Chikkaballapur News: ಚಿಂತಾಮಣಿ ಡಿಸಿಸಿ ಬ್ಯಾಂಕ್‌ನಲ್ಲಿ ಮಹಾ ವಂಚನೆ: ಆರ್‌ಟಿಐ ಕಾರ್ಯಕರ್ತನ ಗಂಭೀರ ಆರೋಪ
ಇದುವರೆಗೂ ಕೋಟ್ಯಾಂತರ ಹಣ ವಂಚನೆ ಮಾಡಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಮಾತ್ರ 60ಕ್ಕೂ ಅಧಿಕ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು ವಂಚನೆ ಮಾಡಿರುವ ಅಧಿಕಾರಿಗಳ ವಿರುದ್ದ ಇಡಿ ಕೇಸ್ ದಾಖಲಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದರು.

ಚಿಂತಾಮಣಿಯಲ್ಲಿರುವ ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ಕೋಟ್ಯಾಂತರ ರೂ.ಹಣವನ್ನು ಬ್ಯಾಂಕಿನ ಅಧಿಕಾರಿಗಳು ಗುಳುಂ ಮಾಡಿದ್ದಾರೆ ಎಂದು ಆರ್ ಟಿ ಕಾರ್ಯಕರ್ತ ಮಾಲಿಕ್ ಪಾಷ ಗಂಭೀರ ಆರೋಪ ಮಾಡಿದ್ದಾರೆ.

ಚಿಂತಾಮಣಿ : ಚಿಂತಾಮಣಿಯಲ್ಲಿರುವ ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ಕೋಟ್ಯಾಂತರ ರೂ.ಹಣವನ್ನು ಬ್ಯಾಂಕಿನ ಅಧಿಕಾರಿಗಳು ಗುಳುಂ ಮಾಡಿದ್ದಾರೆ ಎಂದು ಆರ್ ಟಿ ಕಾರ್ಯಕರ್ತ ಮಾಲಿಕ್ ಪಾಷರವರು ಗಂಭೀರ ಆರೋಪ ಮಾಡಿದ್ದಾರೆ. ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈಗಾಗಲೇ ಡಿಸಿಸಿ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸಿರುವ ನಾಗರಾಜ್, ಸಂತೋಷ್ ಎಂಬುವರ ಮೇಲೆ ಐದು ಎಫ್‌ಐಆರ್‌ಗಳು ಆಗಿದ್ದರೂ ಸಹ ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ಇದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ.
ಬ್ಯಾಂಕಿನಲ್ಲಿ ಹಣ ವಂಚನಾ ಪ್ರಕರಣವನ್ನು ಬ್ಯಾಂಕಿನ ವ್ಯವಸ್ಥಾಪಕರು ಆಗಿದಂತಹ ನಾಗರಾಜ್ ರವರು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದರು ಸಹ ಮೇಲಾಧಿಕಾರಿಗಳು ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Tumkur (Chikkanayakanahalli): ಬೆಂಕಿ ಅನಾಹುತ: 16 ಗುಡಿಸಲು ಭಸ್ಮ
ಇದುವರೆಗೂ ಕೋಟ್ಯಾಂತರ ಹಣ ವಂಚನೆ ಮಾಡಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಮಾತ್ರ 60ಕ್ಕೂ ಅಧಿಕ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು ವಂಚನೆ ಮಾಡಿರುವ ಅಧಿಕಾರಿಗಳ ವಿರುದ್ದ ಇಡಿ ಕೇಸ್ ದಾಖಲಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದರು.
ಇದಲ್ಲದೇ ಕೆಜಿಎಫ್, ಕೋಲಾರ,ಚಿಂತಾಮಣಿಗೆ ಸೇರಿರುವ ನಕಲಿ ಪೈನಾನ್ಸ್ ಗಳು ರಾಜಾ ರೋಷವಾಗಿ ನಡೆಸುತ್ತಿದ್ದರು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಹಾಗೂ ಅಧಿಕಾರಿ ಗಳಿಗೆ ಲಿಖಿತ ಮೂಲಕ ದೂರು ಕೊಟ್ಟರು ತಲೆಕೆಡಿಸಿಕೊಳ್ಳುತ್ತಿಲ್ಲ.
ವಾಹನಗಳ ಮೇಲೆ ಸಾಲಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಆರ್‌ಸಿ ತಮ್ಮ ಬಳಿ ಇಟ್ಟು ಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ಆರ್ ಟಿಓ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ವಿವರಿಸಿದರು.
ಈ ವೇಳೆ ರಾಜ್ಯ ಕಾರ್ಯಧ್ಯಕ್ಷರಾದ ಅಭಿಷೇಕ್ ಎ ಸಿ, ರಾಜ್ಯ ಪ್ರಧಾನ ಕಾರ್ಯದರ್ಶಿ,ಕೆ ಕೆ ಮಂಜುನಾಥ್,ರಾಜ್ಯ ಉಪಾಧ್ಯಕ್ಷರಾದ ಜೆಪಿ ಚಂದ್ರಶೇಖರ್ ರೆಡ್ಡಿ,ರವೀಂದ್ರ ಗೌಡ ಜಿ,ಮಧು ಎಸ್,ಸುರೇಂದ್ರ ರೆಡ್ಡಿ ಬಿ,ಎನ್ ದೇವರಾಜ್,ಸದಾಶಿವರೆಡ್ಡಿ ಸಿ,ಮನೋಹರ್ ಸಿ ಎಸ್ ಸೇರಿದಂತೆ ಮತ್ತಿತರರು ಇದ್ದರು.