Sunday, 13th October 2024

Ravindra Jadeja : 3000 ರನ್‌ 300 ವಿಕೆಟ್‌; ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

Ravindra Jadeja

ಕಾನ್ಪುರ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ರವೀಂದ್ರ ಜಡೇಜಾ (Ravindra Jadeja) ತಮ್ಮ 300 ನೇ ಟೆಸ್ಟ್ ವಿಕೆಟ್ ಪಡೆದರು. ಸೌರಾಷ್ಟ್ರದ ಆಲ್ರೌಂಡರ್ ಈಗಾಗಲೇ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 3122 ರನ್ ಗಳಿಸಿದ್ದಾರೆ. ಸೋಮವಾರ, ಅವರು ಮೊದಲ ಇನ್ನಿಂಗ್ಸ್‌ನ್ಲಿ ಬಾಂಗ್ಲಾದೇಶದ ಕೊನೇಯ ವಿಕೆಟ್ ಪಡೆದರು. ಬಾಂಗ್ಲಾದೇಶದ ವೇಗಿ ಖಾಲಿದ್ ಅಹ್ಮದ್ ರಿಟರ್ನ್ ಕ್ಯಾಚ್ ನೀಡಿದರು. ಇದು ಅವರ 300 ನೇ ಟೆಸ್ಟ್ ವಿಕೆಟ್ ಆಗಿದೆ. ಈ ಮೂಲಕ ಅನುಭವಿ ಆಟಗಾರ ಕನಿಷ್ಠ 3000 ರನ್ ಗಳಿಸಿದ ಮತ್ತು ಕನಿಷ್ಠ 300 ವಿಕೆಟ್ ಪಡೆದ ಆಟಗಾರರ ಪ್ರಸಿದ್ಧ ಕ್ಲಬ್‌ಗೆ ಸೇರಿಕೊಂಡಿದ್ದಾರೆ.

ಜಡೇಜಾ ತಮ್ಮ 74ನೇ ಟೆಸ್ಟ್ ಪಂದ್ಯವನ್ನಾಡಿ ಈ ಸಾಧನೆ ಮಾಡಿದ ಎರಡನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಲೆಜೆಂಡರಿ ಆಲ್ರೌಂಡರ್ ಇಯಾನ್ ಬೋಥಮ್ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಹೊಂದಿದ್ದಾರೆ. ಕ್ರಿಕೆಟಿಗನಿಂದ ವೀಕ್ಷಕವಿವರಣೆಗಾರನಾಗಿ ಬದಲಾಗಿರುವ ಅವರು ತಮ್ಮ 72ನೇ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು.

3000 ರನ್ ಮತ್ತು 300 ವಿಕೆಟ್ ಪಡೆದ ವೇಗದ ಬೌಲರ್

ಇಯಾನ್ ಬೋಥಮ್ 72 ಪಂದ್ಯ, 4153 ರನ್‌, 305 ವಿಕೆಟ್‌
ರವೀಂದ್ರ ಜಡೇಜಾ 74*ಪಂದ್ಯ, 3122ರನ್‌, 300* ವಿಕೆಟ್‌
ಇಮ್ರಾನ್ ಖಾನ್ 75 ಪಂದ್ಯ, 3000 ರನ್‌, 341 ವಿಕೆಟ್‌
ಕಪಿಲ್ ದೇವ್ 83 ಪಂದ್ಯ, 3486 ರನ್‌, 300 ವಿಕೆಟ್‌
ರಿಚರ್ಡ್ ಹ್ಯಾಡ್ಲೀ 83 ಪಂದ್ಯ, 3017ರನ್‌, 415 ವಿಕೆಟ್‌
ಶಾನ್ ಪೊಲಾಕ್ 87 ಪಂದ್ಯ, 3000ರನ್‌, 353 ವಿಕೆಟ್‌
ಆರ್ ಅಶ್ವಿನ್ 88 ಪಂದ್ಯ, 3043ರನ್‌, 449 ವಿಕೆಟ್‌
ಡೇನಿಯಲ್ ವೆಟ್ಟೋರಿ 94 ಪಂದ್ಯ, 3492ರನ್‌, 303 ವಿಕೆಟ್‌
ಚಮಿಂಡಾ ವಾಸ್ 108 ಪಂದ್ಯ, 3050ರನ್‌, 351 ವಿಕೆಟ್‌
ಸ್ಟುವರ್ಟ್ ಬ್ರಾಡ್ 121 ಪಂದ್ಯ, 3008 ರನ್‌, 427 ವಿಕೆಟ್‌
ಶೇನ್ ವಾರ್ನ್ 142ಪಂದ್ಯ, 3018ರನ್‌, 694 ವಿಕೆಟ್‌

ಬಾಂಗ್ಲಾ 233 ರನ್‌ಗಳಿಗೆ ಆಲ್‌ಔಟ್‌

ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸುವ ಮೂಲಕ ಭಾರತ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ಆಲೌಟ್ ಮಾಡಿತು. ಭಾರತದ ಪರ ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ಹಾಗೂ ಆಕಾಶ್ ದೀಪ್ ತಲಾ 2 ವಿಕೆಟ್ ಪಡೆದರು. ಮೊಮಿನುಲ್ ಹಕ್ 194 ಎಸೆತಗಳಲ್ಲಿ ಅಜೇಯ 107 ರನ್ ಗಳಿಸಿ 474 ದಿನಗಳ ನಂತರ ಟೆಸ್ಟ್ ಶತಕ ಗಳಿಸಿದರು.

ಇದನ್ನೂ ಓದಿ: Rohit Sharma : ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಭಿನ್ನ ಸಾಧನೆ ಮಾಡಿದ ರೋಹಿತ್ ಶರ್ಮಾ

ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ನೀಡುವ ಜತೆಗೆ ಕೆ. ಎಲ್ ರಾಹುಲ್ ಅರ್ಧ ಶತಕ ಬಾರಿಸುವ ಮುಲಕ ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟ ಮಾಡಿಕೊಂಡು 285 ರ್ ಬಾರಿಸಿದೆ. ಬಾಂಗ್ಲಾದೇಶ ತಂಡ ಮತ್ತೆ ಬ್ಯಾಟಿಂಗ್ ಮುಂದುವರಿಸಿದೆ.