Daali Dhananjaya's Marriage: ಡಾಲಿ ಧನಂಜಯ್ ಮದುವೆಗೆ ಬಂದ 'ಪುಷ್ಪ' ಡೈರೆಕ್ಟರ್ ಸುಕುಮಾರ್
Daali Dhananjaya's Marriage: ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಧನಂಜಯ್ ಮತ್ತು ಧನ್ಯತಾ ಅವರ ವಿವಾಹ ಪೂರ್ವ ಶಾಸ್ತ್ರಗಳು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಡೆಯುತ್ತಿವೆ. ಈಗಾಗಲೇ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ ನಡೆದಿದ್ದು, ಫೋಟೊಗಳು ಈಗ ವೈರಲ್ ಆಗಿವೆ.


ಮೈಸೂರು: ಸ್ಯಾಂಡಲ್‌ವುಡ್ ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಹಿನ್ನೆಲೆಯಲ್ಲಿ ವಿವಿಧ ಚಿತ್ರರಂಗದ ಗಣ್ಯರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ಆರತಕ್ಷತೆ ನಡೆಯುವುದರಿಂದ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಇದೀಗ ನೂತನ ಜೋಡಿಗೆ ಶುಭ ಕೋರಲು ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಅವರು ಆಗಮಿಸಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ಗೆ ನಟ ಡಾಲಿ ಧನಂಜಯ್ ತೆರಳಿ ಪುಷ್ಪ ಚಿಂತ್ರತಂಡ ಸೇರಿ ವಿವಿಧ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದರು. ಹೀಗಾಗಿ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯಲಿರುವ ಡಾಲಿ ವಿವಾಹ ಕಣ್ತುಂಬಿಕೊಳ್ಳಲು ಪುಷ್ಪ ಚಿತ್ರದ ಖ್ಯಾತಿಯ ನಿರ್ದೇಶಕ ಸುಕುಮಾರ್ ಆಗಮಿಸಿದ್ದಾರೆ.

ನಟ ಡಾಲಿ ಧನಂಜಯ್ ಅವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನ ಪುಷ್ಪ, ಜೀಬ್ರಾ ಮತ್ತಿತರ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಪುಷ್ಪ ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್, ನಟ ಸತ್ಯದೇವ್ ಮತ್ತಿತರರನ್ನು ಇತ್ತೀಚೆಗೆ ಭೇಟಿಯಾಗಿ ಮದುವೆಗೆ ಆಹ್ವಾನಿಸಿದ್ದರು. ಆದ್ದರಿಂದ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಇನ್ನು ಧನಂಜಯ್ ಮತ್ತು ಧನ್ಯತಾ ಅವರ ವಿವಾಹ ಪೂರ್ವ ಶಾಸ್ತ್ರಗಳು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಡೆಯುತ್ತಿವೆ. ಈಗಾಗಲೇ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ ನಡೆದಿದ್ದು, ಫೋಟೊಗಳು ಈಗ ವೈರಲ್ ಆಗಿವೆ.

ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳ ಜತೆಗೆ ಡಾಲಿ ಧನಂಜಯ್ ಅಭಿಮಾನಿಗಳು ಸಹ ವಿವಾಹಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ವಿಶೇಷ ಭೋಜನ ವ್ಯವಸ್ಥೆ ಮಾಡಲು ತಯಾರಿ ನಡೆಯುತ್ತಿದೆ. ಹೋಳಿಗೆ, ವಿವಿಧ ಬಗೆಯ ಪಲ್ಯಗಳು, ಪಲಾವ್ ಇನ್ನೂ ಹಲವು ಬಗೆಯ ಖಾದ್ಯಗಳನ್ನು ಬಾಣಸಿಗರು ಸಿದ್ಧಪಡಿಸುತ್ತಿದ್ದಾರೆ.

ಶನಿವಾರ ಸಂಜೆ 6 ಗಂಟೆಯಿಂದ ಸಂಜೆ 6 ಗಂಟೆ ಇಂದ ರಾತ್ರಿ 12 ರ ವರೆಗೂ ಆರತಕ್ಷತೆ ನಡೆಯಲಿದೆ. ಭಾನುವಾರ ಕೂಡಹಲವು ಶಾಸ್ತ್ರಗಳು ನಡೆಯಲಿವೆ. ಮೊದಲಿಗೆ ಮಂಟಪ ದೇವತಾ ಪ್ರವೇಶ ಕಾರ್ಯವನ್ನು ಮಾಡಲಿದ್ದಾರೆ. ಆ ಬಳಿಕ ನವ ಪ್ರಧಾನ ಕಳಶ ಪೂಜೆ ನಡೆಯಲಿದೆ. ಕನ್ಯಾಧಾನ ಸಂಬಂಧ ಮಾಲೆ ಅರ್ಪಣೆ ನಡೆಯಲಿದೆ, ವಧು-ವರರ ಪೋಷಕರ ನಡುವೆ ಕೆಲ ಶಾಸ್ತ್ರಗಳು ನಡೆಯಲಿವೆ. ವಧು ವರರ ಧಾರೆ ಮುಹೂರ್ತ ನಡೆಯಲಿದೆ. ಆ ಬಳಿಕ 8:10 ರಿಂದ 9:50ರ ನಡುವೆ ಮಾಂಗಲ್ಯ ಧಾರಣೆ ಮಹೋತ್ಸವ ನಡೆಯಲಿದೆ. ಮಾಂಗಲ್ಯ ಧಾರಣೆ ಬಳಿಕ ವಧು-ವರರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಆ ಬಳಿಕ ಮತ್ತೊಮ್ಮೆ ಆರತಕ್ಷತೆ ನಡೆಯಲಿದೆ. ಡಾಲಿ ಧನಂಜಯ್ ಮದುವೆ ಕಾರ್ಯಕ್ರಮ ಮೈಸೂರಿನ ಅರಮನೆ ಮುಂಭಾಗದ ಬೃಹತ್ ಮೈದಾನದಲ್ಲಿ ನಡೆಯಲಿದೆ.

