ಗ್ರೇಟ್ ಲರ್ನಿಂಗ್ ನ ಎಐ ಮೆಂಟರ್ ಮೂಲಕ ಕಲಿಕೆಯ ಹೊಸ ಅಧ್ಯಾಯ ಪ್ರಾರಂಭ

ಎಐ ಮೆಂಟರ್ 24/7 ಕಲಿಕಾರ್ಥಿಗಳ ಅನುಮಾನ ಪರಿಹರಿಸುತ್ತದೆ, ಕೋಡಿಂಗ್ ಸವಾಲುಗಳನ್ನು ನಿಭಾಯಿಸಲು ಸುಳಿವು ನೀಡುತ್ತದೆ ಮತ್ತು ಅಣಕು ಸಂದರ್ಶನಗಳನ್ನು ನಡೆಸಿ ವೈಯಕ್ತಿಕ ಅಭಿಪ್ರಾ ಯಗಳನ್ನು ನೀಡುತ್ತದೆ.

AI news
Profile Ashok Nayak Feb 6, 2025 5:27 PM

ಬೆಂಗಳೂರು: ವೃತ್ತಿಪರ ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಜಾಗತಿಕ ನಾಯಕರಾಗಿರುವ ಗ್ರೇಟ್ ಲರ್ನಿಂಗ್ ಸಂಸ್ಥೆಯು ಇದೀಗ ಎಐ ಮೆಂಟರ್ ಮತ್ತು ಎಐ ಟೀಚರ್ ಎಂಬ ಎರಡು ವಿನೂ ತನ ಎಐ ಆವಿಷ್ಕಾರಗಳನ್ನು ಬಿಡುಗಡೆ ಮಾಡಿದ್ದೇನೆ. ಈ ಎರಡು ಎಐ ಆವಿಷ್ಕಾರಗಳು ಡಿಜಿಟಲ್ ಕಲಿಕೆಯ ಅನುಭವವನ್ನು ಬದಲಾಯಿಸುವ ನಿರೀಕ್ಷೆ ಇದೆ. ಈ ಮೂಲಕ ಗ್ರೇಟ್ ಲರ್ನಿಂಗ್ ಸಂಸ್ಥೆಯು ವಿಶ್ವಾದ್ಯಂತ ಕಲಿಯುವ ಆಸಕ್ತಿ ಇರುವವರಿಗೆ ಕೈಗೆಟಕುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ. ಎಐ ಮೆಂಟರ್ ಪಡೆಯುವ ಮೂಲಕ ಕಲಿಕಾರ್ಥಿಗಳು ಅವರ ಪ್ರಯಾಣದ ಪ್ರತೀ ಹೆಜ್ಜೆಯಲ್ಲೂ ನೆರವು ಒದಗಿಸುವ ವೈಯಕ್ತಿಕ ಕಲಿಕಾ ತರಬೇತು ದಾರರನ್ನು ಹೊಂದುತ್ತಾರೆ.

ಈ ವ್ಯವಸ್ಥೆಯಲ್ಲಿ 24/7 ಕಲಿಕಾರ್ಥಿಗಳು ಅನುಮಾನ ಪರಿಹರಿಸಲಾಗುತ್ತದೆ ಮತ್ತು ಸೊಗಸಾದ ಕಲಿಕಾ ಅನುಭವ ಒದಗಿಸಲಾಗುತ್ತದೆ. ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುವಾಗ ಹಂತ ಹಂತ ದಲ್ಲಿಯೂ ಮಾರ್ಗದರ್ಶ ನವನ್ನು ನೀಡಲಾಗುತ್ತದೆ. ಕೋಡಿಂಗ್ ಮಾಡುವಾಗ ಕಲಿಯುವವರಿಗೆ ಮುಂದೇನು ಮಾಡ ಬೇಕೆಂದು ತೋಚದೇ ಇದ್ದರೆ ಅವರಿಗೆ ಅಂತಿಮ ಉತ್ತರವನ್ನು ನೇರವಾಗಿ ತಿಳಿಸದೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಳು ಅವರಿಗೆ ನೆರವಾಗುವ ಸುಳಿವುಗಳನ್ನು ನೀಡಲಾಗುತ್ತದೆ. ಉದ್ಯೋಗ ಸಂದರ್ಶನಗಳಂತೆಯೇ ಎಐ ಆಧರಿತ ಅಣಕು ಸಂದರ್ಶನಗಳನ್ನು ನಡೆಸುವ ಮೂಲಕ ಅವರಲ್ಲಿ ಸಂದರ್ಶನಗಳಲ್ಲಿ ಭಾಗವಹಿಸಲು ಬೇಕಾದ ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಉದ್ಯೋಗ ಪಡೆಯಲು ಸಿದ್ಧರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಫೆ.7 ರಂದು 1,122 ಗಾಯಕರಿಂದ ವಚನ ಗಾನ ವೈಭವ

ಆಯ್ದ ಕಲಿಕಾ ಗುಂಪುಗಳಿಗೆ ಕೆಲವು ತಿಂಗಳ ಹಿಂದೆಯೇ ಎಐ ಮೆಂಟರ್ ಅನ್ನು ಅನಾವರಣ ಗೊಳಿಸಲಾಗಿತ್ತು. ಅಲ್ಲಿ ಎಐ ಮೆಂಟರ್ ಅಸಾಧಾರಣ ಸಾಧನೆ ತೋರಿದೆ. 400,000ಕ್ಕೂ ಹೆಚ್ಚು ಕೋಡಿಂಗ್ ಸುಳಿವುಗಳನ್ನು ನೀಡಿದೆ. 130,000 ಅನುಮಾನಗಳನ್ನು ಪರಿಹರಿಸಲಾಗಿದೆ ಮತ್ತು 300ಕ್ಕೂ ಹೆಚ್ಚು ಅಣಕು ಸಂದರ್ಶನಗಳನ್ನು ನಡೆಸಲಾಗಿದೆ.

ಎಐ ಟೀಚರ್ ಒಂದು ಅಪೂರ್ವ ಆವಿಷ್ಕಾರವಾಗಿದ್ದು, ಹೆಚ್ಚು ವೈಯಕ್ತೀಕರಿಸಿದ ಮತ್ತು ಸಂವಾ ದಾತ್ಮಕ ಕಲಿಕಾ ಅನುಭವವನ್ನು ನೀಡುತ್ತದೆ. ಎಐ ಟೀಚರ್ ಒಬ್ಬರು ಅದ್ಭುತ ಶಿಕ್ಷಕರಂತೆ ಕಲಿಕಾ ರ್ಥಿಗಳ ಪರಿಸ್ಥಿತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಪಾಠಗಳನ್ನು ಕಸ್ಟಮೈಸ್ ಮಾಡುತ್ತದೆ. ಅವರ ತಿಳುವಳಿಕೆಯನ್ನು ಮೌಲ್ಯಮಾಪನ ಮಾಡುತ್ತದೆ, ಸಮಸ್ಯೆಯನ್ನು ಗುರುತಿಸುತ್ತದೆ ಮತ್ತು ಅವರ ಬೆಳವಣಿಗೆಗೆ ಅಗತ್ಯವಿರುವ ಮೌಲ್ಯಯುತವಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಗ್ರೇಟ್ ಲರ್ನಿಂಗ್‌ ನ 'ಮೆಂಟರ್ಡ್ ಲರ್ನಿಂಗ್' ಮಾದರಿಯ ಭಾಗವಾಗಿ ಕಲಿಕಾರ್ಥಿಗಳು ಈಗಾಗಲೇ ಉದ್ಯಮ ತಜ್ಞರು ಮತ್ತು ಅಧ್ಯಾಪಕರ ಮಾರ್ಗದರ್ಶನ ಪಡೆಯಬಹುದಾಗಿದ್ದು, ಈ ಆವಿಷ್ಕಾರಗಳು ಹೆಚ್ಚುವರಿ ಸೌಲಭ್ಯಗಳಾಗಿವೆ.

ಕಂಪನಿಯು ತನ್ನ ಎಲ್ಲಾ ಎಐ ಆಧರಿತ ಕಲಿಕಾ ಸೌಲಭ್ಯಗಳನ್ನು 'ಗ್ಲೇಡ್' (Glaide) ಬ್ರಾಂಡ್ ಅಡಿಯಲ್ಲಿ ನೀಡುತ್ತಿರುವುದಾಗಿ ಘೋಷಿಸಿದೆ. ಗ್ಲೇಡ್ (Glaide) ಎಂದರೆ 'ಜಿಎಲ್' (ಗ್ರೇಟ್ ಲರ್ನಿಂಗ್), 'ಎಐ' ಮತ್ತು 'ಎಇಡಿಇ' ಹೃಸ್ವರೂಪವಾಗಿದೆ.

ಈ ಕುರಿತು ಮಾತನಾಡಿರುವ ಗ್ರೇಟ್ ಲರ್ನಿಂಗ್‌ ನ ಸಂಸ್ಥಾಪಕ ಮತ್ತು ಸಿಇಓ ಮೋಹನ್ ಲಖಮ ರಾಜು ಅವರು , “ಅತ್ಯುತ್ತಮ ಕಲಿಕಾ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಏಕಮೇವ ಗುರಿ ಯಾಗಿದೆ. 2013ರಲ್ಲಿ ನಾವು ಮೊದಲಬಾರಿಗೆ ಅತ್ಯುತ್ತಮ ಗುಣಮಟ್ಟದ ತರಗತಿ ಶಿಕ್ಷಣ ಮತ್ತು ಆನ್‌ಲೈನ್ ತರಬೇತಿಯನ್ನು ಸಂಯೋಜಿಸುವ ಕೆಲಸ ಮಾಡಿದೆವು. 2017ರಲ್ಲಿ ಆನ್‌ಲೈನ್ ಕಲಿಕೆ ಯನ್ನು ಜಾಗತಿಕವಾಗಿ ಪರಿಚಯಿಸಿದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರವಾದೆವು.

ಆ ಮೂಲಕ ಪರಿಣಿತ ಮಾರ್ಗದರ್ಶನದ ಜೊತೆಗೆ ಸ್ವಯಂ ಕಲಿಕೆಯನ್ನು ಸಂಯೋಜಿಸಿ ಉತ್ತಮ ಫಲಿತಾಂಶ ಬರುವಂತೆ ಮಾಡಿದೆವು. ಆದರೆ ಅದ್ಭುತ ಶಿಕ್ಷಕರು ಕೆಲವೇ ಮಂದಿ ಇರುತ್ತಾರೆ. ಎಲ್ಲ ರಿಗೂ ಅಂಥಾ ಶಿಕ್ಷಕರಿಂದ ಪಾಠ ಕಲಿಯುವ ಸೌಭಾಗ್ಯ ದೊರೆಯುವುದಿಲ್ಲ. ಅದಕ್ಕಾಗಿ ನಾವು ಎಐ ಬಳಸಿಕೊಂಡು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಶ್ರೇಷ್ಠ ಶಿಕ್ಷಕರು ಮಾಡ ಬಹುದಾದ ಮ್ಯಾಜಿಕ್ ಅನ್ನು ಎಐ ಮೂಲಕ ಒದಗಿಸುತ್ತಿದ್ದೇವೆ. ಎಐ ಮತ್ತಷ್ಟು ಅಭಿವೃದ್ಧಿ ಹೊಂದುತ್ತಾ ಹೋದಂತೆ ನಾವು ಉನ್ನತ ಗುಣಮಟ್ಟದ ಶಿಕ್ಷಣವನ್ನು ಹೆಚ್ಚು ಸುಲಭವಾಗಿ, ಕೈಗೆಟುಕುವ ದರದಲ್ಲಿ ಒದಗಿಸಲು ಶ್ರಮಿಸುತ್ತಾ ಇರುತ್ತೇವೆ” ಎಂದು ಹೇಳಿದರು.

ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಗ್ರೇಟ್ ಲರ್ನಿಂಗ್ ಸಂಸ್ಥೆಯು ತನ್ನ ಎಐ ಆಧರಿತ ಕಲಿಕಾ ಸೌಲಭ್ಯಗಳನ್ನು ಹೊಸ ಮತ್ತು ಹೆಚ್ಚು ಜನರಿಗೆ ತಲಪಿಸಲು ಪ್ರಯತ್ನಿಸಲಿದೆ. ನಮ್ಮ ವೃತ್ತಿ ಪರ ಮತ್ತು ವೈಯಕ್ತಿಕ ಜೀವನದಲ್ಲಿ ಎಐ ಹಾಸುಹೊಕ್ಕಾಗಿ ಹೋಗಿರುವುದರಿಂದ ಈ ಬದಲಾವಣೆಗೆ ಹೊಂದಿಕೊಳ್ಳಲು ನೆರವಾಗಲು ಮತ್ತು ವಿಶ್ವಾಸಾರ್ಹ ಕಲಿತಾ ಸಂಸ್ಥೆಯಾಗಲು ಗ್ರೇಟ್ ಲರ್ನಿಂಗ್ ಬಯಸುತ್ತದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?