ಮುಂಬಯಿ: ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ ನಿರ್ದೇಶಿಸುತ್ತಿರುವ UI ಸಿನಿಮಾದ (UI movie) ಟ್ರೇಲರ್ ನೋಡಿ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ (Aamir Khan) ಥ್ರಿಲ್ ಆಗಿದ್ದಾರೆ. ವಾಹ್, It’s mind blowing ಎಂದು ಉದ್ಗರಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಉಪೇಂದ್ರ ಅವರು ಶೇರ್ ಮಾಡಿಕೊಂಡಿದ್ದಾರೆ.
ನಾನು ಉಪೇಂದ್ರ ಅವರ ಅಭಿಮಾನಿ ಎಂದು ಆಮೀರ್ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಉಪೇಂದ್ರ ಅವರ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಡಿಸೆಂಬರ್ 20ರಂದು ನನ್ನ ಬೆಸ್ಟ್ ಫ್ರೆಂಡ್ ಉಪೇಂದ್ರ ಅವರ ಸಿನಿಮಾ ತೆರೆಗೆ ಬರಲಿದೆ. ನೀವೆಲ್ಲರೂ ಮಿಸ್ ಮಾಡದೇ ನೋಡಿ ಎಂದು ಆಮೀರ್ ಹೇಳಿದ್ದಾರೆ.
Dear Aamir sir, it was a dream come true moment to meet and seek your blessings for UI The Warner Movie 🙏
— Upendra (@nimmaupendra) December 11, 2024
thanks for your love and support ❤️#UiTheMovieOnDEC20th#Aamirkhan#UppiDirects #Upendra @nimmaupendra #GManoharan @Laharifilm @enterrtainers @kp_sreekanth… pic.twitter.com/EcPcIVgS8z
UI ಚಿತ್ರದ ಟ್ರೇಲರ್ ನೋಡಿದೆ. ವಾಹ್ ಅದ್ಭುತ. ನಿಜಕ್ಕೂ ಇದು ಮೈಂಡ್ ಬ್ಲೋವಿಂಗ್ ಎಂದಿದ್ದಾರೆ ಆಮೀರ್ ಖಾನ್. ಹಿಂದಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಇಷ್ಟಪಡ್ತಾರೆ ಎಂಬ ವಿಶ್ವಾಸವನ್ನು ಆಮೀರ್ ಖಾನ್ ವ್ಯಕ್ತಪಡಿಸಿದ್ದಾರೆ. ಪಕ್ಕದಲ್ಲೇ ಇದ್ದ ಉಪೇಂದ್ರ ಅವರು ಥ್ಯಾಂಕ್ಯು ಸರ್ ಎನ್ನುತ್ತ ಆಮೀರ್ ಖಾನ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಭಾರೀ ನಿರೀಕ್ಷೆ ಹುಟ್ಟಿಸಿರುವ UI ಪ್ಯಾನ್ ಇಂಡಿಯಾದ ಚಿತ್ರವಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಬೇರೆ ಭಾಷೆಗಳ ಹಕ್ಕುಗಳು ದುಬಾರಿ ಬೆಲೆಗೆ ಸೇಲ್ ಆಗಿವೆ. ಉಪೇಂದ್ರ ಈ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ UI ನಲ್ಲಿ ಕತೆ ನಿರೂಪಿಸಿದ್ದಾರೆ ಎನ್ನಲಾಗಿದೆ.
ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರಕ್ಕೆ ಎ ಸಿನಿಮಾ ಖ್ಯಾತಿಯ ಎಚ್.ಸಿ.ವೇಣು ಛಾಯಾಗ್ರಹಣದ ಕೈಚಳಕ ತೋರಿಸಿದ್ದಾರೆ. ಈ ಚಿತ್ರದ ಒಟ್ಟು ಬಜೆಟ್ 100 ಕೋಟಿ ರೂ. ಎನ್ನಲಾಗಿದೆ.