲಯ ಪಾಲಕರು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ (BCWD-1753) ಚಿನ್ನಸಂದ್ರ ಚಿಂತಾಮಣಿ, ಹೆಚ್ಚುವರಿಯಾಗಿ ನಿಲಯ ಮೇಲ್ವಿಚಾರಕರ ಪ್ರಭಾರ ವನ್ನು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ(BCWD-300) ಚಿಂತಾಮಣಿ ಇಲ್ಲಿಗೆ ನಿಯೋಜಿಸಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.


ಚಿಂತಾಮಣಿ: 2022ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಗ್ರೂಪ್ ಡಿ(ಅಡುಗೆದಾರರು ಹಾಗೂ ಅಡುಗೆ ಸಹಾಯಕರು)ಸಿಬ್ಬಂದಿಗಳಿಗೆ ವಹಿಸಿರುವ ವಿದ್ಯಾರ್ಥಿ ನಿಲಯಗಳ ನಿಲಯ ಮೇಲ್ವಿಚಾರಕರ ಹುದ್ದೆಗಳ ಪ್ರಭಾರವನ್ನು ಕೂಡಲೇ ರದ್ದುಪಡಿಸಲು ಉಲ್ಲೇಖಿತ ಸುತ್ತೊಲೆಯಲ್ಲಿ ಆಯುಕ್ತರು ಸೂಚಿಸಿರುತ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿ ಕಾರಿ ಆದೇಶವನ್ನು ಧಿಕ್ಕರಿಸಿ ಅಡುಗೆದಾರರಿಗೆ ವಾರ್ಡನ್ ಆಗಿ ನೇಮಕ ಮಾಡಿ ಆಯುಕ್ತರ ಆದೇಶವನ್ನು ಗಾಳಿಗೆ ತೂರಿರುವ ಆರೋಪವೊಂದು ಕೇಳಿ ಬಂದಿದೆ.
ಇದನ್ನೂ ಓದಿ: Chikkaballapur News: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಹತ್ತಿಕ್ಕಲ್ಪಡುತ್ತಿರುವುದು ಆತಂಕಕಾರಿ ಸಂಗತಿ
ಮಹಬೂಬ್ ಪಾಷಾ ನಿಲಯ ಪಾಲಕರು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ (BCWD-1753) ಚಿನ್ನಸಂದ್ರ ಚಿಂತಾಮಣಿ, ಹೆಚ್ಚುವರಿಯಾಗಿ ನಿಲಯ ಮೇಲ್ವಿಚಾರಕರ ಪ್ರಭಾರವನ್ನು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ(BCWD-300) ಚಿಂತಾಮಣಿ ಇಲ್ಲಿಗೆ ನಿಯೋಜಿಸಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಆದರೆ ಇವರ ಈ ಪ್ರಭಾರವನ್ನು ರದ್ದು ಮಾಡಿ ವೈ ಎನ್ ಮಂಜುನಾಥ್ ಅಡುಗೆಯವರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ (BCWD-299) ಚೀಲಕಲನೇರ್ಪು ಇವರಿಗೆ ಪ್ರಭಾರ ಮೇಲ್ವಿಚಾರಕರಾಗಿ ನಿಯೋಜಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಇದನ್ನೆಲ್ಲಾ ನೋಡಿದ್ರೆ ಸ್ಪಷ್ಟವಾಗಿ ಆಯುಕ್ತರ ಆದೇಶ ವನ್ನು ಗಾಳಿಗೆ ತೂರಿರುವುದು ಕಂಡು ಬರುತ್ತಿದೆ.
ಯಾವುದೇ ಅರ್ಹತೆ ಇಲ್ಲದಿದ್ರು, ಅಡಿಗೆ ಮಾಡುವವರಿಗೆ ಪ್ರಭಾರ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಪ್ರಶ್ನೆಯಾಗಿ ಉಳಿಯುತ್ತಿದೆ.
ಇನ್ನೂ ಈ ಕುರಿತು ಜಿಲ್ಲೆಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನೆಮಾಡಿದ್ರು. ಯಾವುದೇ ಉತ್ತರ ನೀಡದೆ ಮೌನ ವಹಿಸುತ್ತಿರುವುದು ಮತ್ತೊಂದು ಕಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೂ ಸಿಇಒ ನೇತೃತ್ವದಲ್ಲಿ ಹೆಚ್ಚುವರಿಯಾಗಿ ಪ್ರಭಾರ ನೀಡಬಹುದು ಎಂದು ತಾಲೂಕಿನ ವಿಸ್ತೀರ್ಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಆದರೆ ಯಾವ ಆಧಾರದಲ್ಲಿ ಮಂಜುನಾಥ್ ಎಂಬುವವರಿಗೆ ಅಧಿಕಾರ ವಹಿಸಿಕೊಟ್ಟಿದ್ದಾರೆ ಎಂಬುವುದು ಪ್ರಶ್ನೆಯಾಗಿ ಉಳಿದಿದೆ.
ಇನ್ನೂ ಪ್ರತಿನಿತ್ಯ ಹಲವಾರು ಕಡತಗಳಲ್ಲಿ ವಿಲೇವಾರಿ,ಖರೀದಿ ಸೇರಿದಂತೆ ಮತ್ತಿತ್ತರ ವಿಚಾರಗಳ ಬಗ್ಗೆ ಮಾಹಿತಿ ಬರೆಯಬೇಕಾಗುತ್ತದೆ.ಆದರೆ ಇವರಿಗೆ ಸಹಿಯೂ ಸಹಾ ಬರೆ ಯಲು ಬರುವುದಿಲ್ಲಾ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಾರೆ ಎಂಬುವುದು ಪ್ರತ್ಯಕ್ಚದರ್ಶಿ ಗಳ ಮಾಹಿತಿಯಾಗಿದೆ.