ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮದುವೆಯಾಗಿ ವಂಚಿಸಿದ ಪೊಲೀಸ್; ನ್ಯಾಯಕ್ಕಾಗಿ ಸಖಿ ಕೇಂದ್ರದ ಮೊರೆ ಹೋದ ಮಹಿಳಾ ಸಿಬ್ಬಂದಿ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯೊಬ್ಬರು, ಮಹಿಳಾ ಸಿಬ್ಬಂದಿಯನ್ನು ಸುಮಾರು 4-5 ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಬೇರೊಂದು ಮದುವೆಯಾಗಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ನ್ಯಾಯಕ್ಕಾಗಿ ಮಹಿಳಾ ಸಿಬ್ಬಂದಿ, ಸಖಿ ಕೇಂದ್ರದ ಮೊರೆ ಹೋಗಿದ್ದಾರೆ.

ಮದುವೆಯಾಗಿ ಮಹಿಳಾ ಸಿಬ್ಬಂದಿಗೆ ವಂಚಿಸಿದ ಪೊಲೀಸ್

Profile Prabhakara R Apr 27, 2025 9:06 PM

ತುಮಕೂರು: ನ್ಯಾಯ ಕೊಡಿಸಬೇಕಾದ ಪೊಲೀಸ್‌ನಿಂದಲೇ ಮಹಿಳಾ ಪೊಲೀಸ್ ಸಿಬ್ಬಂದಿ ಅನ್ಯಾಯಕ್ಕೊಳಗಾಗಿರುವ ಘಟನೆ ಕುಣಿಗಲ್ ತಾಲೂಕಿನ ಅಮೃತೂರು ಠಾಣೆಯಲ್ಲಿ ನಡೆದಿದೆ. ಅತಂತ್ರಳಾಗಿರುವ ಮಹಿಳಾ ಸಿಬ್ಬಂದಿ, ಪ್ರೀತಿಸಿ ಮದುವೆಯಾಗಿ ಈಗ ಬೇರೊಂದು ಮದುವೆಯಾಗಲು ಹೊರಟಿರುವ ಪೊಲೀಸ್‌ ವಿರುದ್ಧ ನ್ಯಾಯಕ್ಕಾಗಿ ಮೇಲಧಿಕಾರಿಗಳ ಮೊರೆ ಹೋಗಿದ್ದಾರೆ.

ಕುಣಿಗಲ್ ತಾಲೂಕಿನ ಅಮೃತೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಭಗವಂತರಾಯ್ ಬಿರಾದರ್, ಅದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯನ್ನು ಸುಮಾರು 4-5 ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಬೇರೊಂದು ಮದುವೆಯಾಗಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿ ಕೊಪ್ಪಳ ಮೂಲದವರಾಗಿದ್ದು, ಅಲ್ಲಿನ ಸಖಿ ಒನ್ ಸ್ಟಾಪ್ ಕೇಂದ್ರಕ್ಕೆ ತೆರಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಮಹಿಳೆಯ ಮನವಿ ಮೇರೆಗೆ ಸಖಿ ಒನ್ ಸ್ಟಾಪ್ ಕೇಂದ್ರದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಭಗವಂತ್‌ರಾಯ್‌ಗೆ ನೋಟಿಸ್ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Stabbing case: ಜಾಸ್ತಿ ಚಾಟಿಂಗ್‌ ಮಾಡಬೇಡ ಎಂದಿದ್ದಕ್ಕೆ ಪತಿಗೇ ಚಾಕು ಇರಿದ ಪತ್ನಿ!

image

ಅಮೃತೂರು ಠಾಣೆಯ ನೊಂದ ಮಹಿಳಾ ಸಿಬ್ಬಂದಿ ಮೂಲತಃ ಕೊಪ್ಪಳದವರಾಗಿದ್ದು, ಅಲ್ಲಿನ ಸಖಿ ಕೇಂದ್ರದಲ್ಲಿ ದೂರು ನೀಡಿರುವುದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ವಿಚಾರವಾಗಿ ನನಗೆ ಅಥವಾ ತುಮಕೂರಿನ ಸಖಿ ಕೇಂದ್ರಕ್ಕೆ ದೂರು ಸಲ್ಲಿಸಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.

| ಕೆ.ವಿ.ಅಶೋಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ; ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಸ್ಥಳೀಯರು!

Road accident_

ಚಿಕ್ಕನಾಯಕನಹಳ್ಳಿ: ತಾಲೂಕಿನ ಹಂದನಕೆರೆ ಹೋಬಳಿಯ ಗೋಪಾಲಪುರದ ಕೆರೆಕೋಡಿ ಸಮೀಪ ಮದ್ಯ ಸಾಗಿಸುತ್ತಿದ್ದ ವಾಹನ ಮಗುಚಿ ಬಿದ್ದಿದೆ. ಆಯತಪ್ಪಿ ಕೆಳಕ್ಕೆ ಉರುಳಿದ್ದರಿಂದ (Road accident) ವಾಹನದಲ್ಲಿದ್ದ ನೂರಾರು ಮದ್ಯದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನು ಗಮನಿಸಿದ ಸ್ಥಳೀಯರು ಮದ್ಯದ ಬಾಕ್ಸ್‌ಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಹಾಸನದಿಂದ ಚಳ್ಳಕೆರೆಗೆ ಮದ್ಯದ ಬಾಕ್ಸ್ ಸಾಗಣೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮದ್ಯದ ಬಾಕ್ಸ್‌ಗಳನ್ನು ಬೇರೆ ವಾಹನಕ್ಕೆ ವರ್ಗಾಯಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಗೆ ನಿಖರ ಮತ್ತು ಸ್ಪಷ್ಟ ಮಾಹಿತಿ ಪಡೆಯಲು ಉಪ ಅಬಕಾರಿ ನಿರೀಕ್ಷಕಿ ಆಶಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಒಳ ಬರುವ ಕರೆಗಳು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ತನಿಖಾ ವರದಿಯ ನಂತರ ಮದ್ಯ ಅಬಕಾರಿ ಇಲಾಖೆಯದ್ದೋ ಅಥವಾ ಖಾಸಗಿಯದ್ದೊ ಸ್ಪಷ್ಟವಾಗಲಿದೆ.