ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Japan Open 2025: ಪ್ರಿ ಕ್ವಾರ್ಟರ್‌ನಲ್ಲಿ ಸೋತು ಅಭಿಯಾನ ಮುಗಿಸಿದ ಲಕ್ಷ್ಯ, ಸಾತ್ವಿಕ್‌-ಚಿರಾಗ್‌ ಶೆಟ್ಟಿ

Lakshya Sen: ಮೊದಲ ಗೇಮ್‌ನಲ್ಲಿ ನರವೋಕಗೆ ತೀವ್ರ ಪೈಪೋಟಿ ನೀಡದ್ದ ಸೇನ್‌ ದ್ವಿತೀಯ ಗೇಮ್‌ನಲ್ಲಿ ಸಂಪೂರ್ಣ ವಿಫಲರಾದರು. 11 ಅಂಕ ಮಾತ್ರ ಗಳಿಸಲು ಸಾಧ್ಯವಾಯಿತು. ಅತ್ತ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ ಕೂಡ ಮೊದಲ ಗೇಮ್‌ನಲ್ಲಿ ಹೋರಾಟ ನಡೆಸಿ ಆ ಬಳಿಕದ ಗೇಮ್‌ನಲ್ಲಿ ನೀರಸ ಪ್ರದರ್ಶನ ತೋರಿದರು. ಜಪಾನ್‌ನಲ್ಲಿ ಭಾರತೀಯ ತಂಡದ ಒಟ್ಟಾರೆ ಪ್ರದರ್ಶನ ಕಳಪೆಯಾಗಿತ್ತು.

ಜಪಾನ್‌ ಓಪನ್‌ನಲ್ಲಿ ಲಕ್ಷ್ಯ, ಸಾತ್ವಿಕ್‌-ಚಿರಾಗ್‌ ಶೆಟ್ಟಿಗೆ ಸೋಲು

Profile Abhilash BC Jul 17, 2025 1:14 PM

ಟೋಕಿಯೊ: ಇಲ್ಲಿ ನಡೆಯುತ್ತಿರುವ 'ಜಪಾನ್‌ ಓಪನ್‌ ಸೂಪರ್‌ 750' ಬ್ಯಾಡ್ಮಿಂಟನ್‌(Japan Open 2025) ಪಂದ್ಯಾವಳಿಯಲ್ಲಿ ಭಾರತಕ್ಕೆ ನಿರಾಸೆ ಉಂಟಾಗಿದೆ. ಗುರುವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಲಕ್ಷ್ಯ ಸೇನ್‌(Lakshya Sen) ಮತ್ತು ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ(Satwik-Chirag) ಜೋಡಿ ಸೋತು ತಮ್ಮ ಅಭಿಯಾನ ಮುಗಿಸಿದ್ದಾರೆ. ಇದಕ್ಕೂ ಮುನ್ನ ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಆತಿಥೇಯ ನಾಡಿನ ಕೊಡೈ ನರವೋಕ ಎದುರು 19-21, 11-21 ನೇರ ಗೇಮ್‌ಗಳಿಂದ ಪರಾಭವಗೊಂಡರೆ, ಪುರುಷರ ಡಬಲ್ಸ್‌ನಲ್ಲಿ 15ನೇ ಶ್ರೇಯಾಂಕದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ 22-24, 14-21 ಸೋಲು ಕಂಡರು.

ಮೊದಲ ಗೇಮ್‌ನಲ್ಲಿ ನರವೋಕಗೆ ತೀವ್ರ ಪೈಪೋಟಿ ನೀಡದ್ದ ಸೇನ್‌ ದ್ವಿತೀಯ ಗೇಮ್‌ನಲ್ಲಿ ಸಂಪೂರ್ಣ ವಿಫಲರಾದರು. 11 ಅಂಕ ಮಾತ್ರ ಗಳಿಸಲು ಸಾಧ್ಯವಾಯಿತು. ಅತ್ತ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ ಕೂಡ ಮೊದಲ ಗೇಮ್‌ನಲ್ಲಿ ಹೋರಾಟ ನಡೆಸಿ ಆ ಬಳಿಕದ ಗೇಮ್‌ನಲ್ಲಿ ನೀರಸ ಪ್ರದರ್ಶನ ತೋರಿದರು. ಜಪಾನ್‌ನಲ್ಲಿ ಭಾರತೀಯ ತಂಡದ ಒಟ್ಟಾರೆ ಪ್ರದರ್ಶನ ಕಳಪೆಯಾಗಿತ್ತು.

ಸದ್ಯ ಭಾರತದ ಏಕೈಕ ಪದಕದ ಭರವಸೆ ಸ್ಪರ್ಧಿಯಾಗಿ ಉಳಿದಿರುವ ಅನುಪಮಾ ಉಪಾಧ್ಯಾಯ ಅವರ ಮೇಲೆ ಈಗ ಗಮನ ಕೇಂದ್ರೀಕರಿಸಲಾಗಿದೆ. ಅವರು ತಮ್ಮ 16ನೇ ಸುತ್ತಿನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಚೀನಾದ ವಾಂಗ್ ಝಿ ಯಿ ಅವರನ್ನು ಎದುರಿಸಲಿದ್ದಾರೆ. ಅನುಪಮಾ ಉಪಾಧ್ಯಾಯ ಮೊದಲ ಸುತ್ತಿನ ಪಂದ್ಯದಲ್ಲಿ ತನ್ನದೇ ದೇಶದ ರಕ್ಷಿತಾ ರಾಮರಾಜ್‌ ಅವರನ್ನು 21-15, 18-21, 21-18ರಿಂದ ಮಣಿಸಿದ್ದರು.

ಇದನ್ನೂ ಓದಿ IND vs ENG 4th Test: ಬುಮ್ರಾಗೆ ಮತ್ತೆ ವಿಶ್ರಾಂತಿ; ನಾಲ್ಕನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಹಲವು ಬದಲಾವಣೆ