Chikkaballapur news: ಒತ್ತುವರಿ ತೆರವು ಗೊಳಿಸಿದ ಕಂದಾಯ, ಭೂಮಾಪನ ಇಲಾಖೆ ಅಧಿಕಾರಿಗಳು
ಕಾಲುದಾರಿ ರಸ್ತೆ ಒತ್ತುವರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ರೈತರ ಹೊಲಗಳಿಗೆ ಹೋಗಲು ದಾರಿ ಗುರುತಿಸಿ ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿ ತಿಗೆ ಹಸ್ತಾಂತರಿಸುವ ಘಟನೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಲುದಾರಿ ರಸ್ತೆ ಒತ್ತುವರಿಯನ್ನು ಜೆಸಿಬಿ ಮೂಲಕ ತೆರೆವುಗೊಳಿಸಿ ರೈತರ ಹೊಲಗಳಿಗೆ ಹೋಗಲು ದಾರಿ ಗುರುತಿಸಿ ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಘಟನೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಂತಾಮಣಿ: ಕಾಲುದಾರಿ ರಸ್ತೆ ಒತ್ತುವರಿಯನ್ನು ಜೆಸಿಬಿ ಮೂಲಕ ತೆರೆವುಗೊಳಿಸಿ ರೈತರ ಹೊಲ ಗಳಿಗೆ ಹೋಗಲು ದಾರಿ ಗುರುತಿಸಿ ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಘಟನೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬಾರ್ಲಹಳ್ಳಿ ಗ್ರಾಮದ ಮುನಿಶಾಮಿರೆಡ್ಡಿ ಬಿನ್ ಗೋಳೆಪ್ಪ ರವರು ಮುರುಗಮಲ್ಲ ಹೋಬಳಿ ಬಾರ್ಲಹಳ್ಳಿ ಗ್ರಾಮದ ಸರ್ವೆ ನಂ: ೩೯,೪೦,೪೨,೪೩,೪೪,ರಲ್ಲಿನ ದಾರಿ ಒತ್ತುವರಿಯನ್ನು ತೆರವುಗೊಳಿಸಲು ತಾಲೂ ಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ರವರಿಗೆ ಅರ್ಜಿ ಸಲ್ಲಿಸಿದ್ದರು.
ತಹಸೀಲ್ದಾರ್ ರವರು ಭೂಮಾಪನ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಂಟಿ ಸರ್ವೆ ನಡೆಸಿ ಸಂಬAಧಪಟ್ಟ ಪಂಚಾಯಿತಿಗೆ ನಿರ್ವಹಣೆ ಮಾಡಲು ಸೂಚಿಸಿ ದ್ದರು.
ಅದರಂತೆ ಇಂದು ರಾಜಸ್ವ ನಿರೀಕ್ಷಕರಾದ ರಮೇಶ್ ಗ್ರಾಮ ಆಡಳಿತ ಅಧಿಕಾರಿ ಸಿಂಧು, ಭೂ ಮಾಪ ನ ಇಲಾಖೆಯ ಸರ್ವೆಯರ್ ಖಾದರ್ ಸಾಬ್,ಹಾಗೂ ಸಿಬ್ಬಂದಿ ಸರ್ವೆ ಕಾರ್ಯ ನಡೆಸಿ ಒತ್ತುವರಿ ಯಾಗಿದ್ದನ್ನು ಗುರುತಿಸಿ ಜೆಸಿಬಿ ಮುಖಾಂತರ ತೆರವುಗೊಳಿಸಿದ ನಂತರ ಸ್ಥಳೀಯ ಗ್ರಾಮ ಪಂಚಾ ಯಿತಿಗೆ ಹಸ್ತಾಂತರಿಸಲಾಯಿತು.