#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಜನಸೇವೆ ಮಾಡಲು ಅಧಿಕಾರಕ್ಕಿಂತ ಒಳ್ಳೆಯ ಮನಸ್ಸಿದ್ದರೆ ಸಾಕು : ಸಂದೀಪ್‌ಬಿ.ರೆಡ್ಡಿ ಅಭಿಮತ

ನಾನು ಕ್ಷೇತ್ರದ ಜನರೊಟ್ಟಿಗೆ ಇರಲು ಬಯಸಿದ್ದೇನೆ. ಈ ದಿಸೆಯಲ್ಲಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುತ್ತಿದ್ದೇನೆ.ರಾಜಕೀಯ ಅಧಿಕಾರ ಇದ್ದರೆ ದೊಡ್ಡ ಪ್ರಮಾಣದಲ್ಲಿ ಜನಸೇವೆ ಮಾಡ ಬಹುದು. ನಿಜ ಹೇಳಬೇಕೆಂದರೆ ಜನರ ಕಷ್ಟ ಸುಖಗಳಿಗೆ ನೆರವಾಗಲು ಅಧಿಕಾರ ಇರಲೇಬೇಕು ಎಂದಿಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ಪ್ರಕೃತಿಯೇ ನಮ್ಮನ್ನು ಕೈಹಿಡಿದು ನಡೆಸಲಿದೆ ಎಂದರು.

ನಾನು ಕ್ಷೇತ್ರದ ಜನರೊಟ್ಟಿಗೆ ಇರಲು ಬಯಸಿದ್ದೇನೆ

ಚಿಕ್ಕಬಳ್ಳಾಪುರ ತಾಲೂಕು ಪಟ್ರೇನಹಳ್ಳಿ ಗ್ರಾಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿದರು.

Profile Ashok Nayak Feb 12, 2025 8:47 PM

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧನಾಗಿ ಭಗತ್‌ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನನ್ನ ದುಡಿಮೆ ಹಣದಲ್ಲಿ ಸಮಾಜಸೇವೆ ಮಾಡುತ್ತಿದ್ದೇವೆ. ಜನಸೇವೆ ಮಾಡಲು ಅಧಿಕಾರ ಇದ್ದರೆ ಒಳ್ಳೆಯದು. ಆದರೆ ಅದೇ ಅಂತಿಮವಲ್ಲ, ಒಳ್ಳೆಯ ಮನಸ್ಸಿ ದ್ದರೆ ಸಾಕು ಎಂದು ಬಿಜೆಪಿ ಅಧ್ಯಕ್ಷ ಸಂದೀಪ್‌ರೆಡ್ಡಿ ಅಭಿಪ್ರಾಯಪಟ್ಟರು. ತಾಲೂಕಿನ ಪಟ್ರೇನಹಳ್ಳಿ ಗ್ರಾಮದಲ್ಲಿ ಬುಧವಾರ ಅಂಗವಿಕಲ ದಂಪತಿಗಳಾದ ಶ್ರೀನಿವಾಸ್, ಲಕ್ಷ್ಮೀ ದೇವಮ್ಮ ಅವರ ಮನೆ ಅಪೂರ್ಣವಾಗಿರುವ ವಿಚಾರ ತಿಳಿದು ಭೇಟಿ ನೀಡಿದ್ದ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿ ದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ನಾನು ಕ್ಷೇತ್ರದ ಜನರೊಟ್ಟಿಗೆ ಇರಲು ಬಯಸಿದ್ದೇನೆ. ಈ ದಿಸೆಯಲ್ಲಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುತ್ತಿದ್ದೇನೆ.ರಾಜಕೀಯ ಅಧಿಕಾರ ಇದ್ದರೆ ದೊಡ್ಡ ಪ್ರಮಾಣದಲ್ಲಿ ಜನಸೇವೆ ಮಾಡ ಬಹುದು. ನಿಜ ಹೇಳಬೇಕೆಂದರೆ ಜನರ ಕಷ್ಟ ಸುಖಗಳಿಗೆ ನೆರವಾಗಲು ಅಧಿಕಾರ ಇರಲೇಬೇಕು ಎಂದಿಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ಪ್ರಕೃತಿಯೇ ನಮ್ಮನ್ನು ಕೈಹಿಡಿದು ನಡೆಸಲಿದೆ ಎಂದರು.
ನೆರವು ಬೇಕಿದೆ.

ಪಟ್ರೇನಹಳ್ಳಿಯ ಇಬ್ಬರು ಅಂಗವಿಕಲ ದಂಪತಿಗಳು ವಾಸಕ್ಕೆ ಬೇಕಾದ ಮನೆ ನಿರ್ಮಾಣಕ್ಕೆ ಕೈಹಾಕಿ,ಪೂರ್ಣಗೊಳಿಸದೆ ಕಂಗಾಲಾಗಿದ್ದಾರೆ.ಅವರ ದುಡಿಮೆಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಉಳಿಸಿ ಮನೆ ಕಟ್ಟಿದ್ದಾರೆ ಆದರೆ ಅದು ಪೂರ್ಣವಾಗಿಲ್ಲ.ಈಗ ಕೈಖಾಲಿ ಮಾಡಿಕೊಂಡು ಸಹಾಯ ಕೋರಿ ನನ್ನ ಕಛೇರಿಗೆ ಭೇಟಿ ನೀಡಿದ್ದಾರೆ.ಹೀಗಾಗಿ ಇಂದು ಭೇಟಿ ನೀಡಿದ್ದೇನೆ.ಇಲ್ಲಿನ ಪರಿಸ್ಥಿತಿ ನೋಡಿದ ಮೇಲೆ ನನಗೆ ಅನಿಸಿದ್ದು ಇದು ನನ್ನ ಒಬ್ಬನಿಂದ ಆಗುವ ಕೆಲಸ ಅಲ್ಲ.ದೊಡ್ಡಮೊತ್ತದ ಹಣ ಬೇಕಾಗಿದೆ.ಬಡಪಾಯಿಗೆ ಇರಲು ಒಂದು ಮನೆ ಒದಗಿಸಲು ದಾನಿಗಳು ಮುಂದೆ ಬರಬೇಕಿದೆ. ನಾವು ನೀವು ಎಲ್ಲಾ ಸೇರಿ ಶ್ರೀನಿವಾಸ್ ದಂಪತಿಗಳ ಮನೆಯ ಕನಸು ನನಸು ಮಾಡೋಣ ಎಂದು ಕರೆ ನೀಡಿದರು.

ಬಿರಿಯಾನಿ ಕೊಡಿ!!
ನನ್ನ ಸಹೋದರ ಮರಳುಕುಂಟೆ ಕೃಷ್ಣಮೂರ್ತಿ ಅವರು ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ನಾವು ನೀಡುತ್ತಿರುವ ಮದ್ಯಾಹ್ನದ ಬಿಸಿಯೂಟದ ಬಗ್ಗೆ ಟೀಕಿಸಿ ಮಾತನಾಡಿದ್ದಾರೆ.ಅವರಿಗೆ ಹೇಳು ವುದಿಷ್ಟೇ ನನ್ನ ಯೋಗ್ಯತೆ ಚಿತ್ರನ್ನ ಹಾಕೋದೆ ಇರಬಹುದು,ಅಥವಾ ತಂಗಳನ್ನ ಹಾಕೋದೆ ಇರಹಬಹುದು,ತಿನ್ನೋವರಂತು ತೃಪ್ತಿಯಿಂದ ತಿನ್ನುತ್ತಿದ್ದಾರೆ.ನನಗೆ ಆಶೀರ್ವಾಧ ಮಾಡುತ್ತಿದ್ದಾರೆ. ಅವರ ಕಣ್ಣುಗಳಲ್ಲಿ ಹೊಸಬೆಳಕು ಕಂಡಿದ್ದೇನೆ. ಸೋಷಿಯಲ್ ಮೀಡಿಯಾ ಅವಿಭಾಜ್ಯ ಅಂಗ ವಾಗಿದೆ. ಯಾರೋ ಹಾಕುತ್ತಾರೆ, ಏನೋ ಬರೆಯುತ್ತಾರೆ. ಅಣ್ಣಾ ನಿಮಗೂ ಕೊಡುವ ಮನಸ್ಸಿದ್ದರೆ ಬಿರಿಯಾನಿಯನ್ನೇ ಕೊಡಿ.ನಿಮ್ಮ ಜತೆಗೆ ನಾನು ನಿಂತುಕೊಳ್ಳುತ್ತೇನೆ.ನಿಮ್ಮ ಬಗ್ಗೆ ನನಗೆ ಗೌರವ ವಿದೆ. ನಮ್ಮ ಕೈಲಿ ಆಗೋದನ್ನು ಮಾಡುತ್ತಾ ಮುಂದೆ ಸಾಗೋಣ ಎಂದು ಟಾಂಗ್ ನೀಡಿದರು.

ನಿಮ್ಮಷ್ಟು ರಾಜಕೀಯ ಗೊತ್ತಿಲ್ಲ!!

ನಾನು ಗ್ರಾಮ ಪಂಚಾಯಿತಿ ಸದಸ್ಯ ಆಗಬೇಕು ಎಂದು ಅಂದುಕೊಂಡಿಲ್ಲ.ನಮ್ಮ ತಂದೆ ಏಳೆಂಟು ಬಾರಿ ಸದಸ್ಯ ಆಗಿದ್ದರು.ಪಂಚಾಯಿತಿ ಚೇರ್ಮನ್ನರು ಆಗಿದ್ದರು.ನನ್ನ ತಾತನವರು ಪೆರೇಸಂದ್ರ ಗ್ರಾಮದ ನೈಜ ಪಟೇಲರಾಗಿದ್ದರು. ಕೃಷ್ಣಮೂರ್ತಿ ಅವರಿಗೆ ಗೊತ್ತಿರಲಿ ಡೂಪ್ಲಿಕೇಟ್ ಪಟೇಲ ರಲ್ಲ. ನನ್ನ ತಾಯಿ ಸಹ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋಲು ಗೆಲುವು ಸಹಜ.ಆವತ್ತಿಂದ ಈವರೆಗೆ ನಮ್ಮ ಕೈಲಾದ ಸಹಾಯ ಸಮಾಜಕ್ಕೆ ಮಾಡುತ್ತಾ ಬಂದಿದ್ದೇವೆ. ನಾವು ದೊಡ್ಡ ಸಾಹುಕಾರರೂ ಅಲ್ಲ, ರಾಜರ ಕುಟುಂಬದವರು ಅಲ್ಲ.ರೈತ ಕುಟುಂಬದವರು. ಜನರ ಜತೆ ನಾವಿದ್ದೇವೆ.ನಮ್ಮ ಜತೆ ಅವರಿದ್ದಾರೆ.ಅವರಿಂದಾನೇ ನಾವು.ನಾನು ಪಂಚಾಯಿತಿ ಸದಸ್ಯ ಆಗಿಲ್ಲ,ಬೇಜಾರಿಲ್ಲ.ಪ್ರಧಾನಿ ನರೇಂದ್ರ ಮೋದಿ ಕೂಡ ಗ್ರಾಪಂ ಸದಸ್ಯರಾದವರಲ್ಲ,ನೇರವಾಗಿ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದೇಶವನ್ನು ಕಟ್ಟುತ್ತಿಲ್ಲವೆ?ರಾಜಕೀಯ ನಿಮ್ಮಷ್ಟು ಗೊತ್ತಿಲ್ಲ ದಿರಬಹುದು.ಕಾಮನ್‌ಸೆನ್ಸ್ ಇದೆ.ಆಗಲಿ ಸರ್. ಯಾವ್ಯಾವಾಗ ಏನೇನು ಆಗುತ್ತೋ ಆಗಲಿ ಎಂದರು.
ಚಿಕ್ಕಬಳ್ಳಾಪುರದ ಮನೆ ಮಗ
ನಾನು ಎಂದೂ ಕೂಡ ತೂಕವಿಲ್ಲದ ಮಾತನ್ನು ಆಡುವುದಿಲ್ಲ.ನಾನು ಏನೇ ಆಡಿದ್ದರೂ ಅಳೆದು ತೂಗಿಯೇ ಆಡುತ್ತೇನೆ.ನಿನ್ನೆಯ ಸುದ್ದಿಗೋಷ್ಟಿಯಲ್ಲಿ ಸಂಸದ ಸುಧಾಕರ್ ಅವರ ಬಗ್ಗೆ ಏನೇನು ಮಾತಾಡಿದ್ದೇನೋ ಅದಕ್ಕೆ ನಾನು ಈಗಲೂ ಮುಂದೆಯೂ ಬದ್ಧ.ಪದವಿ ಅದು ಇದು ಏನು ಬೇಕಾದರೂ ಆಗಬಹುದು.ಆದರೆ ಜನರ ಬಳಿಗೆ ಹೋಗಿ ನಾನು ಕೆಲಸ ಮಾಡಲು ಯಾರೂ ತಡೆಯ ಲಾಗಲ್ಲ. ಈವತ್ತಿನಿಂದಲೇ ನಾನು ಜನರ ಬಳಿಗೆ ಹೋಗಿ ಕೆಲಸ ಮಾಡುತ್ತಿದ್ದೇನೆ.ನಾನು ಎಷ್ಟೇ ಎತ್ತರಕ್ಕೆ ಹೋದರೂ ತಲೆ ಎಲ್ಲಿರಬೇಕೋ ಅಲ್ಲಿಯೇ ಇರುತ್ತದೆ.ಅಧಿಕಾರ ಬಂದಾಕ್ಷಣ ಬದಲಾಗುವ ಪೈಕಿ ಅಲ್ಲ.ನಾನು ಚಿಕ್ಕಬಳ್ಳಾಪುರದ ಮನೆಮಗನಾಗಿಯೇ ಇರುತ್ತೇನೆ ಎಂದರು.