ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs RCB: ಆಡುವ ಬಳಗ, ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

IPL 2025: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದ ಕೋಲ್ಕತಾದಾದ್ಯಂತ ಮಾರ್ಚ್ 21ರಿಂದ 22ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ನಾಳಿನ ಪಂದ್ಯಕ್ಕೆ ಮಳೆ ಭೀತಿ ಇದೆ.

ಆರ್‌ಸಿಬಿ-ಕೆಕೆಆರ್‌ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

Profile Abhilash BC Mar 21, 2025 9:54 PM

ಕೋಲ್ಕತಾ: ಮಳೆ ಭೀತಿಯ ಮಧ್ಯೆ ಶನಿವಾರ ಕೆಕೆಆರ್‌ ಮತ್ತು ಆರ್‌ಸಿಬಿ(KKR vs RCB) 18ನೇ ಆವೃತ್ತಿಯ ಐಪಿಎಲ್‌ನ(IPL 2025) ಉದ್ಘಾಟನ ಪಂದ್ಯವನ್ನಾಡಲು ಸಜ್ಜಾಗಿದೆ. ಇತ್ತಂಡಗಳು 18 ವರ್ಷಗಳ ಬಳಿಕ ಐಪಿಎಲ್‌ನ ಉದ್ಘಾಟನ ಪಂದ್ಯದಲ್ಲಿ ಆಡುತ್ತಿರುವ ಮೊದಲ ಪಂದ್ಯವಾಗಿದೆ. 2008ರಯಲ್ಲಿ ಚೊಚ್ಚಲ ಆವೃತ್ತಿಯಲ್ಲಿ ಉಭಯ ತಂಡಗಳು ಈಡನ್‌ ಗಾರ್ಡನ್ಸ್‌ ಮೈದಾನದಲ್ಲೇ ಮುಖಾಮುಖಿಯಾಗಿತ್ತು. ಅಂದಿನ ಪಂದ್ಯದಲ್ಲಿ ಆರ್‌ಸಿಬಿ ಹೀನಾಯ ಸೋಲು ಕಂಡಿತ್ತು. ಇದೀಗ 18 ವರ್ಷಗಳ ಹಿಂದಿನ ಸೋಲುನ್ನು ತೀರಿಸಿಕೊಳ್ಳಲು ಆರ್‌ಸಿಬಿಗೆ ಅವಕಾಶವೊಂದು ಲಭಿಸಿದೆ. ಇದರಲ್ಲಿ ಯಶಸ್ವಿಯಾಗಲಿದೆಯಾ ಎಂಬುದು ಪಂದ್ಯದ ಕೌತುಕ. ಈ ಪಂದ್ಯಕ್ಕೆ ಉಭಯ ತಂಡಗಳ ಆಡುವ ಬಳಗ(KKR vs RCB Playing 11) ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ.

ಪಿಚ್‌ ರಿಪೋರ್ಟ್‌

ಈಡನ್ ಗಾರ್ಡನ್ಸ್ ಸ್ಟೇಡಿಯಂನ ಪಿಚ್‌ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿದ್ದರೂ ಕೂಡ ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಇಲ್ಲಿ ಹಿಡಿತ ಸಾಧಿಸಲಿದ್ದಾರೆ. ಅದರಲ್ಲೂ ಮಂಜಿನ ಕಾಟ ಇರುವ ಕಾರಣ ಚೇಸಿಂಗ್‌ ನಡೆಸುವ ತಂಡಗಳಿಗೆ ಇಲ್ಲಿ ಗೆಲುವಿನ ಅವಕಾಶ ಹೆಚ್ಚು. ಆದರೆ ಈ ಬಾರಿ ಹೊಸ ಚೆಂಡು ಬಳಕೆಗೂ ಅವಕಾಶ ಇರುವುದನ್ನು ಮರೆಯುವಂತಿಲ್ಲ. ಇದುವರೆಗೆ ಇಲ್ಲಿ 93 ಐಪಿಎಲ್‌ ಪಂದ್ಯಗಳು ನಡೆದಿವೆ. ಇದರಲ್ಲಿ 38 ಬಾರಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಜಯಿಸಿದರೆ, 55 ಬಾರಿ ಚೇಸಿಂಗ್‌ ನಡೆಸಿದ ತಂಡ ಗೆದ್ದಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಬೌಲಿಂಗ್‌ ಆಯ್ದುಕೊಳ್ಳಬಹುದು.



ಹವಾಮಾನ ವರದಿ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದ ಕೋಲ್ಕತಾದಾದ್ಯಂತ ಮಾರ್ಚ್ 21ರಿಂದ 22ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ನಾಳಿನ ಪಂದ್ಯಕ್ಕೆ ಮಳೆ ಭೀತಿ ಇದೆ. ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಇರದ ಕಾರಣ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಇದನ್ನೂ ಓದಿ IPL 2025 Fan Parks: ಈ ಬಾರಿ ದೇಶದ 50 ನಗರಗಳಲ್ಲಿ ಐಪಿಎಲ್‌ ಫ್ಯಾನ್ ಪಾರ್ಕ್‌

ಸಂಭಾವ್ಯ ಆಡುವ ಬಳಗ

ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಇಂಪ್ಯಾಕ್ಟ್‌ ಆಟಗಾರ: ಸ್ವಪ್ನಿಲ್ ಸಿಂಗ್/ಮೋಹಿತ್ ರಾಥೀ/ರಾಸಿಖ್ ಸಲಾಂ

ಕೆಕೆಆರ್‌: ಸುನಿಲ್ ನಾರಾಯಣ್‌, ಕ್ವಿಂಟನ್ ಡಿ ಕಾಕ್ (ವಿ.ಕೀ), ಅಜಿಂಕ್ಯ ರಹಾನೆ (ನಾಯಕ), ಆಂಗ್‌ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಆನ್ರಿಚ್ ನಾರ್ಟ್ಜೆ.
ಇಂಪ್ಯಾಕ್ಟ್‌ ಆಟಗಾರ: ವೈಭವ್ ಅರೋರಾ.

ಪಂದ್ಯ ಆರಂಭ; ಸಂಜೆ 7:30ಕ್ಕೆ. ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.