Friday, 15th November 2024

Air India Express : ಹಾರಾಟದ ನಡುವೆ ಸಮಸ್ಯೆ ಉಂಟಾಗಿ ಆತಂಕ ಸೃಷ್ಟಿಸಿದ್ದ ಏರ್‌ ಇಂಡಿಯಾ ವಿಮಾನ ಸೇಫ್‌ ಲ್ಯಾಂಡ್‌

ಬೆಂಗಳೂರು: ಹೈಡ್ರಾಲಿಕ್‌ ವ್ಯವಸ್ಥೆ ಕೈಕೊಟ್ಟ ಕಾರಣ ಹಾರಾಟದ ನಡುವೆಯೆ ತುರ್ತು ಪರಿಸ್ಥಿತಿಗೆ ತಲುಪಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (Air India Express) ಸೇಫ್ ಲ್ಯಾಂಡ್ ಆಗಿದೆ. ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸಕಲ ಸಿದ್ಧತೆಯ ನಂತರ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ಕ್ಯಾಪ್ಟನ್ ಗೌತಮ್ ಅವರು ವಿಮಾನವನ್ನು ಅನುಭವ ಬಳಸಿ ಲ್ಯಾಂಡ್ ಮಾಡಿ 141 ಪ್ರಯಾಣಿಕರ ಜೀವ ಉಳಿಸಿದ್ದಾರೆ.

141 ಪ್ರಯಾಣಿಕರನ್ನು ಹೊತ್ತ ಬೋಯಿಂಗ್ 737 ವಿಮಾನವು ತಿರುಚ್ಚಿ ವಿಮಾನ ನಿಲ್ದಾಣದಿಂದ ಸಂಜೆ 5:45 ಕ್ಕೆ ಹೊರಟು ರಾತ್ರಿ 8:15 ಕ್ಕೆ ಲ್ಯಾಂಡ್ ಆಯಿತು.

ವಿಮಾನವು ಲ್ಯಾಂಡ್ ಆಗಿರುವದನ್ನು ನಾಗರಿಕ ವಿಮಾನಯಾನ ಸಚಿವಾಲಯ ದೃಢಪಡಿಸಿದೆ. ತಿರುಚಿರಾಪಳ್ಳಿಯಿಂದ ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಐಎಕ್ಸ್ 613 ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಡಿಜಿಸಿಎ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಲ್ಯಾಂಡಿಂಗ್ ಗೇರ್ ತೆರೆಯುತ್ತಿತ್ತು. ವಿಮಾನ ನಿಲ್ದಾಣವನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ” ಎಂದು ಸಚಿವಾಲಯ ತಿಳಿಸಿದೆ.

ವಿಮಾನಕ್ಕೆ ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಲಾಗಿತ್ತು. ಆದರೆ ವಿಮಾನವು ಸಾಮಾನ್ಯವಾಗಿ ಮತ್ತು ಸುರಕ್ಷಿತವಾಗಿ ಇಳಿಯಿತು ಎಂದು ಸಚಿವಾಲಯ ತಿಳಿಸಿದೆ. “ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅವರಿಗೆ ಬೆಲ್ಲಿ ಲ್ಯಾಂಡಿಂಗ್‌ಗೆ ಸಲಹೆ ನೀಡಲಾಗಿತ್ತು. ಆದರೆ ವಿಮಾನವು ಯಾವುದೇ ಸಮಸ್ಯೆಯಿಲ್ಲದೆ ಇಳಿಯಿತು. ಘಟನೆಯ ಬಗ್ಗೆ ಆಂತರಿಕ ತನಿಖೆ ಪ್ರಾರಂಭಿಸಲಾಗಿದೆ ಮತ್ತು ವಾಯುಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎಗೆ ಮಾಹಿತಿ ನೀಡಲಾಗಿದೆ” ಎಂದು ಅದು ಹೇಳಿದೆ.

ವಿಮಾನವು ಶಾರ್ಜಾಗೆ ತೆರಳುತ್ತಿತ್ತು. ಟೇಕ್‌ಆಫ್ ಆದ ತಕ್ಷಣ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಪೈಲೆಟ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ತುರ್ತು ಲ್ಯಾಂಡಿಂಗ್‌ಗೆ ಸಿದ್ದತೆ ನಡೆಸಲಾಘಿತ್ತು. ಹೀಗಾಗಿ ವಿಮಾನವನ್ನು ಮೂರು ಗಂಟೆಗಳಿಂದ ತಿರುಚ್ಚಿ ವಿಮಾನ ನಿಲ್ದಾಣದ ಮೇಲೆಯೇ ಸುತ್ತಾಡಿಸಲಾಘಿದೆ. ಇಂಧನ ಖಾಲಿಯಾದ ಬಳಿಕ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಅದಕ್ಕಾಘಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ಹೈಡ್ರಾಲಿಕ್ ಸಿಸ್ಟಮ್ ವೈಫಲ್ಯದಿಂದಾಗಿ, ಲ್ಯಾಂಡಿಂಗ್ ಗೇರ್, ಬ್ರೇಕ್ ಮತ್ತು ಫ್ಲಾಪ್‌ಗಳಂಥ ಪ್ರಮುಖ ವ್ಯವಸ್ಥೆಗಳು ಕೆಲಸ ಮಾಡಿಲ್ಲ. ಇವೆಲ್ಲವೂ ನಿರ್ಣಾಯಕ ಅಂಶವಾಗಿದ್ದು ಹೀಗಾಗಿ ವಿಮಾನವನ್ನು ಬೆಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ಪೈಲಟ್ ಈ ವಿಷಯವನ್ನು ತಿರುಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಬಳಿಕ ಇದರಿಂದಾಗಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

ಸುರಕ್ಷಿತ ಲ್ಯಾಂಡಿಂಗ್ಗೆ ಪ್ರಯತ್ನಿಸುವ ಮೊದಲು ಹೆಚ್ಚುವರಿ ಇಂಧನ ಖಾಲಿ ಮಾಡಲು ವಿಮಾನವು ತಿರುಚ್ಚಿ ವಾಯುಪ್ರದೇಶದ ಮೇಲೆ 2 ಗಂಟೆಗೂ ಹೆಚ್ಚು ಕಾಲ ಸುತ್ತಿದೆ. ಹೈಡ್ರಾಲಿಕ್ ವೈಫಲ್ಯದ ಬಗ್ಗೆ ಪೈಲಟ್ ಗ್ರೌಂಡ್ ಕಂಟ್ರೋಲ್‌ಗೆ ಎಚ್ಚರಿಕೆ ನೀಡಿದ್ದರು.

ಸ್ಥಳೀಯ ಅಧಿಕಾರಿಗಳು ಆತಂಕಕ್ಕೆ ತಕ್ಷಣದ ಕಾರಣವಿಲ್ಲ ಎಂದು ಭರವಸೆ ನೀಡಿದ್ದಾರೆ. ಇಂಧನವನ್ನು ಖಾಲಿ ಮಾಡಲು ಇದು ಪ್ರಸ್ತುತ ವಾಯುಪ್ರದೇಶದ ಸುತ್ತಲೂ ಸುತ್ತುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ಆಂಬ್ಯುಲೆನ್ಸ್‌ಗಳು ಮತ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದ್ದೇವೆ” ಎಂದು ಜಿಲ್ಲಾಧಿಕಾರಿ ಮೊದಲೇ ಹೇಳಿದ್ದರು.

ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ flightradar24.com ವಿಮಾನವು ತಿರುಚಿರಾಪಳ್ಳಿಯ ಮೇಲೆ ಲೂಪಿಂಗ್ ಮಾಡುತ್ತಿರುವುದನ್ನು ತೋರಿಸುತ್ತಿತ್ತು.