RCB Unbox 2025: ನಾಳೆಯ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ವಿಶೇಷತೆಗಳೇನು?
IPL 2025: ಈ ಬಾರಿಯ ಉದ್ಘಾಟನ ಪಂದ್ಯದಲ್ಲೇ ಆರ್‌ಸಿಬಿ ಕಣಕ್ಕಿಳಿಯಲಿದೆ. 2024ರ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ವಿರುದ್ಧ ಸೆಣಸಾಡಲಿದೆ. ಮಾ. 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.


ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿ(RCB) ಅಭಿಮಾನಿಗಳಿಗಾಗಿ ತನ್ನ ತವರು ಮೈದಾನದಲ್ಲಿ 'ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್' (RCB Unbox 2025) ವಿಶೇಷ ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮ ಸೋಮವಾರ(ಮಾ.17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ(Virat Kohli) ಕಾರ್ಯಕ್ರಮದ ಕೇಂದ್ರ ಬಿಂದು ಎಂದು ಹೇಳಲಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಮತ್ತು ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೊಹ್ಲಿಗೆ ವಿಶೇಷ ಸನ್ಮಾನ ಮಾಡುವ ಸಾಧ್ಯತೆ ಇದೆ. ಜತೆಗೆ ತಂಡದ ನೂತನ ಜೆರ್ಸಿ ಕೂಡ ಬಿಡುಗಡೆ ಮಾಡಲಿದೆ.
ಮಧ್ಯಾಹ್ನ 3:30ರಿಂದ ಅದ್ಧೂರಿ ಕಾರ್ಯಕ್ರಮ ಆರಂಭವಾಗಲಿದೆ. ಟಿಕೆಟ್‌ಗಳಿಗೆ ಕನಿಷ್ಠ ₹800ರಿಂದ ಗರಿಷ್ಠ ₹5000 ವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಆದರೆ ಒಂದೇ ಗಂಟೆಯಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಅಭಿಮಾನಿಗಳು ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಒಬ್ಬರು 99 ರೂ ಚಂದಾದಾರಿಕೆ ಶುಲ್ಕವನ್ನು ಪಾವತಿಸಿದರೆ ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ.
ಕಳೆದ ಬಾರಿ ರಾಯಲ್ ಚಾಲೆಂಜರ್ ಬ್ಯಾಂಗಳೂರ್ ಹೆಸರನ್ನು ರಾಯಲ್ ಚಾಲೆಂಜರ್ ಬೆಂಗಳೂರು ಎಂದು ಬದಲಾಯಿಸಲಾಗಿತ್ತು. ಇದರ ಜತೆಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಕಪ್ ಗೆದ್ದ ಆರ್‌ಸಿಬಿ ತಂಡವನ್ನು ಪುರುಷರ ತಂಡ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಲಾಗಿತ್ತು.
ಈ ಬಾರಿಯ ಉದ್ಘಾಟನ ಪಂದ್ಯದಲ್ಲೇ ಆರ್‌ಸಿಬಿ ಕಣಕ್ಕಿಳಿಯಲಿದೆ. 2024ರ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ವಿರುದ್ಧ ಸೆಣಸಾಡಲಿದೆ. ಮಾ. 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
🚨 Artist Drop: 😍⬇
— Royal Challengers Bengaluru (@RCBTweets) March 10, 2025
𝗔𝗹𝗹 𝗢𝗸: Kannada Rapper, Singer, Music Producer 🎤🔥
The voice behind hits like "Don’t Worry" and "Yaakinge," All Ok is here to shake up the scene!
𝗗𝗝 𝗖𝗵𝗲𝘁𝗮𝗻: The Beat Maestro 🎧
Get ready to groove with DJ Chetan, a true force in the music… pic.twitter.com/qS494QjXKI
ಇದನ್ನೂ ಓದಿ IPL 2025: ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಶ್ರದ್ಧಾ ಕಪೂರ್ & ವರುಣ್ ಧವನ್ ಡ್ಯಾನ್ಸ್
ರಜತ್ ಪಾಟಿದಾರ್ ಅವರು ಆರ್‌ಸಿಬಿ ತಂಡದ ನೂತನ ನಾಯಕನಾಗಿದ್ದಾರೆ. 2022ರಿಂದ 2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಆರ್‌ಸಿಬಿ ಎರಡು ಬಾರಿ ಪ್ಲೇಆಫ್ಸ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಫಾಫ್ ನಾಯಕತ್ವದಲ್ಲಿ ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ಇಂದೋರ್ ಮೂಲದ ರಜತ್ ಪಾಟಿದಾರ್‌ಗೆ ನಾಯಕತ್ವದ ಹೊಣೆಯನ್ನು ನೀಡಿದೆ.