Sunday, 24th November 2024

IPL 2025 Auction: ಬರೋಬ್ಬರಿ 26.75 ಕೋಟಿ ರೂ.ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ಸೇರಿದ ಶ್ರೇಯಸ್‌ ಅಯ್ಯರ್‌

ಜೆಡ್ಡಾ: ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ತಂಡವನ್ನು ಚಾಂಪಿಯನ್‌ ಮಾಡಿದ್ದ ಶ್ರೇಯಸ್‌ ಅಯ್ಯರ್‌ ಸದ್ಯ ನಡೆಯುತ್ತಿರುವ ಮೆಗಾ ಹರಾಜಿನಲ್ಲಿ ಬರೋಬ್ಬರಿ 26.75 ಕೋಟಿ ರೂ. ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ತಂಡದ ಪಾಲಾಗಿದ್ದಾರೆ. ಇದು ಸದ್ಯ ಐಪಿಎಲ್‌ ಹರಾಜಿನಲ್ಲಿ ಆಟಗಾರನೊಬ್ಬ ಪಡೆದ ಅತ್ಯಧಿಕ ಮೊತ್ತವಾಗಿದೆ. ಇದುವರೆಗೂ ಅತ್ಯಧಿಕ ಮೊತ್ತ ಪಡೆದ ದಾಖಲೆ ಮಿಚೆಲ್‌ ಸ್ಟಾರ್ಕ್‌ ಹೆಸರಿನಲ್ಲಿತ್ತು. ಕಳೆದ ಆವೃತ್ತಿಯಲ್ಲಿ ಸ್ಟಾರ್ಕ್‌ 24 ಕೋಟಿ ಪಡೆದು ಕೆಕೆಆರ್‌ ತಂಡ ಸೇರಿದ್ದರು.

ಶ್ರೇಯಸ್‌ ಅಯ್ಯರ್‌ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಪಂಜಾಬ್‌ ಜಿದ್ದಾಜಿದ್ದಿನ ಪೈಪೋಟಿ ನಡೆಸಿತು. ಅಂತಿಮವಾಗಿ ಪಂಜಾಬ್‌ ತಂಡ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ಸು ಕಂಡಿತು. ಇದಕ್ಕೂ ಮುನ್ನ ಪಂಜಾಬ್‌ ಆರ್‌ ಟಿಎಂ ಕಾರ್ಡ್‌ ಪ್ರಯೋಗಿಸಿ ಎಡಗೈ ವೇಗಿ ಅರ್ಶದೀಪ್‌ ಸಿಂಗ್‌ ಅವರನ್ನು 18 ಕೋಟಿ ರೂ.ಗೆ ಖರೀದಿ ಮಾಡಿತ್ತು. ಹರಾಜಿನಲ್ಲಿ ಅವರು 15.75 ಕೋಟಿ ರೂ ಗೆ ಸನ್‌ ರೈಸರ್ಸ್‌ ಹೈದಾರಾಬಾದ್‌ ಪಾಲಾಗಿದ್ದರು. ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ 10.75 ಕೋಟಿಗೆ ಗುಜರಾತ್‌ ಟೈಟಾನ್ಸ್‌ ತಂಡ ಸೇರಿದರು. ಕಳೆದ ಆವೃತ್ತಿಯಲ್ಲಿ ಪಂಜಾಬ್‌ ತಂಡದ ಆಟಗಾರನಾಗಿದ್ದರು. ಜಾಸ್‌ ಬಟ್ಲರ್‌ 15.75 ಕೋಟಿಗೆ ಗುಜರಾತ್‌ ತಂಡ ಸೇರಿದರು.

ಇದುವರೆಗಿನ ಆಯಾ ಐಪಿಎಲ್‌ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿ ಹೀಗಿದೆ.

ವರ್ಷಆಟಗಾರಪಡೆದ ಮೊತ್ತ
2008ಎಂ.ಎಸ್‌ ಧೋನಿ9.5 ಕೋಟಿ ರೂ.
2009ಕೆವಿನ್ ಪೀಟರ್ಸನ್ ಮತ್ತು ಆಂಡ್ರ್ಯೂ ಫ್ಲಿಂಟಾಫ್ 9.8 ಕೋಟಿ ರೂ.
2010ಶೇನ್ ಬಾಂಡ್ ಮತ್ತು ಕೀರನ್ ಪೊಲಾರ್ಡ್4.8 ಕೋಟಿ ರೂ.
2011ಗೌತಮ್ ಗಂಭೀರ್ 14.9 ಕೋಟಿ ರೂ.
2012ರವೀಂದ್ರ ಜಡೇಜಾ12.8 ಕೋಟಿ ರೂ.
2013ಗ್ಲೆನ್ ಮ್ಯಾಕ್ಸ್‌ವೆಲ್6.3 ಕೋಟಿ ರೂ.
2014ಯುವರಾಜ್ ಸಿಂಗ್14 ಕೋಟಿ ರೂ.
2015ಯುವರಾಜ್ ಸಿಂಗ್16 ಕೋಟಿ ರೂ.
2016ಶೇನ್ ವ್ಯಾಟ್ಸನ್9.5 ಕೋಟಿ ರೂ.
2017ಬೆನ್ ಸ್ಟೋಕ್ಸ್14.5 ಕೋಟಿ ರೂ.
2018ಬೆನ್ ಸ್ಟೋಕ್ಸ್12.5 ಕೋಟಿ ರೂ.
2019ಜಯದೇವ್ ಉನದ್ಕತ್ ಮತ್ತು ವರುಣ್ ಚಕ್ರವರ್ತಿ8.4 ಕೋಟಿ ರೂ.
2020ಪ್ಯಾಟ್ ಕಮ್ಮಿನ್ಸ್ 15.5 ಕೋಟಿ ರೂ.
2021ಕ್ರಿಸ್ ಮೋರಿಸ್16.25 ಕೋಟಿ ರೂ.
2022ಇಶಾನ್ ಕಿಶನ್15.25 ಕೋಟಿ ರೂ.
2023ಸ್ಯಾಮ್ ಕರ್ರಾನ್18.5 ಕೋಟಿ ರೂ.
2024ಮಿಚೆಲ್ ಸ್ಟಾರ್ಕ್24.75 ಕೋಟಿ ರೂ.