Kabir Khan: 'ಬಜರಂಗಿ ಭಾಯ್‌ಜಾನ್' ಸಿನಿಮಾದಲ್ಲಿ ʻಆ ಒಂದುʼ ದೃಶ್ಯ ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ರಂತೆ ನಿರ್ದೇಶಕ
'ಬಜರಂಗಿ ಭಾಯ್‌ಜಾನ್' ಸಿನಿಮಾ ಕುರಿತಂತೆ ನಿರ್ದೇಶಕ ಕಬ್ಬೀರ್ ಖಾನ್ ಇತ್ತೀಚೆಗೆ ಅಘಾತಕಾರಿ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. 2015ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಒಂದು ಪ್ರಮುಖ ಸಂಭಾಷಣೆಯನ್ನು ತೆಗೆದುಹಾಕಲು ಸೆನ್ಸಾರ್ ಮಂಡಳಿ (CBFC) ಒತ್ತಾಯಿಸಿತ್ತು. ಆದರೆ ಕಬೀರ್ ಖಾನ್ ಆ ಒಂದು ಸಂಭಾಷಣೆಯನ್ನು ಉಳಿಸಿಕೊಳ್ಳಲು ಸೆನ್ಸಾರ್ ಮಂಡಳಿಯೊಂದಿಗೆ ತೀವ್ರವಾಗಿ ವಾದಿಸಿ ಯಶಸ್ವಿ ಯಾಗಿರುವ ಬಗ್ಗೆ ಸಂದರ್ಶನ ವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.


ಮುಂಬೈ: 2015ರಲ್ಲಿ ತೆರೆಕಂಡಿದ್ದ ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯ್‌ಜಾನ್' (Bajrangi Bhaijaan) ಚಿತ್ರ ಹಿಟ್ ಲಿಸ್ಟ್ ಸೇರಿತ್ತು. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡ ಈ ಸಿನಿಮಾ ವಿಶ್ವದಾದ್ಯಂತ ಮೆಚ್ಚುಗೆ ಪಡೆದಿತ್ತು. ಇದೀಗ 10 ವರ್ಷಗಳನ್ನು ಪೂರೈಸಿದ 'ಬಜರಂಗಿ ಭಾಯ್‌ಜಾನ್ ' ಸಿನಿಮಾ ಕುರಿತಂತೆ ನಿರ್ದೇಶಕ ಕಬೀರ್ ಇತ್ತೀಚೆಗೆ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. 2015ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಒಂದು ಪ್ರಮುಖ ಸಂಭಾಷಣೆಯನ್ನು ತೆಗೆದುಹಾಕಲು ಸೆನ್ಸಾರ್ ಮಂಡಳಿ (CBFC) ಒತ್ತಾಯಿಸಿತ್ತು. ಆದರೆ ಕಬೀರ್ ಖಾನ್ ಆ ಒಂದು ಸಂಭಾಷಣೆಯನ್ನು ಉಳಿಸಿಕೊಳ್ಳಲು ಸೆನ್ಸಾರ್ ಮಂಡಳಿಯೊಂದಿಗೆ ತೀವ್ರವಾಗಿ ವಾದಿಸಿ ಯಶಸ್ವಿಯಾಗಿರುವ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ಭಜರಂಗಿ ಭಾಯ್‌ಜಾನ್ ಚಿತ್ರದಲ್ಲಿ "ಜೈ ಶ್ರೀರಾಮ್" ಎಂದು ಹೇಳುವ ದೃಶ್ಯವಿದೆ. ಈ ಸೀನ್ ಅನ್ನು ಭಾರತೀಯ ಸೆನ್ಸಾರ್ ಮಂಡಳಿಯೂ ಚಿತ್ರದಿಂದ ತೆಗೆದುಹಾಕಲು ಒತ್ತಾಯಿಸಿತ್ತು ಎಂದು ನಿರ್ದೇಶಕ ಕಬೀರ್ ಖಾನ್ ಬಹಿರಂಗ ಪಡಿಸಿದ್ದಾರೆ. ದಿವಂಗತ ಓಂ ಪುರಿ ಅವರು ನಿರ್ವಹಿಸಿದ್ದ ಮೌಲ್ವಿ ಪಾತ್ರವು ನಾಯಕ ಸಲ್ಮಾನ್ ಖಾನ್ (ಪವನ್ ಕುಮಾರ್ ಚತುರ್ವೇದಿ) ಅವರಿಗೆ ವಿದಾಯ ಹೇಳುವಾಗ "ಜೈ ಶ್ರೀರಾಮ್" ಎಂದು ಹೇಳುವ ಸಂಭಾಷಣೆ ಇತ್ತು. ಈ ದೃಶ್ಯ ಭಾರತದ ಮುಸ್ಲಿಮರಿಗೆ "ಅಸಮಾಧಾನ" ತರಬಹುದು ಎಂದು ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿ ಒತ್ತಾಯಿಸಿತ್ತು.
ಆದರೆ ಕಬೀರ್ ಖಾನ್ ಅವರು ಈ ಸಂಭಾಷಣೆಯ ಅಗತ್ಯವನ್ನು ಬಲವಾಗಿ ಸಮರ್ಥಿಸಿ ಕೊಂಡರು .ನಿರ್ದೇಶಕ ಕಬ್ಬೀರ್ ಖಾನ್ ಈ ದೃಶ್ಯಕ್ಕೆ ಬೆಂಬಲ ನೀಡಿ, ಸೆನ್ಸಾರ್ ಮಂಡಳಿಗೆ ವಿರುದ್ಧವಾಗಿ ಇದು ಸಿನಿಮಾದ ಪ್ರಮುಖ ಮೌಲ್ಯವಂತ ದೃಶ್ಯ ಎಂದು ಎತ್ತಿ ತೋರಿಸಿದ್ದಾರೆ. ಮುಂಬೈನ ಗೈಟಿ ಗ್ಯಾಲಕ್ಸಿ ಯಲ್ಲಿ ನಡೆದ ಚಿತ್ರದ ಪ್ರದರ್ಶನವನ್ನು ನೆನಪಿಸಿಕೊಂಡ ಕಬೀರ್, ಸಿನಿಮಾ ಟಾಕೀಸ್ ನಲ್ಲಿ ಇಡೀ ಪ್ರೇಕ್ಷಕರು ಮುಸ್ಲಿಮರಿಂದ ತುಂಬಿದ್ದರೂ ಆ ಸಾಲು ಬಂದಾಗ ಅವರು ಸಂಭ್ರಮದ ಚಪ್ಪಾಳೆ ತಟ್ಟಿದ್ದ ದೃಶ್ಯ ಇಂದಿಗೂ ನೆನಪಿದೆ. ಈ ಸಂಭಾಷ ಣೆಯು ಯಾವುದೇ ಧರ್ಮದವರ ಭಾವನೆಗಳಿಗೆ ದಕ್ಕೆ ತರುವುದಿಲ್ಲ ಎಂಬುದು ದೃಡಪಡಿಸಿದೆ. ಈ ದೃಶ್ಯವು ಧಾರ್ಮಿಕ ಸಾಮರಸ್ಯದ ಹಿನ್ನಲೆಯಲ್ಲಿ ಮಹತ್ವದ್ದಾಗಿದ್ದು, ಪ್ರೇಕ್ಷಕರ ಮನ ಗೆದ್ದಿದೆ ಎಂದರು.
'ಬಜರಂಗಿ ಭಾಯಿಜಾನ್' ಚಿತ್ರವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾನವೀಯ ಬಾಂಧವ್ಯ ಮತ್ತು ಧಾರ್ಮಿಕ ಸಾಮರಸ್ಯವನ್ನು ಸಾರುವ ಚಿತ್ರವಾಗಿದೆ. ಭಜರಂಗಿ ಭಾಯ್ ಜಾನ್ ಚಿತ್ರದಲ್ಲಿ ನಾಯಕ ನಟ ಸಲ್ಮಾನ್ ಖಾನ್ ಅವರು ಮಾತು ಬಾರದ ಪುಟ್ಟ ಬಾಲಕಿ ಯನ್ನು ಮತ್ತೆ ಪಾಕಿಸ್ತಾನದ ಆಕೆಯ ಪೋಷಕರೊಂದಿಗೆ ಸೇರಿಸುವ ಕಥೆ ಹೊಂದಿದ್ದು ಸಲ್ಮಾನ್ ಖಾನ್ ಕೊಂಚ ವಿಭಿನ್ನ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕರೀನಾ ಕಪೂರ್, ನವಾಜುದ್ದೀನ್ ಸಿದ್ದಿಕಿ ಹಾಗೂ ಬಾಲನಟಿ ಹರ್ಷಾಲಿ ಮಲ್ಹೋತ್ರಾ ಅಭಿನಯಿಸಿದ್ದರು.