ಹೊಬರ್ಟ್: ಪಾಕಿಸ್ತಾನ ವಿರುದ್ದ ಮೂರನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಈ ಅರ್ಧಶತಕದ ಮೂಲಕ ಆಸೀಸ್ ಆಲ್‌ರೌಂಡ್ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ 300 ಟಿ20ಐ ರನ್‌ಗಳು ಹಾಗೂ 20 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಸೋಮವಾರ ಇಲ್ಲಿನ ಬಿ ಓವಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ್ದ 118 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಪರ ಸ್ಪೋಟಕ ಬ್ಯಾಟ್ ಮಾಡಿದ ಮಾರ್ಕಸ್ ಸ್ಟೋಯ್ನಿಸ್, 27ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 61 ರನ್‌ಗಳನ್ನು ಸಿಡಿಸಿದರು. ಆ ಮೂಲಕ 7ವಿಕೆಟ್‌ಗಳಿಂದ ಗೆಲುವು ಪಡೆದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ವಿಶೇಷ ದಾಖಲೆ ಬರೆದ ಮಾರ್ಕಸ್ ಸ್ಟೋಯ್ನಿಸ್
ಈ ಪಂದ್ಯದ ಅರ್ಧಶತಕದ ಮೂಲಕ ಮಾರ್ಕಸ್ ಸ್ಟೋಯ್ನಿಸ್ ಅವರು ಪ್ರಸಕ್ತ ವರ್ಷದಲ್ಲಿ 300 ಟಿ20ಐ ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಏಕೈಕ ಕ್ಯಾಲೆಂಡರ್ ವರ್ಷದಲ್ಲಿ 300 ಟಿ20ಐ ರನ್‌ಗಳು ಹಾಗೂ 20 ವಿಕೆಟ್‌ಗಳನ್ನು ಕಬಳಿಸಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎಂಬ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಒಟ್ಟಾರೆ ಈ ಸಾಧಕರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. 2024ರಲ್ಲಿ ತಮ್ಮ 21ನೇ ಪಂದ್ಯದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಈ ದಾಖಲೆ ಬರೆದಿದ್ದಾರೆ. ಈ ವರ್ಷ ಅವರು 330 ರನ್‌ಗಳು ಹಾಗೂ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
What striking from Marcus Stoinis to end the series! 🔥 #AUSvPAK pic.twitter.com/joetsjXQXW
— cricket.com.au (@cricketcomau) November 18, 2024
ಟಿ20 ಕ್ರಿಕೆಟ್ ಅನ್ನು ಮುಗಿಸಿಕೊಂಡಿರುವ ಅವರು ಇದೀಗ ಭಾರತದ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯ ಕಡೆಗೆ ಗಮನ ಹರಿಸಲಿದ್ದಾರೆ. ನವೆಂಬರ್ 22 ರಂದು ಪರ್ತ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಅಗ್ರ ಸ್ಥಾನದಲ್ಲಿರುವ ಶಕಿಬ್ ಅಲ್ ಹಸನ್
ಕ್ಯಾಲೆಂಡರ್ ವರ್ಷದ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ 300 ರನ್‌ಗಳು ಹಾಗೂ 20 ವಿಕೆಟ್‌ಗಳನ್ನು ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಶಕಿಬ್ ಅಲ್ ಹಸನ್ ಅವರ ಹೆಸರಿನಲ್ಲಿದೆ. ಬಾಂಗ್ಲಾದೇಶ ದಿಗ್ಗಜ 21 ಪಂದ್ಯಗಳಲ್ಲಿ 25 ವಿಕೆಟ್‌ಗಳು ಹಾಗೂ 3217 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು 2022ರಲ್ಲಿ ಹಾರ್ದಿಕ್ ಪಾಂಡ್ಯ ಈ ಸಾಧನೆಗೆ ಭಾಜನರಾಗಿದ್ದರು. ಭಾರತೀಯ ಆಲ್‌ರೌಂಡರ್ ಆಡಿದ್ದ 20 ಪಂದ್ಯಗಳಿಂದ 607 ರನ್‌ಗಳು ಹಾಗೂ 20 ವಿಕೆಟ್‌ಗಳನ್ನು ಕಬಳಿಸಿದ್ದರು.
A three-nil series sweep for Australia after a Marcus Stoinis blitz! #AUSvPAK pic.twitter.com/yg02pipzev
— cricket.com.au (@cricketcomau) November 18, 2024
ಜಿಂಬಾಬ್ವೆ ತಂಡದ ಸಿಕಂದರ್ ರಾಝಾ ಅವರು ಈ ದಾಖಲೆಯನ್ನು ಎರಡು ಬಾರಿ ಬರೆದಿದ್ದಾರೆ. 2022ರಲ್ಲಿ 735 ರನ್‌ಗಳು ಹಾಗೂ 25 ವಿಕೆಟ್‌ಗಳನ್ನು ಕಬಳಿಸಿದ್ದರು. ನಂತರ ನಂತರ 2024ರಲ್ಲಿ 21 ವಿಕೆಟ್‌ಗಳು ಹಾಗೂ 462 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಆಸ್ಟ್ರೇಲಿಯಾ ಆಲ್‌ರೌಂಡರ್ ಶಕಿನ್ ಅಲ್ ಹಸನ್ ಒಳಗಿಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.