ಜೈಪುರ: ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ (Lawrence Bishnoi)ಅವರ ಕುಟುಂಬ ಕೊನೆಗೂ ಮೌನ ಮುರಿದಿದೆ. ಲಾರೆನ್ಸ್ ಬಿಷ್ಣೋಯ್‌ನನ್ನು ಸಮರ್ಥಿಸಿಕೊಂಡು ಆತನ ಸೋದರ ಸಂಬಂಧಿ ರಮೇಶ್ ಮಾತನಾಡಿದ್ದು, ಇಡೀ ಬಿಷ್ಣೋಯ್ ಸಮುದಾಯ ಲಾರೆನ್ಸ್ (Lawrence Bishnoi) ಅವರ ಬೆಂಬಲಕ್ಕೆ ನಿಂತಿದೆ. ನಟ ಸಲ್ಮಾನ್ ಖಾನ್(Salman Khan) ನಮ್ಮ ಸಮುದಾಯ ಜನರ ಬಳಿ ಕ್ಷಮೆ ಕೇಳಲೇ ಬೇಕು. ಆತ ನಮ್ಮ ಸಮುದಾಯದ ಜನರ ಧಾರ್ಮಿಕ ಭಾವನೆ ಜೊತೆ ಆಟ ಆಡಿದ್ದಾನೆ. ಆತ ಕ್ಷಮೆ ಕೇಳದಿದ್ದರೆ ಕಾನೂನು ಕ್ಷಮೆ ಕೇಳುವಂತೆ ಮಾಡುತ್ತದೆ. ಕಾನೂನಿನ ಮೇಲೆ ನಮಗೆ ನಂಬಿಕೆ ಇದೆ ಎಂದಿದ್ದಾರೆ.
ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರ ಕುಟುಂಬ ನಮ್ಮ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿದೆ. ಸಲ್ಮಾನ್ ಖಾನ್ ಕ್ಷಮೆ ಕೇಳದಿದ್ದರೆ ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ನಾವು ನಮ್ಮ ಕೃಷ್ಣ ಮೃಗವನ್ನು ನಮ್ಮ ದೇವರೆಂದು ಪೂಜಿಸುತ್ತೇವೆ. ಅದಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಲೂ ಸಿದ್ಧರಿದ್ದೇವೆ ಎಂದರು.
1998 ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಜೋಧ್‌ಪುರದಲ್ಲಿ ಬಿಷ್ಣೋಯ್ ಸಮುದಾಯದ ಪವಿತ್ರವೆಂದು ಪರಿಗಣಿಸಲ್ಪಟ್ಟ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿದೆ. 2018 ರಲ್ಲಿ ರಾಜಸ್ಥಾನ ಹೈಕೋರ್ಟ್ ಸಲ್ಮಾನ್ ಖಾನ್ ತಪ್ಪಿತಸ್ಥರೆಂದು ತೀರ್ಪು ನೀಡಿ ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ನಂತರ ಸಲ್ಮಾನ್ ಖಾನ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದಾರೆ.
ಇತ್ತೀಚೆಗಷ್ಟೇ ಎನ್.ಸಿ.ಪಿ ನಾಯಕನ ಹತ್ಯೆ ಪ್ರಕರಣದ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಗೂ ಬೆದರಿಕೆ ಹಾಕಿದೆ. ನಮ್ಮ ಸಮುದಾಯದ ಜನರಿಗೆ ಕ್ಷಮೆ ಕೇಳಿ ಇಲ್ಲವೇ 5 ಕೋಟಿ ನೀಡಿ ಇಲ್ಲಾವಾದರೆ ಬಾಬಾ ಸಿದ್ಧಿಕ್ ತರ ನಿಮ್ಮನ್ನೂ ಹೊಡೆದು ಹಾಕುತ್ತೇವೆ ಎಂದು ಹೇಳಿದೆ. ಬೆದರಿಕೆ ಬೆನ್ನಲ್ಲೇ ಸಲ್ಮಾನ್‌ಗೆ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Lawrence Bishnoi: ಲಾರೆನ್ಸ್ ಬಿಷ್ಣೋಯ್ ಎನ್‌ಕೌಂಟರ್ ಮಾಡುವ ಪೊಲೀಸರಿಗೆ 1,11,11,111ರೂ. ಬಹುಮಾನ; ಕರಣಿ ಸೇನೆ ಅನೌನ್ಸ್
ಮುಂಬೈ ಪೋಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿ, ಬೆಂಗಾವಲು ಪಡೆಯನ್ನೂ ನೇಮಿಸಿದ್ದಾರೆ. ಸಲ್ಮಾನ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ಅನುಮಾನ್ಪಾಸದ ಚಟುವಟಿಕೆಗಳನ್ನು ನಿಯಂತ್ರಿಸಲು ಕಮಾಂಡೋ ಸೆಂಟರ್ ಕೂಡಾ ತೆರೆಯಲಾಗಿದೆ. ಸಲ್ಮಾನ್ ತನ್ನ ಹೆಚ್ಚಿನ ಭದ್ರತೆಗಾಗಿ ಬುಲೆಟ್ ಪ್ರೂಫ್ ಕಾರ್‌ನನ್ನು ತರಿಸಿಕೊಂಡಿದ್ದಾರೆ. ಬುಲೆಟ್ ಪ್ರೂಫ್ ನಿಸ್ಸಾನ್ (Nissan) ಪೆಟ್ರೋಲ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ದುಬೈ (Dubai)ಯಿಂದ ತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಕಾರಿನ ಬೆಲೆ ಸುಮಾರು 2 ಕೋಟಿ ರೂ ಎಂದು ಅಂದಾಜಿಸಲಾಗುತ್ತಿದೆ.