Friday, 25th October 2024

Chikkaballapur Rain: ಚಿಂತಾಮಣಿಯಲ್ಲಿ ಮಳೆ ಆರ್ಭಟ, ಮಳೆ ಅಬ್ಬರಕ್ಕೆ ವಾಹನ ಸವಾರರ ಪರದಾಟ

ಮನೆಗಳು ಅಂಗಡಿಗಳು ಸೇರಿದಂತೆ ರೇಷ್ಮೆ ಗೂಡಿನ ಮಾರುಕಟ್ಟೆಗೆ ನುಗ್ಗಿದ ನೀರು

ಚಿಂತಾಮಣಿ: ಕಳೆದ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಸುರಿದ ಬಾರಿ ಮಳೆಗೆ ಚಿಂತಾಮಣಿ ನಗರದ ಹಲವು ರಸ್ತೆಗಳು ಜಲಾವೃತಗೊಂಡು ಪಾದಚಾರಿಗಳು ಸೇರಿ ವಾಹನ ಸವಾರರು ಪರದಾಡುವಂತಾಯಿತು.

ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ನಗರದ ರಾಯಲ್ ಸ್ಕೂಲ್ ರಸ್ತೆ, ಎಂಜಿ ರಸ್ತೆ, ಬೆಂಗಳೂರು ರಸ್ತೆಯ ಕಿಶೋರ್ ವಿದ್ಯಾ ಭವನ ಮುಂದೆ, ಚೇಳೂರು ರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿ, ನಗರ ಹೊರವಲಯದ ಕರಿಯೊಲ್ಲಿ ಬಳಿ,ಕೋಲಾರ ರಸ್ತೆಯ, ಟೋಲ್ ಗೇಟ್ ಸೇರಿ ಹಲವು ಕಡೆ ಚರಂಡಿಗಳಿಂದ ನೀರು ರಸ್ತೆಗೆ ಹರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.

ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಾದ ಪರಿಣಾಮ ಪಿಸಿಆರ್ ಕಾಂಪ್ಲೆಕ್ಸ್ ನಿಂದ ಬಂಬೂ ಬಜಾರ್ ತಿರುವಿನ ವರೆಗೂ ಮತ್ತು ಸಾರಿಗೆ ಬಸ್ ನಿಲ್ದಾಣದ ಬಳಿಯ ಹೂ ಮಾರುಕಟ್ಟೆ ಯ ಬಳಿ ಪ್ರತಿ ಸಣ್ಣ ಮಳೆಯಾದರೂ ಸಹ ರಸ್ತೆಯಲ್ಲಿ ಬಾರಿ ಪ್ರಮಾಣದಲ್ಲಿ ನೀರು ನಿಲ್ಲುವುದರಿಂದ ಸ್ಥಳಿಯ ಅಂಗಡಿಗಳಿಗೆ,ಪಾದಚಾರಿಗಳಿಗೆ ವಾಹನ ಸವಾರರಿಗೆ ಸಮಸ್ಯೆಯಾಗಿ ತೊಡಗಿದೆ.

ಇನ್ನು ನಗರದ ತಾಲೂಕು ಪಂಚಾಯಿತಿ  ಕಚೇರಿ ಒಳಗೆ ನೀರು ಬಂದು ತುಂಬಿಕೊಂಡಿದ್ದು ಕಚೇರಿಯ ಕಾರಿಡಾರ್ ತುಂಬ ನೀರು ಹರಿದು ಕೊಠಡಿಗಳ ಒಳಗೆನುಗ್ಗುವಂತಾಗಿದೆ ಇದರಿಂದ ಕಚೇರಿ ಆವರಣವೆಲ್ಲ  ಮಳೆನೀರಿನಿಂದ ಕೂಡಿ ಕಸಕಡ್ಡಿ  ಹರಿದು ಕೊಳಚೆಯಾಗಿತೊಡಗಿದೆ.

ತಾಲೂಕ್ ಪಂಚಾಯತಿ ಕಚೇರಿಯನ್ನು ಅವೈಜ್ಞಾನಿಕ ವಾಗಿ ನಿರ್ಮಾಣ ಮಾಡಿದ್ದರಿಂದಲ್ಲೆ ಇಂದು ಕಚೇರಿ ಆವರಣಕ್ಕೆ ನೀರುನುಗ್ಗುತ್ತಿವೆ ಎಂದು ಕಚೇರಿಗೆ ಬರಿವ ಸಾರ್ವಜನಿಕರು ಮಾತನಾಡತೊಡಗಿದರು.

ಮಂಗಳವಾರ ಮಧ್ಯಾಹ್ನ ಸುರಿದ ಬಾರಿ ಮಳೆಗೆ ನಗರದ ರೇಷ್ಮೆಗೂಡು ಮಾರುಕಟ್ಟೆಗೆ ನೀರುನುಗ್ಗಿ ಮಾರುಕಟ್ಟೆಯ ಆವರದಲ್ಲಿದ್ದ ದ್ವಿಚಕ್ರವಾಹನಗಳು, ಕಾರುಗಳು ಮುಳಗಿದ್ದು ರೈತರು ಡೀಲರ್ಸ್ಗಳು ಪರದಾಡುವಂತಾಯಿತು.

ಇದನ್ನೂ ಓದಿ: Chikkaballapur News: ಹುಟ್ಟುಹಬ್ಬ ಭವಿಷ್ಯದ ಬದುಕಿನ ಎಚ್ಚರಿಕೆ: ತಹಶೀಲ್ದಾರ್ ಮಹೇಶ್ ಪತ್ರಿ