ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

School Reopen: ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭ; ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ಬೇಸಿಗೆ ರಜೆ ಮುಗಿದು ಮೇ 29 (ಇಂದು) ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಗುರುವಾರದಿಂದ 2025-26 ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ. ಕಳೆದ 2 ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಓಪನ್ ಆಗಲಿವೆ.

ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭ

Profile Vishakha Bhat May 29, 2025 6:46 AM

ಬೆಂಗಳೂರು: ಬೇಸಿಗೆ ರಜೆ ಮುಗಿದು ಮೇ 29 (ಇಂದು) ರಿಂದ ಶಾಲೆಗಳು (School Reopen) ಪುನರಾರಂಭಗೊಳ್ಳಲಿವೆ. ಗುರುವಾರದಿಂದ 2025-26 ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ. ಕಳೆದ 2 ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಓಪನ್ ಆಗಲಿವೆ. ಹಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು ಆರಂಭಿಸಿದ್ದು, ಸರ್ಕಾರಿ ಶಾಲೆಗಳು ಆರಂಭಗೊಳ್ಳಲಿವೆ. ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಿದ್ದಾರೆ.

ಶಿಕ್ಷಣ ಇಲಾಖೆಯು 2025-26 ನೇ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ ವೇಳಾಪಟ್ಟಿಯಲ್ಲಿ ಶೈಕ್ಷಣಿಕ ಅವಧಿ, ರಜಾ ದಿನಗಳು, ಪರೀಕ್ಷೆ ಸೇರಿಂದತೆ ಎಲ್ಲವನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ.

2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಮುಖ ಅವಧಿ

  • ಮೊದಲ ಅವಧಿ: ಮೇ 29 2025 ರಿಂದ ಸೆಪ್ಟೆಂಬರ್‌ 19 2025 ರವರೆಗೆ
  • ದಸರಾ ರಜೆ: ಸೆಪ್ಟೆಂಬರ್‌ 20 2025 ರಿಂದ ಅಕ್ಟೋಬರ್‌ 7 2025 ರವರೆಗೆ
  • ಎರಡನೇ ಅವಧಿ ಅಕ್ಟೋಬರ್‌ 8 2025 ರಿಂದ ಏಪ್ರಿಲ್‌ 10 2026 ರವರೆಗೆ
  • ಬೇಸಿಗೆ ರಜೆ ಏಪ್ರಿಲ್‌ 11 2026 ರಿಂದ ಮೇ 28 2026 ರವರೆಗೆ

ಇಂದು ಬೆಂಗಳೂರಿನ ಆಡುಗೋಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಎಸ್ಇಎಲ್) ಆಯೋಜಿಸಿರುವ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮತ್ತು ಇತರ ಹಿರಿಯ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಮತ್ತೆ ಕೊರೋನಾ ಅಬ್ಬರ? ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯವಾಣಿ?

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಶಾಲೆಗಳು ಪ್ರಾರಂಭವಾಗಲಿವೆ. ಮಳೆ ಮಧ್ಯೆ ಶಾಲೆ ಆರಂಭವಾಗಿ ಮಕ್ಕಳಲ್ಲಿ ವ್ಯಾಪಕ ಸೋಂಕು ಕಾಣಿಸಿಕೊಂಡರೆ ಅನ್ನೋ ಭೀತಿ ಇದೆ. ಮಳೆಯಲ್ಲಿ ಮಕ್ಕಳಿಗೆ ಸೊಂಕು ಬೇಗನೇ ಹರಡುತ್ತವೆ. ಈಗಾಗಲೇ 3 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್​ ಬಂದಿದೆ. ಹೀಗಾಗಿ ಸರ್ಕಾರ ಶೀಘ್ರದಲ್ಲಿಯೇ ಕೆಲ ಸುತ್ತೋಲೆಗಳನ್ನು ಜಾರಿಗೆ ತರಬಹುದು ಎಂದು ಹೇಳಲಾಗಿದೆ. ಶಾಲೆಗಳಲ್ಲಿ ಮಾಸ್ಕ್‌ ಕಡ್ಡಾಯ ಜಾರಿಗೆ ಬಂದರೂ ಬರಬಹುದಾಗಿದೆ.