ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೋಲಿನ ಬೆನ್ನಲ್ಲೇ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕೋಚ್‌ ಪಾಂಟಿಂಗ್‌, ಅಯ್ಯರ್‌ ಮಧ್ಯೆ ಗಲಾಟೆ

Angry Ricky Ponting: ಟೂರ್ನಿಯುದ್ದಕ್ಕೂ ಪಂಜಾಬ್‌ ಅತ್ಯುತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಕ್ವಾಲಿಫೈಯರ್‌ ಪ್ರವೇಶಿಸಿತ್ತು. ಆದರೆ ಈ ಪಂದ್ಯದಲ್ಲಿ ಇಂಥಾ ನೀರಸ ಆಟವನ್ನು ಯಾರು ನಿರೀಕ್ಷಿಸಿರಲ್ಲ. ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನಿಸಲ್ಪಟ್ಟ ಪಂಜಾಬ್‌ ಕಲೆಹಾಕಿದ್ದು ಕೇವಲ 101 ರನ್‌. ತಂಡ 14.1 ಓವರ್‌ಗಳಲ್ಲೇ ತನ್ನ ಗಂಟುಮೂಟೆ ಕಟ್ಟಿತು.

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕೋಚ್‌ ಪಾಂಟಿಂಗ್‌, ಅಯ್ಯರ್‌ ಮಧ್ಯೆ ಗಲಾಟೆ

Profile Abhilash BC May 30, 2025 2:38 PM

ಮುಲ್ಲಾನ್‌ಪುರ್‌ (ಚಂಡೀಗಢ): ಗುರುವಾರ ನಡೆದಿದ್ದ ಆರ್‌ಸಿಬಿ(RCB vs PBKS Qualifier 1) ವಿರುದ್ಧದ ಮೊದಲ ಕ್ವಾಲಿಫೈಯರ್‌(IPL Qualifier 1) ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಅತ್ಯಂತ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ 8 ವಿಕೆಟ್‌ ಅಂತರದ ಹೀನಾಯ ಸೋಲು ಕಂಡಿತ್ತು. ಇದೀಗ ಸೋಲಿನ ಬೆನ್ನಲ್ಲೇ ತಂಡದ ಕೋಚ್‌ ರಿಕಿ ಪಾಂಟಿಂಗ್‌(Ricky Ponting) ಅವರು ನಾಯಕ ಶ್ರೇಯಸ್‌ ಅಯ್ಯರ್‌(Shreyas Iyer) ಜತೆ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕಿತ್ತಾಟ ನಡೆಸಿದ್ದಾರೆ ಎನ್ನಲಾದ(Angry Ricky Ponting) ವಿಡಿಯೊ ವೈರಲ್‌ ಆಗಿದೆ.

ಟೂರ್ನಿಯುದ್ದಕ್ಕೂ ಪಂಜಾಬ್‌ ಅತ್ಯುತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಕ್ವಾಲಿಫೈಯರ್‌ ಪ್ರವೇಶಿಸಿತ್ತು. ಆದರೆ ಈ ಪಂದ್ಯದಲ್ಲಿ ಇಂಥಾ ನೀರಸ ಆಟವನ್ನು ಯಾರು ನಿರೀಕ್ಷಿಸಿರಲ್ಲ. ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನಿಸಲ್ಪಟ್ಟ ಪಂಜಾಬ್‌ ಕಲೆಹಾಕಿದ್ದು ಕೇವಲ 101 ರನ್‌. ತಂಡ 14.1 ಓವರ್‌ಗಳಲ್ಲೇ ತನ್ನ ಗಂಟುಮೂಟೆ ಕಟ್ಟಿತು.

ಆರ್‌ಸಿಬಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಲು ಸಾಧ್ಯವಾಗದೆ 6.3 ಓವರ್‌ಗಳಲ್ಲಿ 50 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಐವರನ್ನು ಕಳೆದುಕೊಂಡ ತಂಡ ಆ ಬಳಿಕವೂ ಚೇತರಿಸಿಕೊಳ್ಳಲಿಲ್ಲ. ನಾಯಕ ಶ್ರೇಯಸ್‌ ಅಯ್ಯರ್‌ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಅನಗತ್ಯವಾಗಿ ವಿಕೆಟ್‌ ಕಳೆದುಕೊಂಡರು. ಈ ವಿಕೆಟ್‌ ಪತನದ ಬೆನ್ನಲ್ಲೇ ಡಗೌಟ್‌ನಲ್ಲಿ ಕುಳಿತ್ತಿದ್ದ ಕೋಚ್‌ ಪಾಂಟಿಂಗ್‌ ನೇರವಾಗಿ ಡ್ರೆಸ್ಸಿಂಗ್‌ ರೂಮ್‌ಗೆ ತೆರಳಿ ಅಯ್ಯರ್‌ ಜತೆ ವಾಗ್ವಾದ ನಡೆಸಿದ್ದಾರೆ. ಇದರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.



ಶ್ರೇಯಸ್ ಅಯ್ಯರ್ ಔಟಾದಾಗ ಕಾಮೆಂಟ್ರಿ ಮಾಡುತ್ತಿದ್ದ, ಸುನಿಲ್ ಗವಾಸ್ಕರ್ ಕೂಡ ಕೋಪಗೊಂಡರು. “ಅದು ಒಳ್ಳೆಯ ಹೊಡೆತವಾಗಿರಲಿಲ್ಲ. ಇದೊಂದು ನಿಷ್ಪ್ರಯೋಜಕ ಹೊಡೆತವಾಗಿತ್ತು” ಎಂದು ಅವರು ಲೈವ್‌ನಲ್ಲೇ ಹೇಳಿದ್ದರು.