ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಹೆಣ್ಣುಮಕ್ಕಳು ನಾನು ಅಬಲೆಯಲ್ಲ ಸಬಲೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು : ರುಡ್ಸೆಟಿ ಉಪನ್ಯಾಸಕಿ ಮಧುಪ್ರಿಯ ಅಭಿಮತ

ಅಂಗನವಾಡಿ ಶಿಕ್ಷಕರೇ ಆಗಿರಲಿ, ಸಹಾಯಕರೇ ಆಗಿರಲಿ ಎಲ್ಲಾ ದುಡಯುವ ವರ್ಗದ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು. ಸಂತೋಷದಿಂದ ಮಕ್ಕಳ ಕಲಿಕೆಗೆ ಮುಂದಾಗಿ.ಜೀವನವನ್ನು ಕೂಡ ಸಂತೋಷದಿಂದ ಕಳೆಯಿರಿ. ನಮ್ಮ ಕೆಲಸದಿಂದ ನಮಗೇ ಆತ್ಮತೃಪ್ತಿ ದೊರಕುವಂತಿರಲಿ

ನಮ್ಮ ಕೆಲಸದಿಂದ ನಮಗೇ ಆತ್ಮತೃಪ್ತಿ ದೊರಕುವಂತಿರಲಿ

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜೀವಿಸಬೇಕಾದ ನಾವು ಅಬಲೆಯರಲ್ಲ, ಪುರಷನಂತೆ ಸಬಲರು ಎಂಬ ಆತ್ಮವಿಶ್ವಾಸ ಬೆಳೆಸಿಕೊಂಡು ಮುಂದೆ ಸಾಗಬೇಕು. ಆಗ ಮಾತ್ರವೇ ನಮ್ಮ ಹೆಜ್ಜೆಗುರುತುಗಳನ್ನು ಮೂಡಿಸಲು ಸಾಧ್ಯ ಎಂದು ಚದಲಪುರ ಗ್ರಾಮೀಣ ಉದ್ಯೋಗ ತರಬೇತಿ ಕೇಂದ್ರದ ಉಪನ್ಯಾಸಕಿ ಮಧು ಪ್ರಿಯ ತಿಳಿಸಿದರು.

Profile Ashok Nayak Mar 16, 2025 10:25 PM

ಚಿಕ್ಕಬಳ್ಳಾಪುರ : ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಜೀವಿಸಬೇಕಾದ ನಾವು ಅಬಲೆ ಯರಲ್ಲ, ಪುರಷನಂತೆ ಸಬಲರು ಎಂಬ ಆತ್ಮವಿಶ್ವಾಸ ಬೆಳೆಸಿಕೊಂಡು ಮುಂದೆ ಸಾಗಬೇಕು. ಆಗ ಮಾತ್ರವೇ ನಮ್ಮ ಹೆಜ್ಜೆಗುರುತುಗಳನ್ನು ಮೂಡಿಸಲು ಸಾಧ್ಯ ಎಂದು ಚದಲಪುರ ಗ್ರಾಮೀಣ ಉದ್ಯೋಗ ತರಬೇತಿ ಕೇಂದ್ರದ ಉಪನ್ಯಾಸಕಿ ಮಧು ಪ್ರಿಯ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಘಟಕ ಏರ್ಪಡಿಸಿದ್ದ 117ನೇ ಅಂತರಾಷ್ಟ್ರೀಯ ದುಡಿಯುವ ಮಹಿಳೆಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಂಗನವಾಡಿ ಶಿಕ್ಷಕರೇ ಆಗಿರಲಿ, ಸಹಾಯಕರೇ ಆಗಿರಲಿ ಎಲ್ಲಾ ದುಡಯುವ ವರ್ಗದ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕು. ಸಂತೋಷದಿಂದ ಮಕ್ಕಳ ಕಲಿಕೆಗೆ ಮುಂದಾಗಿ.ಜೀವನವನ್ನು ಕೂಡ ಸಂತೋಷದಿಂದ ಕಳೆಯಿರಿ. ನಮ್ಮ ಕೆಲಸದಿಂದ ನಮಗೇ ಆತ್ಮತೃಪ್ತಿ ದೊರಕುವಂತಿರಲಿ ಎಂದರು.

ಇದನ್ನೂ ಓದಿ: Chikkaballapur News: ಗುಣಮಟ್ಟ ಕಾಪಾಡುವ ಮೂಲಕ ಅತ್ಯುತ್ತಮ ಸದನ ನಿರ್ಮಾಣವಾಗಬೇಕು

ಪ್ರತಿ ಕೆಲಸದಲ್ಲಿ ದೇವರನ್ನು ಕಾಣಬೇಕು. ಇಂದಿನ ಉದ್ಯೋಗಕ್ಕೆ ತಾಂತ್ರಿಕತೆ ಬೇಕು, ಮೊಬೈ ಲು ಕೂಡ, ಆದರೆ ಅದಕ್ಕೆ ದಾಸರಾಗುವುದು ಬೇಡ.ಹೋಲಿಕೆಯೇ ಬೇಡ. ಹೆಣ್ಣು ಮಕ್ಕಳು ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ.ನಿಮ್ಮ ಬಗ್ಗೆ ನಿಮಗೆ ಕೀಳರಿಮೆ ಬರಬಾರದು.ಮನೆಯಲ್ಲಿರುವ ಮಕ್ಕಳಲ್ಲಿ ತಾರತಮ್ಯ ಮಾಡಬೇಡಿ. ೧ ರಿಂದ ೬ನೇ ವಯ ಸ್ಸಿನವರಿಗೆ ಪ್ರೀತಿಯಿಂದ ಸಾಕಿ, ೬ರಿಂದ ೧೬ ರ ತನಕ ತಪ್ಪು ಮಾಡಿದಾಗ ದಂಡಿಸಿ ಬೆಳೆಸಿ. ೧೬ ನಂತರ ಸ್ನೇಹಿತರಂತೆ ಬೆಳೆಸಿ ಎಂದರು.

ಮಕ್ಕಳು ಗಳಿಸುವ ಅಂಕಗಳು ಮುಖ್ಯವಲ್ಲ. ಗುಣಾತ್ಮಕ ಶಿಕ್ಷಣ ಪಡೆಯುವಂತಾಗಬೇಕು. ಎಲ್ಲರೂ ಕೂಡ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೇ ಓದಿಸಿ. ಖಾಸಗಿ ಶಾಲೆಯಲ್ಲಿ ಓದಿಸಬೇಕೆಂಬ ಹಂಬಲವುಳ್ಳವರು ಅದೇ ಹಣವನ್ನು ನಿಮ್ಮ ಮಗುವಿನ ಹೆಸರಲ್ಲಿ ಡೆಫಿ ಸಿಟ್ ಮಾಡಿ. ಭಾವನೆಗನ್ನು ಅರ್ಥಮಾಡಿಕೊಳ್ಳಬೇಕಾದರೆ ಬಾಳಲೂ ಮಕ್ಕಳನ್ನು ಜತೆಯ ಲ್ಲಿಟ್ಟುಕೊಂಡು ಓದಿಸಿ.ರೈತರ ಮಕ್ಕಳು ಪೋಷಕರ ಜೊತೆ ಬಾಳುತ್ತಾರೆ. ಶಿಕ್ಷಣ ಎಂದರೆ ಕಾಮನ್ ಸೆನ್ಸ್.ಮಕ್ಕಳ ಮೇಲೆ ಒತ್ತಡ ಹಾಕಬೇಡಿ.ಖಾಸಗಿ ಶಾಲೆಗಳ ಪೋಷಕರ ಸಭೆ ದೊಂಬರಾಟದಂತೆ. ನಾವೇ ಫೀಸು ಕಟ್ಟಿ ಮಕ್ಕಳೆದುರು ಬೈಸಿಕೊಳ್ಳುವುದು ಸರಿಯಲ್ಲ. ಸರ್ಕಾರೀ ಶಾಲೆಯಲ್ಲಿ ಓದಿಸಿದರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ.ಎಂದರು.

ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಮಧು ಪ್ರಿಯ. 46ತರದ ತರಬೇತಿ ನೀಡುತ್ತಿದೆ. ಡಾ.ವೀರೇಂದ್ರ ಹೆಗ್ಗಡೆ ಹುಟ್ಟು ಹಾಕಿದರು. ರುಡ್ ಸೆಟಿ ಧರ್ಮಸ್ಥಳ. ೭೧೬ ಜಿಲ್ಲೆಗಳು ದೇಶದಲ್ಲಿವೆ. ಮಾರ್ಗದರ್ಶಿ ಬ್ಯಾಂಕ್ ಮಾರ್ಗದರ್ಶನದಲ್ಲಿ ೫೮೦ ಆರ್ಸೆಟಿ. ೨೦೦೯ ರಿಂದ ೧೬ಸಾವಿರ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಸಾಲ ಸೌಲಭ್ಯದೊಂದಿಗೆ ಸಬಲೀಕರಣವೆ ಆರ್ಸೆಟಿ ಗುರಿಯಾಗಿದೆ.

ಸಂಘಟನೆಯ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ, ಜಗತ್ತಿನ ಮಹಿಳಾ ಕಾರ್ಮಿಕರ ಹೋರಾಟದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹೊಹೊಮ್ಮಿದೆ.ದುಡಿಯುವ ಮಹಿಳೆಯರಿಲ್ಲದೆ ಯಾವ ದೇಶವೂ ಅಭಿವೃದ್ಧಿ ಆಗಲಾರದು.ಆದರೂ ಕೂಡ ದೇಶದಲ್ಲಿ ದುಡಿಯುವ ವರ್ಗದ ಮಹಿಳೆಯರ ಮೇಲಿನ ದೌರ್ಜನ್ಯವು ಹೆಚ್ಚಾಗುತ್ತಿದೆ ಎಂದರು.

ಕೌಟುಂಬಿಕ ಹಿಂಸೆಯ ಕಾರಣದಿಂದ ಪ್ರತಿ ೬ ಗಂಟೆಗೆ ಒಬ್ಬ ವಿವಾಹಿತ ಮಹಿಳೆ ಸಾವ ನ್ನಪ್ಪುತ್ತಿದ್ದಾಳೆ. ಹೆಣ್ಣು ಭ್ರೂಣ ಹತ್ಯೆಯೂ ಸೇರಿದಂತೆ ಪ್ರತಿ ವರ್ಷ ೫ ಲಕ್ಷ ಹೆನ್ನು ಮಕ್ಕಳು ಕೊಲ್ಲ÷ಲಾಗುತ್ತಿದೆ.೧೫ ನಿಮಿಷಕ್ಕೊಂದು ಅತ್ಯಾಚಾರ ಆಗುತ್ತಿದ್ದು ಇದರಲ್ಲಿ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳೇ ಹೆಚ್ಚಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಇಲಾಖೆ ಯಿಂದ ಮಹಿಳಾ ದಿನಾಚರಣೆ ಮಾಡಲು ಆಗುತ್ತಿಲ್ಲ.ಅವರು ಮಾಡುವುದಿಲ್ಲ. ನಾವು ಕರೆದರೂ ಬರುವುದಿಲ್ಲ.ಮನವಿ ಪತ್ರ ನೀಡಲು ಸಿದ್ದತೆ ಮಾಡಿಕೊಂಡಿದ್ದೇವೆ ಬಂದಿಲ್ಲ ಎಂದು ಬೇಸರಿಸಿದರು.

ಸಮಾಜದ ಮುನ್ನಡೆಗೆ ಮಹಿಳೆಯರ ಪಾತ್ರ ದೊಡ್ಡದು. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಅಸಂಘಟಿತ ಕಾರ್ಮಿಕರಿಗೆ ಹೆರಿಗೆ ರಜೆಯಿಲ್ಲ.ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲ.ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕಾದ ಪರಿಸ್ಥಿತಿ ಇದೆ.ಇದು ಬದಲಾಗಬೇಕಿದೆ ಎಂದರು. ದಬ್ಬಾಳಿಕೆ ದೌರ್ಜನ್ಯ ನಿಂತಿಲ್ಲ, ಲಿಂಗ ತಾರತಮ್ಯ ವನ್ನು ಮಿತಿಮೀರಿದೆ. ೧ ಸಾವಿರ ಗಂಡಸರಿಗೆ ೯೦೦ ಮಂದಿ ಹಣ್ಣುಗಳಿವೆ. ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ ಇರಬೇಕು.ಭ್ರೂಣ ಹತ್ಯೆ ನಿಲ್ಲಿಸಿ.ಮಕ್ಕಳಲ್ಲಿ ಸಮಾನತೆ ತರಬೇಕು. ದುಡಿಯುವ ಮಹಿಳೆಯರ ದಿನಾಚರಣೆ ಸಾರ್ಥಕ ಆಗಬೇಕು ಎಂದರೆ ಸ್ವಾಭಿಮಾನ ಬೆಳೆಸಿ ಕೊಳ್ಳಿ ಎಂದರು. ಇದೇ ವೇಳೆ, ನಿವೃತ್ತ ಅಂಗನವಾಡಿ ನೌಕರರನ್ನು ಸನ್ಮಾನಿಸಲಾಯಿತು.