ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajasthan Royals: ತಂಡದಲ್ಲಿ ಬಿರುಕಿಲ್ಲ; ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟನೆ

IPL 2025: ರಾಜಸ್ಥಾನ ರಾಯಲ್ಸ್ 2025ರ ಐಪಿಎಲ್ ಋತುವಿನಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲವಾಗಿದೆ. ಅದು ಏಳು ಪಂದ್ಯಗಳಿಂದ ಕೇವಲ ಎರಡು ಗೆಲುವುಗಳನ್ನು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆದರೆ, ಪರಿಸ್ಥಿತಿಯನ್ನು ಬದಲಿಸಿ ಪ್ಲೇಆಫ್‌ಗೆ ಪ್ರವೇಶ ಪಡೆಯುವಲ್ಲಿ ತಂಡವು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ರಾಹುಲ್ ದ್ರಾವಿಡ್ ಹೇಳಿದರು.

ತಂಡದಲ್ಲಿ ಬಿರುಕಿಲ್ಲ; ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟನೆ

Profile Abhilash BC Apr 19, 2025 8:45 AM

ಜೈಪುರ: ಸುಲಭವಾಗಿ ಗೆಲ್ಲಬಹುದಾಗಿದ್ದ ಕಳೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲು ಕಂಡಿತ್ತು. ಈ ಸೋಲಿನ ಬಳಿಕ ತಂಡದ ನಾಯಕ ಸಂಜು ಸ್ಯಾಮ್ಸನ್‌ ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ್ರಾವಿಡ್‌, ತಂಡದಲ್ಲಿ ಯಾವುದೇ ಬಿರುಕು ಮೂಡಿಲ್ಲ ನಾನು ಮತ್ತು ನಾಯಕ ಸಂಜು ಸ್ಯಾಮ್ಸನ್ ಒಗ್ಗಟ್ಟಿನಿಂದ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಸ್ಥಾನ್‌ ತಂಡ ಇಂದು(ಶನಿವಾರ) ಲಕ್ನೋ ವಿರುದ್ಧ ತವರಿನ ಅಂಗಳದಲ್ಲಿ ಪಂದ್ಯವನ್ನಾಡಲಿದೆ.

ಎಪ್ರಿಲ್ 16ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ, ರಾಜಸ್ಥಾನ ರಾಯಲ್ಸ್ ಪಾಳಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಆದರೆ, ಈ ವರದಿಗಳನ್ನು ತಳ್ಳಿ ಹಾಕಿದ ದ್ರಾವಿಡ್, 'ಸಂಜು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದಾರೆ. ನಾನು ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನಾವು ಮಾಡುವ ಪ್ರತಿಯೊಂದು ಚರ್ಚೆ ಮತ್ತು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲಿ ಅವರು ಭಾಗಿಯಾಗುತ್ತಾರೆ' ಎಂದು ದ್ರಾವಿಡ್ ಹೇಳಿದರು.

'ಪಂದ್ಯಗಳನ್ನು ಸೋಲುವಾಗ ಮತ್ತು ಪರಿಸ್ಥಿತಿ ನಿರೀಕ್ಷೆಯಂತೆ ಸಾಗದೇ ಇರುವಾಗ ನಾವು ಟೀಕೆಗಳನ್ನು ಎದುರಿಸುವುದು ಸಾಮಾನ್ಯ. ನಮ್ಮ ನಿರ್ವಹಣೆ ಚೆನ್ನಾಗಿಲ್ಲ ಎನ್ನುವ ಟೀಕೆಗಳನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ. ಆದರೆ, ಆಧಾರರಹಿತ ವರದಿಗಳ ಬಗ್ಗೆ ನಾವು ಏನೂ ಮಾಡುವಂತಿಲ್ಲ' ಎಂದು ಅವರು ಹೇಳಿದರು.

ರಾಜಸ್ಥಾನ ರಾಯಲ್ಸ್ 2025ರ ಐಪಿಎಲ್ ಋತುವಿನಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲವಾಗಿದೆ. ಅದು ಏಳು ಪಂದ್ಯಗಳಿಂದ ಕೇವಲ ಎರಡು ಗೆಲುವುಗಳನ್ನು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆದರೆ, ಪರಿಸ್ಥಿತಿಯನ್ನು ಬದಲಿಸಿ ಪ್ಲೇಆಫ್‌ಗೆ ಪ್ರವೇಶ ಪಡೆಯುವಲ್ಲಿ ತಂಡವು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ರಾಹುಲ್ ದ್ರಾವಿಡ್ ಹೇಳಿದರು.

ಇದನ್ನೂ ಓದಿ IPL 2025: ಆರ್‌ಸಿಬಿ ತವರಿನ ಸತತ ಸೋಲಿಗೆ ಕಾರಣವೇನು?

ಲಕ್ನೋ ಪಂದ್ಯಕ್ಕೆ ಸಂಜು ಅನುಮಾನ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದ ಸಂಜು ಸ್ಯಾಮ್ಸನ್‌ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ಶನಿವಾರದ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಆಡುವುದು ಅನುಮಾನವಾಗಿದೆ. ಒಂದೊಮ್ಮೆ ಅವರು ಅಲಭ್ಯರಾದರೆ ರಿಯಾನ್‌ ಪರಾಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ಸಂಜು ಅಲಭ್ಯತೆಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಪರಾಗ್‌ ತಂಡ ಮುನ್ನಡೆಸಿದ್ದರು.

'ಸಂಜುಗೆ ಹೊಟ್ಟೆಯ ಭಾಗದಲ್ಲಿ ಇನ್ನೂ ನೋವಿನ ಅನುಭವವಾಗಿದೆ. ಹೀಗಾಗಿ ಸ್ಕ್ಯಾನಿಂಗ್ ಮೊರೆ ಹೋಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಸ್ಕ್ಯಾನಿಂಗ್‌ನಲ್ಲಿ ಗಾಯದ ಗಂಭೀರತೆ ಕುರಿತು ನಮಗೆ ಸ್ಪಷ್ಟತೆ ಸಿಕ್ಕ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದರು.