ಮೈಕ್ರೋ ಪೈನಾನ್ಸ್ ಕಚೇರಿಗೆ ಎಚ್ಚರಿಕೆ ನೋಟಿಸ್ ನೀಡಿವ ಮೂಲಕ ರೈತ ಸಂಘ ಪ್ರತಿಭಟನೆ: ರೈತ ಸಂಘದ ಅಧ್ಯಕ್ಷ ಲಕ್ಷ್ಮಿ ನಾರಾಯಣ್
ಜೈಲ್ ಭರೊ ಚಳುವಳಿ ಬಾರುಕೋಲು ಚಳಿವಳಿ ಬಂಡಿಯಾತ್ರೆ ನಗುವ ಚಳುವಳಿ ಮೂಲಕ ರೈತರನ್ನು ಬಡಿದೆಬ್ಬಿಸಿದರು. ಮಾಜಿ ಮುಖ್ಯಮಂತ್ರಿ ದಿ.ಎಂ.ಎಸ್.ಕೃಷ್ಣ ಅಧಿಕಾರಿದಲ್ಲಿ ರೈತರಿಗೆ 14 ಗಂಟೆ ಹಗಲು ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಲು ಧರಣಿ ಮಾಡಿ ರೈತರಿಗೆ ಹೊಸ ಬಾಳು ರೂಪಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು
![ಸಾಲ ತೀರಿಸಲು ಮತ್ತೊಂದು ಸಾಲಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ](https://cdn-vishwavani-prod.hindverse.com/media/original_images/micro.jpg)
ವಿಶ್ವಚೇತನ ರೈತ ಮುಖಂಡರಾದ ಡಾ,ಪ್ರೊ.ನಂಜುAಡಸ್ವಾಮಿ ಅವರ ೮೯ ಜನ್ಮದಿನಚರಣೆ ದಂದು ಅವರ ಸ್ಮರಣೆ ಮಾಡುವುದು ನಿಜವಾದ ರೈತನ ಕರ್ತವ್ಯ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ,ಅರ್, ಲಕ್ಷ್ಮಿ ನಾರಾಯಣ್ ತಿಳಿಸಿದರು.
![Profile](https://vishwavani.news/static/img/user.png)
ಗೌರಿಬಿದನೂರು: ವಿಶ್ವಚೇತನ ರೈತ ಮುಖಂಡರಾದ ಡಾ,ಪ್ರೊ.ನಂಜುಂಡಸ್ವಾಮಿ ಅವರ 89 ಜನ್ಮದಿನಚರಣೆ ದಂದು ಅವರ ಸ್ಮರಣೆ ಮಾಡುವುದು ನಿಜವಾದ ರೈತನ ಕರ್ತವ್ಯ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ,ಅರ್, ಲಕ್ಷ್ಮಿ ನಾರಾಯಣ್ ತಿಳಿಸಿದರು. ನಗರದ ಎಂ,ಜಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಟ ಅರ್ಚನೆ ಮಾಡಿ ಅವರು ಮಾತನಾಡಿದರು. ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರು ರೈತರ ಧ್ವನಿಯಾಗಿ ಕೆಲಸ ನಿರ್ವಹಣೆ ಮಾಡಿದ ದೀಮಂತ ನಾಯಕ ರೈತರ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಮಹಾನ್ ಚೇತನ ಕೃಷಿ ನೀತಿಗೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಬಂಡವಾಳ ಶಾಹಿಗಳ ಮತ್ತು ಲೇವದೇವಿ ದಾರರ ವಿರುದ್ದ ಪ್ರತಿಭಟನೆ ಮಾಡಿದ್ದರು.
ಇದನ್ನೂ ಓದಿ: Chikkaballapur News: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ವಾತ್ಸಲ್ಯ” ಮನೆ ಹಸ್ತಾಂತರ
ಜೈಲ್ ಭರೊ ಚಳುವಳಿ ಬಾರುಕೋಲು ಚಳಿವಳಿ ಬಂಡಿಯಾತ್ರೆ ನಗುವ ಚಳುವಳಿ ಮೂಲಕ ರೈತರನ್ನು ಬಡಿದೆಬ್ಬಿಸಿದರು. ಮಾಜಿ ಮುಖ್ಯಮಂತ್ರಿ ದಿ.ಎಂ.ಎಸ್.ಕೃಷ್ಣ ಅಧಿಕಾರಿದಲ್ಲಿ ರೈತರಿಗೆ ೧೪ ಗಂಟೆ ಹಗಲು ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಲು ಧರಣಿ ಮಾಡಿ ರೈತರಿಗೆ ಹೊಸ ಬಾಳು ರೂಪಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿ ಇಂದು ರೈತ ಪಾಲಿಗೆ ದಾರಿದೀಪವಾಗಿರುವ ಪ್ರೋ ಎಂ.ಡಿ.ನಂಜುಂಡಸ್ವಾಮಿ ಅವರ ೮೯ ನೇ ಜನ್ಮದಿನಚಣೆಯನ್ನು ವಿಶೇಷ ವಾಗಿ ಬಡವರ ಮತ್ತು ರೈತರ ರಕ್ತ ಹೀರುತ್ತಿರುವ ಮೈಕ್ರೋ ಪೈನಾನ್ಸ್ ಕಂಪನಿಗಳ ಹತ್ತಿರ ನೇರ ಅಕ್ಷನ್ ಚಳುವಳಿ ಮಾಡಿ ಅವರಿಗೆ ನಮ್ಮ ಸಂಘದಿಂದ ನೋಟಿಸ್ ಜಾರಿ ಮಾಡುವುದರ ಮೂಲಕ ಈ ಕಂಪನಿಗಳ ವಿರುದ್ದ ಯುದ್ದ ಸಾರುತ್ತವೇ,ಇವರ ಬಡ್ಡಿ ದರದಿಂದ ಬಡವರು ತತ್ತರಿಸಿ ಹೋಗಿ ದ್ದಾರೆ ಇವರ ಸಾಲ ತೀರಿಸಲು ಮತ್ತೊಂದು ಕಂಪನಿಗಳ ಬಳಿ ಸಾಲಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ.
ಇದರ ಕಡಿವಾಣ ಹಾಕಲು ಈ ಕಂಪನಿಗಳನ್ನು ಮುಚ್ಚಿಸುವುದೇ ದಾರಿ ಅಗಿದೆ,ಇಂದು ಧರ್ಮಸ್ಥಳ ಅಡಳಿತ ಕಚೇರಿಗೆ ದೀಡಿರ್ ದಾಳಿ ಮಾಡಿ ಅವರ ಕಚೇರಿ ಎಚ್ಚರಿಕೆ ನೋಟಿಸ್ ಗೋಡೆ ಅಂಟಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡುತ್ತವೇ,ಇದರಂತ ವಿಸ್ಥಾರ, ಉಜ್ಜೀವನ್, ಮುತ್ತೋಟ್ ಪೈನಾನ್ಸ್ ಕಚೇರಿಗೆ ದಾಳಿ ಮಾಡಿ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹೀರೆಬಿದನೂರು ರಾಜಣ್ಣ,ರೈತ ಮುಖಂಡರಾದ ಮುದ್ದರಂಗಪ್ಪ ಸನತ್ ಕುಮಾರ್, ಮಂಜುನಾಥ್ , ಶ್ರೀನಿವಾಸ್, ನರಸರೆಡ್ಡಿ ಅನಂತು,ಅವಲಪ್ಪ ಆಶ್ವಥ್ಥರೆಡ್ಡಿ ಅಧಿನಾರಾಯಣಪ್ಪ ನಂದನ್ ಬಾಲಪ್ಪ ಮುಂತಾದವರು ಹಾಜರಿದ್ದರು.