Thursday, 21st November 2024

Joe Biden: ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ; ದೀಪ ಬೆಳಗಿ ಬೈಡೆನ್‌ ಭಾವುಕ ನುಡಿ

Joe Biden

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡೆನ್(Joe Biden) ಸೋಮವಾರ ಶ್ವೇತಭವನ(White House)ದಲ್ಲಿ ದೀಪಾವಳಿ ಆಚರಣೆ(Diwali Celebration)ಯನ್ನು ಆಯೋಜಿಸಿದ್ದಾರೆ. ಇದರಲ್ಲಿ ದೇಶದಾದ್ಯಂತದ ಕಾಂಗ್ರೆಸ್ಸಿಗರು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ 600 ಕ್ಕೂ ಹೆಚ್ಚು ಪ್ರಸಿದ್ಧ ಭಾರತೀಯ ಅಮೆರಿಕನ್ನರು ಭಾಗವಹಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬೈಡೆನ್‌, ಅಧ್ಯಕ್ಷನಾಗಿ, ಶ್ವೇತಭವನದಲ್ಲಿ ಇದುವರೆಗೆ ಅತಿದೊಡ್ಡ ದೀಪಾವಳಿ ಸ್ವಾಗತವನ್ನು ಆಯೋಜಿಸಲು ನನಗೆ ಗೌರವವಿದೆ. ಈ ಸಂದರ್ಭದಲ್ಲಿ, ಬೈಡೆನ್ ತಮ್ಮ ಭಾಷಣದಲ್ಲಿ ಶ್ವೇತಭವನ ನನ್ನದಲ್ಲ, ಅದು ನಿಮ್ಮ ಮನೆ ಎಂದು ಹೇಳಿದರು. ಬೈಡೆನ್ ಅವರ ಈ ಹೇಳಿಕೆಯ ನಂತರ, ಸಭಾಂಗಣದಲ್ಲಿ ಕುಳಿತಿದ್ದ ಜನರು ಸಂಭ್ರಮಿಸಿದರು.

ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದ ಕಾರಣ ಇದು ಅಧ್ಯಕ್ಷ ಬೈಡನ್ ಅವರ ಶ್ವೇತಭವನದಲ್ಲಿನ ಕೊನೆಯ ದೀಪಾವಳಿ ಆಚರಣೆಯಾಗಿದೆ. ಅಧ್ಯಕ್ಷರ ಭಾಷಣದ ವೇಳೆ ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ಸುನಿ ವಿಲಿಯಮ್ಸ್ ಅವರ ವೀಡಿಯೊ ಸಂದೇಶವಿದೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವೀಡಿಯೊ ಶುಭಾಶಯವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಅಮೆರಿಕದಲ್ಲಿ ಅಂದಾಜು 2.6 ಮಿಲಿಯನ್ ಭಾರತೀಯ ಮೂಲದ ಜನರಿದ್ದಾರೆ ಅಥವಾ ಸುಮಾರು 26 ಲಕ್ಷ ಜನರಿದ್ದಾರೆ. ಹಿಂದಿನ ವರ್ಷಗಳ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಭಾಷಣದ ಮೊದಲು ಬ್ಲೂ ರೂಮ್‌ನಲ್ಲಿ ದೀಪ ಬೆಳಗಿಸಿದ್ದಾರೆ. ನಂತರ ಮಾತನಾಡಿದ ಅವರು ಅಮೆರಿಕದಲ್ಲಿ ಈ ದಿನ, ನಾವು ಬೆಳಕಿನ ಪ್ರಯಾಣದ ಬಗ್ಗೆ ಯೋಚಿಸುತ್ತೇವೆ. ದೀಪಾವಳಿಯನ್ನು ಶ್ವೇತಭವನದಲ್ಲಿ ಬಹಿರಂಗವಾಗಿ ಮತ್ತು ಹೆಮ್ಮೆಯಿಂದ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮವನ್ನು ಶ್ವೇತಭವನದಲ್ಲಿ ದೀರ್ಘಕಾಲ ಆಯೋಜಿಸಲಾಗಿದೆ. ಶ್ವೇತಭವನದಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮವು ಜಾರ್ಜ್ ಡಬ್ಲ್ಯು ಬುಷ್ ಅಧ್ಯಕ್ಷರಾಗಿದ್ದಾಗ ಪ್ರಾರಂಭವಾಯಿತು. ನಂತರ, ಇದು ಒಬಾಮಾ, ಟ್ರಂಪ್ ಮತ್ತು ನಂತರ ಬೈಡೆನ್ ಆಳ್ವಿಕೆಯಲ್ಲಿಯೂ ಮುಂದುವರೆಯಿತು.

ಈ ಸುದ್ದಿಯನ್ನೂ ಓದಿ: Hindu Heritage Month: ಅಕ್ಟೋಬರ್‌ ತಿಂಗಳನ್ನು ಹಿಂದೂ ಪರಂಪರೆಯ ಮಾಸ ಎಂದು ಘೋಷಿಸಿದ ಆಸ್ಟ್ರೇಲಿಯಾ