Vishwavani Editorial: ರಚನಾತ್ಮಕ ಚರ್ಚೆಗೆ ಅವಕಾಶ ಸಿಗಲಿ
2025ನೇ ಸಾಲಿನ ಮೊದಲ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ರಾಜ್ಯ ಪಾಲ ಥಾವರ್‌ಚಂದ್ ಗೆಹ್ಲೋಥ್ ‘ಸಾಂಪ್ರದಾಯಿಕ’ ಭಾಷಣ ಮಾಡಲಿದ್ದಾರೆ. ಬಳಿಕ ಅಗಲಿದ ನಾಯಕರಿಗೆ ಸಂತಾಪ ಸೂಚಿಸುವುದರೊಂದಿಗೆ ಅಂದಿನ ಅಧಿವೇಶನ ಮುಕ್ತಾಯ ವಾಗಲಿದೆ. ಮಂಗಳವಾರದಿಂದ ಸದನ ಆಡಳಿತ-ಪ್ರತಿಪಕ್ಷ ಶಾಸಕರ ನಡುವೆ ವಾಕ್ಸಮರಕ್ಕೆ ವೇದಿಕೆ ಯಾಗುವ ಸಾಧ್ಯತೆಯಿದೆ.


ಆಡಳಿತ ಹಾಗೂ ಪ್ರತಿಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಎರಡು ಆಧಾರಸ್ತಂಭಗಳು. ಚುನಾವಣೆ ವೇಳೆ ರಾಜಕೀಯವಾಗಿ ಹೋರಾಟ ನಡೆಸಿ ವಿಧಾನಮಂಡಲಕ್ಕೆ ಆಗಮಿಸುವ ಎರಡೂ ಕಡೆಯ ಶಾಸಕರು, ಒಮ್ಮೆ ಪ್ರವೇಶಿಸಿದ ಬಳಿಕ ಪಕ್ಷದ ವ್ಯವಸ್ಥೆ ಮೀರಿ ರಾಜ್ಯದ ಅಭಿವೃದ್ಧಿ, ಜನರ ಒಳಿತಿನ ಕುರಿತು ಮಾತಿನ ಮಂಟಪದಲ್ಲಿ ಚರ್ಚಿಸಬೇಕು. ಅದರಲ್ಲಿ ಯೂ ಪ್ರತಿಪಕ್ಷ ಸ್ಥಾನದಲ್ಲಿರುವವರು ಆಡಳಿತ ಪಕ್ಷವನ್ನು ಎಚ್ಚರಿಸುವ, ಜನ ವಿರೋಧಿ ನಡೆಗಳ ಬಗ್ಗೆ ಸರಕಾರದ ಗಮನ ಸೆಳೆದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಧ್ವನಿಯಾಗ ಬೇಕಿದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯ ಅಥವಾ ಸಂಸತ್ ಕಲಾಪದಲ್ಲಿ, ಜನಪರ ಚರ್ಚೆಗಿಂತ ಹೆಚ್ಚಾಗಿ ರಾಜಕೀಯ ವಿಷಯಗಳನ್ನೇ ಮುಂದಿಟ್ಟು ಅದಕ್ಕೆ ‘ರಾಜ್ಯದ ಜನರ ಒಳಿತಿನ’ ಲೇಪನವನ್ನು ಹಚ್ಚಿ ಆರೋಪ ಮಾಡುವುದು, ಇದಕ್ಕೆ ಆಡಳಿತ ಪಕ್ಷದ ಕಡೆಯಿಂದ ರಾಜಕೀಯವಾಗಿಯೇ ಉತ್ತರಿಸುವುದು, ರಾಜಕೀಯ ಹೇಳಿಕೆ ಗಳನ್ನು ನೀಡುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: Vishwavani Editorial: ಭಾಷಾ ವಿದ್ವೇಷಕ್ಕೆ ಅವಕಾಶ ಬೇಡ
2025ನೇ ಸಾಲಿನ ಮೊದಲ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ರಾಜ್ಯ ಪಾಲ ಥಾವರ್‌ಚಂದ್ ಗೆಹ್ಲೋಥ್ ‘ಸಾಂಪ್ರದಾಯಿಕ’ ಭಾಷಣ ಮಾಡಲಿದ್ದಾರೆ. ಬಳಿಕ ಅಗಲಿದ ನಾಯಕರಿಗೆ ಸಂತಾಪ ಸೂಚಿಸುವುದರೊಂದಿಗೆ ಅಂದಿನ ಅಧಿವೇಶನ ಮುಕ್ತಾಯ ವಾಗಲಿದೆ. ಮಂಗಳವಾರದಿಂದ ಸದನ ಆಡಳಿತ-ಪ್ರತಿಪಕ್ಷ ಶಾಸಕರ ನಡುವೆ ವಾಕ್ಸಮರಕ್ಕೆ ವೇದಿಕೆ ಯಾಗುವ ಸಾಧ್ಯತೆಯಿದೆ. ಉಭಯ ಪಕ್ಷಗಳು ಸದ್ಯಕ್ಕೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಗಮನಿಸಿದರೆ ಬೆಳಗಾವಿ ಅಧಿವೇಶನದಂತೆ ಬಜೆಟ್ ಅಧಿವೇಶನವೂ ರಾಜಕೀಯ ಕಾಳಗಕ್ಕೆ ವೇದಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ರಾಜ್ಯದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಯಾವುದೇ ಕಾರ‍್ಯಸೂಚಿ ಯನ್ನೂ ಎರಡೂ ಪಕ್ಷಗಳು ಮುಂದಿಟ್ಟಿಲ್ಲ. ಚಿಂತಕರ ಚಾವಡಿ ಎನ್ನಲಾಗುವ ವಿಧಾನ ಪರಿಷತ್‌ನಲ್ಲೂ ರಾಜಕೀಯ ಚರ್ಚೆಯೇ ಮೇಲುಗೈ ಸಾಧಿಸುತ್ತಿರುವುದು ವಿಷಾದನೀಯ. ಈ ಹಿಂದೆ ಪರಿಷತ್‌ನಲ್ಲಿ ಅನೇಕ ವೇಳೆ ಪಕ್ಷಗಳನ್ನು ಮೀರಿದ ಚರ್ಚೆಗಳು ನಡೆದು, ಪರಿ ಹಾರ ಕಂಡುಕೊಂಡಿದ್ದಿದೆ.
ಆಡಳಿತ ಪಕ್ಷದ ಸದಸ್ಯರೇ, ಸರಕಾರದ ನೀತಿಗಳನ್ನು ಖಂಡಿಸಿರುವ ನಿದರ್ಶನಗಳಿವೆ. ಉತ್ತಮ ಸಂಸದೀಯ ನಡವಳಿಕೆಯ ಹಿಂದಿನ ಉದಾಹರಣೆಗಳನ್ನು ಮಾದರಿಯಾಗಿಟ್ಟು ಕೊಂಡು ಉಭಯ ಸದನದ ಶಾಸಕರು ರಾಜ್ಯದ ಒಳಿತಿನ ದೃಷ್ಟಿಯಿಂದ ರಚನಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತಾಗಬೇಕು.