ಗಯಾ: ಊರಿಂದ ಬೇರೆ ಊರಿಗೆ ಬಂದು ಮಾರುವೇಷದಲ್ಲಿ ಬದುಕುವವರನ್ನು ನೋಡಿರುತ್ತೇವೆ, ಆದರೆ ಇಲ್ಲೊಬ್ಬ ದೇಶ ಬಿಟ್ಟು ಬಂದು ಬಾಬಾ ಆಗಿ ಇದೀಗ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಹೌದು ಬಿಹಾರದ(Bihara) ಗಯಾ ವಿಮಾನ ನಿಲ್ದಾಣದಲ್ಲಿ(Gaya airport) ಬಾಂಗ್ಲಾದೇಶದ(Bangladesha) ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಈ ವ್ಯಕ್ತಿ ಕಳೆದ 8 ವರ್ಷಗಳಿಂದ ಬೌದ್ಧ ಸನ್ಯಾಸಿ ವೇಷ ಧರಿಸಿಕೊಂಡರು ಗಯಾದಲ್ಲಿ ಕದ್ದುಮುಚ್ಚಿ( illegal immigrants) ವಾಸಿಸುತ್ತಿದ್ದ. ಆದರೆ ಥೈಲ್ಯಾಂಡ್‌ಗೆ ತೆರಳಲು ಗಯಾ ವಿಮಾನ ನಿಲ್ದಾಣಕ್ಕೆ ಬಂದಾಗ, ಭದ್ರತಾ ಅಧಿಕಾರಿಗಳಿಗೆ ಅವರ ಪಾಸ್‌ಪೋರ್ಟ್ ಬಗ್ಗೆ ಅನುಮಾನ ಬಂದು ವಿಚಾರಿಸಿದ್ದಾರೆ. ವಿಚಾರಣೆ ವೇಳೆ ಎಲ್ಲವೂ ಬಯಲಾಗಿದೆ. ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಗಯಾದ ಮಿಯಾನ್ ಬಿಘಾದಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶದ ಪ್ರಜೆಯನ್ನು ಬಾಬು ಜೊ ಬರುವಾ ಅಲಿಯಾಸ್ ರಾಜೀವ್ ದತ್ತ ಎಂದು ಗುರುತಿಸಲಾಗಿದೆ.ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದು, ಬೌದ್ಧ ಸನ್ಯಾಸಿಯಂತೆ ನಟಿಸಿ ಗಯಾದಲ್ಲಿನ ಮಠದಲ್ಲಿ ನೆಲೆಸಿದ್ದ. ಆತ ನಕಲಿ ದಾಖಲೆಗಳನ್ನು ಬಳಸುತ್ತಿದ್ದ ಎಂದು ಕಂಡು ಬಂದಿದೆ. ಇದೀಗ ಆತನ್ನು ಬಂಧಿಸಿದ್ದು, ಮುಂದಿನ ಕ್ರಮಕ್ಕಾಗಿ ಮಗದ ವೈದ್ಯಕೀಯ ಪೊಲೀಸ್ ಠಾಣೆ ಗಯಾಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: Viral Video: ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಮಾರಕಾಸ್ತ್ರ ಹಿಡಿದುಕೊಂಡು ಬೆನ್ನಟ್ಟಿದ ದರೋಡೆಕೋರರು; ವಿಡಿಯೊ ವೈರಲ್
ಆತನ ಬಂಧನದ ನಂತರ, ಅಧಿಕಾರಿಗಳು ಆತನ ಬಳಿಯಿದ್ದ ವಿವಿಧ ಹೆಸರುಗಳ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, 1560 ಥಾಯ್ ಬಹ್ತ್, 5 ಯುರೋಗಳು, ಸೇರಿದಂತೆ 411 ಯುಎಸ್ ಡಾಲರ್ ಮತ್ತು ಭಾರತೀಯ ಕರೆನ್ಸಿಯಲ್ಲಿ ₹ 3,800 ಸೇರಿದಂತೆ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಯಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ( SP ) ಆಶಿಶ್ ಭಾರ್ತಿ ತಿಳಿಸಿದ್ದಾರೆ.
ಬಿಹಾರದಲ್ಲಿ ಬಾಂಗ್ಲಾದೇಶದ ಪ್ರಜೆಯೊಬ್ಬ ಸಿಕ್ಕಿಬಿದ್ದಿರುವುದು ಇದೇ ಮೊದಲೇನಲ್ಲ. ಬಾಂಗ್ಲಾದೇಶದ ನಾಗರಿಕರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುಕೊಳ್ಳುವುದರ ಮೂಲಕ ಭಾರತದಲ್ಲಿ ಅಕ್ರಮವಾಗಿ ನೆಲೆಸುತ್ತಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಿಕ್ಕಿ ಬಿದ್ದಿರುವುದು ಕಂಡು ಬರುತ್ತದೆ. ಕೇವಲ ಉತ್ತರ ಭಾರತದಲ್ಲಿ ಮಾತ್ರ ಅಲ್ಲ ಕರ್ನಾಟಕ ಪೊಲೀಸರು ಕೂಡ ಈ ದಂಧೆಯನ್ನು ಭೇದಿಸಿದ್ದರು.
ಬೆಂಗಳೂರು ಪೊಲೀಸರು ಪಾಕಿಸ್ತಾನಿ ಪ್ರಜೆ ಹಾಗೂ ಆತನ ಪತ್ನಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದರು. ಈ ಕುಟುಂಬ ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಿಂದ ನಕಲಿ ಹೆಸರು ಮತ್ತು ದಾಖಲೆಗಳೊಂದಿಗೆ ಅಕ್ರಮವಾಗಿ ನೆಲೆಸಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ವ್ಯಕ್ತಿಯ ಪತ್ನಿ ಬಾಂಗ್ಲಾದೇಶದವರಾಗಿದ್ದು, ಇಬ್ಬರೂ ಢಾಕಾದಲ್ಲಿ ಮದುವೆಯಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಹಾಗೂ ಉಡುಪಿಯಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾ ಪ್ರಜೆಗಳನ್ನು ಉಡುಪಿ ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಉಡುಪಿಯ ಮಲ್ಪೆ ಬಳಿ ಹಲವು ದಿನಗಳಿಂದ ವಾಸವಿದ್ದ ಇವರು ನಕಲಿ ಆಧಾರ್ ಕಾರ್ಡ್ ಹಾಗೂ ದಾಖಲೆಗಳನ್ನು ಹೊಂದಿದ್ದರು. ಮೀನುಗಾರ ಕಾರ್ಮಿಕರಾಗಿ ಇಲ್ಲಿ ಬಂದಿದ್ದು, ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.