Thursday, 14th November 2024

IND vs AUS: ʻಕಿಂಗ್‌ ಈಸ್‌ ಬ್ಯಾಕ್‌ʼ-ವಿರಾಟ್‌ ಕೊಹ್ಲಿಯ ಟೀಕಾಕಾರರಿಗೆ ರವಿ ಶಾಸ್ತ್ರಿ ತಿರುಗೇಟು!

IND vs AUS: 'The King is back in his territory'-Ravi Shastri warns Virat Kohli's doubters

ನವದೆಹಲಿ: ತಮ್ಮ ನೆಚ್ಚಿನ ಸ್ಥಳವಾದ ಆಸ್ಟ್ರೇಲಿಯಾದಲ್ಲಿ ನಡೆಯುವ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಲಿದ್ದಾರೆಂದು ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ಹಾಗೂ ಮಾಜಿ ಆಲ್‌ರೌಂಡರ್‌ ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ವಿರುದ್ದದ ಎರಡು ತವರು ಟೆಸ್ಟ್‌ ಸರಣಿಗಳಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಕಿವೀಸ್‌ ವಿರುದ್ಧದ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಗಳಿಸಿದ್ದು ಕೇವಲ 93 ರನ್‌ಗಳನ್ನು ಮಾತ್ರ. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿಯ ಸ್ಥಾನವನ್ನು ಹಲವರು ಪ್ರಶ್ನೆ ಮಾಡಿದ್ದರು. ಬಾಂಗ್ಲಾ ಎದುರು ಟೆಸ್ಟ್‌ ಸರಣಿ ಗೆದ್ದಿದ್ದ ಭಾರತ ತಂಡ, ಕಿವೀಸ್‌ ಎದುರು ಮೂರೂ ಪಂದ್ಯಗಳಲ್ಲಿ ಸೋತು ವೈಟ್‌ ವಾಷ್‌ ಆಘಾತ ಅನುಭವಿಸಿತ್ತು. ಇದೀಗ ನವೆಂಬರ್‌ 22 ರಂದು ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ಪರ್ತ್‌ನಲ್ಲಿ ಅಭ್ಯಾಸ ನಡೆಸುತ್ತಿದೆ.

Border–Gavaskar Trophy: ಆಸೀಸ್‌ ಟೆಸ್ಟ್‌ನಲ್ಲಿ ದಿಗ್ಗಜ ಆಟಗಾರರ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ

ಅಲ್ಲದೆ 2024ರಲ್ಲಿ ವಿರಾಟ್‌ ಕೊಹ್ಲಿ ಆಡಿದ್ದ ಆರು ಟೆಸ್ಟ್‌ ಪಂದ್ಯಗಳಿಂದ 22.72ರ ಸರಾಸರಿಯಲ್ಲಿ ಗಳಿಸಿದ್ದು ಕೇವಲ 250 ರನ್‌ಗಳು ಮಾತ್ರ. ಇದರಲ್ಲಿ ಕೇವಲ ಒಂದೇ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದರು. ವಿರಾಟ್‌ ಕೊಹ್ಲಿಗೆ ಆಸ್ಟ್ರೇಲಿಯಾ ನೆಚ್ಚಿನ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.

ಆಸ್ಟ್ರೇಲಿಯಾ ಕಿಂಗ್‌ ಕೊಹ್ಲಿಗೆ ನೆಚ್ಚಿನ ಸ್ಥಳ: ರವಿ ಶಾಸ್ತ್ರಿ

“ತಮ್ಮ ನೆಚ್ಚಿನ ಸ್ಥಳಕ್ಕೆ (ಆಸ್ಟ್ರೇಲಿಯಾ) ಕಿಂಗ್‌ ಕೊಹ್ಲಿ ಮರಳಿದ್ದಾರೆ. ಅಷ್ಟೇ ಮುಂದೆ ಎಲ್ಲವನ್ನೂ ನಾನೇ ಅವರಿಗೆ (ಮಾಧ್ಯಮದವರಿಗೆ) ಹೇಳುತ್ತೇನೆ. ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಒಂದು ಹೆಸರನ್ನು ನೀವು ಗಳಿಸಿದ ಬಳಿಕ, ನೀವು ಬ್ಯಾಟ್‌ ಮಾಡಲು ಕ್ರೀಸ್‌ಗೆ ಹೋದಾಗಲೆಲ್ಲಾ ಎದುರಾಳಿ ತಂಡದ ಆಟಗಾರರಿಗೆ ಇದು ಮನಸಿನಲ್ಲಿ ಮೂಡುತ್ತದೆ,” ಎಂದು ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ಹೇಳಿದ್ದಾರೆ.

IND vs AUS: ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

ಆಸ್ಟ್ರೇಲಿಯಾದಲ್ಲಿ ವಿರಾಟ್‌ ಕೊಹ್ಲಿಯ ಅಂಕಿಅಂಶಗಳು

ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ಬ್ಯಾಟಿಂಗ್‌ ಅನ್ನು ಆನಂದಿಸಿದ್ದಾರೆ. ಅವರು 2020-21ರ ಸಾಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಪಂದ್ಯಗಳನ್ನು ಕಳೆದುಕೊಂಡಿದ್ದರು. ಕಾಂಗರೂ ನಾಡಿನಲ್ಲಿ ಆಡಿದ್ದ 13 ಪಂದ್ಯಗಳಿಂದ ವಿರಾಟ್‌ ಕೊಹ್ಲಿ ಆರು ಶತಕಗಳು ಸೇರಿದಂತೆ 1352 ರನ್‌ಗಳನ್ನು ಕಲೆ ಹಾಕಿದ್ದಾರೆ.

ಕೊಹ್ಲಿಗೆ ಮಹತ್ವದ ಸಲಹೆ ನೀಡಿದ ಶಾಸ್ತ್ರಿ

ಕಳೆದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಪಾಲಿನ ಸಂಗತಿಗಳು ಅಷ್ಟೊಂದು ಉತ್ತಮವಾಗಿರಲಿಲ್ಲ. ಅವರು ಆರಾಮದಾಯಕವಾಗಿ ಇರುವಂತೆ ಕಂಡುಬಂದಿರಲಿಲ್ಲ. ಈ ಕಾರಣದಿಂದಲೇ ಅವರು ಫುಲ್‌ ಟಾಸ್‌ ಹಾಗೂ ಕೆಲ ನಿರ್ಣಾಯಕ ಸನ್ನಿವೇಶಗಳಲ್ಲಿ ರನ್‌ಔಟ್‌ ಆಗಿದ್ದರು. ಈ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ, ವಿರಾಟ್‌ ಕೊಹ್ಲಿ ಸ್ವಲ್ಪ ಶಾಂತತೆಯನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

“ವಿರಾಟ್‌ ಕೊಹ್ಲಿ ಅವರು ಕ್ರೀಸ್‌ಗೆ ತೆರಳಿದ ಅರ್ಧ ಗಂಟೆ ಅಥವಾ ಸರಣಿಯ ಆರಂಭಿಕ ಮೂರು ಇನಿಂಗ್ಸ್‌ಗಳಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಅವರು ಆತುರಪಡುವುದಕ್ಕಿಂತ ಶಾಂತವಾಗಿ ಮತ್ತು ತನ್ನದೇ ಆದ ವೇಗದಲ್ಲಿ ಆಟವನ್ನು ಆಡಿದರೆ, ಅವರು ಚೆನ್ನಾಗಿ ಕಾಣುತ್ತಾರೆಂದು ನಾನು ಭಾವಿಸುತ್ತೇನೆ,” ಎಂದು ಹೇಳುವ ಮೂಲಕ ವಿರಾಟ್‌ ಕೊಹ್ಲಿ ಶಾಂತ ಸ್ವಭಾವವನ್ನು ಕಾಪಾಡಿಕೊಳ್ಳಬೇಕೆಂದು ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ.