Ramanand Sharma Column: ರಾಜಕೀಯ ವೀಕ್ಷಕರ ಊಹೆ ಸುಳ್ಳಾಗಲಿಲ್ಲ
ದೇಶವನ್ನೇ ಗೆದ್ದರೂ ಊರನ್ನು (ದೆಹಲಿ) ಗೆಲ್ಲಲಾಗದ ಅತೃಪ್ತಿ, ಅಸಮಾಧಾನ ಮತ್ತು ಕೀಳರಿಮೆ ಗಳಲ್ಲಿ ದಶಕದಿಂದ ಪರಿತಪಿಸುತ್ತಿದ್ದ ಬಿಜೆಪಿಯು, ದೆಹಲಿಯನ್ನು ಗೆಲ್ಲಲು ಏನೆಲ್ಲಾ ಕಾರ್ಯತಂತ್ರ, ಯೋಜನೆ ಗಳನ್ನು ರೂಪಿಸಿದೆ ಎಂಬುದನ್ನು ಅರಿಯಲು ‘ಆಮ್ ಆದ್ಮಿ’ ಯತ್ನಿಸಲಿಲ್ಲ. ‘ಗೆಲುವು ನನ್ನದೇ’ ಎಂಬ ಅತಿಯಾದ ಆತ್ಮವಿಶ್ವಾಸವೇ ಇದಕ್ಕೆ ಕಾರಣವಿದ್ದಿರಬಹುದು
![ರಾಜಕೀಯ ವೀಕ್ಷಕರ ಊಹೆ ಸುಳ್ಳಾಗಲಿಲ್ಲ](https://cdn-vishwavani-prod.hindverse.com/media/original_images/Ramanand_Sharma_Column_110225.jpg)
ಅಂಕಣಕಾರ ರಮಾನಂದ ಶರ್ಮಾ
![Profile](https://vishwavani.news/static/img/user.png)
ನಾಡಿಮಿಡಿತ
ರಮಾನಂದ ಶರ್ಮಾ
ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶವು ನಾಲ್ಕು ರಸ್ತೆ ಕೂಡುವ ವೃತ್ತಗಳಲ್ಲಿ, ಆಯ ಕಟ್ಟಿನ ಗೋಡೆಗೋಡೆಗಳ ಮೇಲೆ ದಪ್ಪ ಅಕ್ಷರಗಳಲ್ಲಿ ಎದ್ದು ಕಾಣುವಂತೆ ಬರೆದಿತ್ತು. ಅಬಕಾರಿ ಹಗರಣ ಮತ್ತು ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿ, ಜಾಮೀನು ಪಡೆಯುವ, ಸತ್ಯತೆಯನ್ನು ಎತ್ತಿ ತೋರಿಸುವ ಸುದೀರ್ಘ ನ್ಯಾಯಾಲಯ ಹೋರಾಟದಲ್ಲಿ ಮಗ್ನವಾಗಿದ್ದ ‘ಆಮ್ ಆದ್ಮಿ’ಗಳು ಅದನ್ನು ಓದಲಿಲ್ಲ. ಅಥವಾ, ಓದಿದರೂ ತಲೆಕೆಡಿಸಿಕೊಳ್ಳದೆ ಇದು ಬಿಜೆಪಿಯ ಡಿಜಿoe ಠಿeಜ್ಞಿhಜ್ಞಿಜ ಎಂದು ಕಡೆಗಣಿಸಿದರು. ಎರಡು ಬಾರಿ ಗದ್ದುಗೆ ಏರಿಸಿದವರು ಮೂರನೇ ಬಾರಿ ಏರಿಸದಿರುತ್ತಾರೆಯೇ ಎಂಬ ಹುಂಬತನ ಮತ್ತು ಅಂಧವಿಶ್ವಾಸವೇ ಅವರಿಗೆ ಮುಳುವಾಯಿತು.
ಜಗತ್ತೇ ಬೆಕ್ಕಸ ಬೆರಗಾಗಿ ನೋಡುವಂಥ ಆಡಳಿತವನ್ನು ದೆಹಲಿಯಲ್ಲಿ ನೀಡಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದ ಆಮ್ ಆದ್ಮಿಗಳು, ದೆಹಲಿಯಲ್ಲಿ ಆಡಳಿತ-ವಿರೋಧಿ ಅಲೆ ಕ್ರಮೇಣ ರೂಪುಗೊಳ್ಳುತ್ತಿದ್ದುದನ್ನು ಈ ಹುಚ್ಚು ಭ್ರಮೆಯಲ್ಲಿ ಗಮನಿಸಿರಲಿಲ್ಲ.
ಇದನ್ನೂ ಓದಿ: Ramanand Sharma Column: ಶಿಸ್ತಿನ ಪಕ್ಷದಲ್ಲಿ ಹೀಗೊಂದು ಹಗ್ಗಜಗ್ಗಾಟ
ದೇಶವನ್ನೇ ಗೆದ್ದರೂ ಊರನ್ನು (ದೆಹಲಿ) ಗೆಲ್ಲಲಾಗದ ಅತೃಪ್ತಿ, ಅಸಮಾಧಾನ ಮತ್ತು ಕೀಳರಿಮೆ ಗಳಲ್ಲಿ ದಶಕದಿಂದ ಪರಿತಪಿಸುತ್ತಿದ್ದ ಬಿಜೆಪಿಯು, ದೆಹಲಿಯನ್ನು ಗೆಲ್ಲಲು ಏನೆಲ್ಲಾ ಕಾರ್ಯತಂತ್ರ, ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಅರಿಯಲು ‘ಆಮ್ ಆದ್ಮಿ’ ಯತ್ನಿಸಲಿಲ್ಲ. ‘ಗೆಲುವು ನನ್ನದೇ’ ಎಂಬ ಅತಿಯಾದ ಆತ್ಮವಿಶ್ವಾಸವೇ ಇದಕ್ಕೆ ಕಾರಣವಿದ್ದಿರಬಹುದು.
ವಾಸ್ತವದಲ್ಲಿ ದೆಹಲಿಯಲ್ಲಿ ದಾಖಲಾಗಿದ್ದು ಬಿಜೆಪಿಯ ಗೆಲುವಲ್ಲ, ಬದಲಾಗಿ ಅದು ಆಮ್ ಆದ್ಮಿ ಪಕ್ಷವೇ ಹರಿವಾಣದಲ್ಲಿಟ್ಟು ಬಿಜೆಪಿಯ ಕೈಗೆ ನೀಡಿರುವಂಥದ್ದು. ಚುನಾವಣಾ ಸೋಲೆಂಬುದು ಗೆಲುವಿನಂತೆ ತೀರಾ ಸಾಮಾನ್ಯ. ಆದರೆ ಕೇಜ್ರಿವಾಲರ ಪಕ್ಷವು ಸೋತಿರುವ ಪರಿ ಮಾತ್ರ ವಿಶ್ಲೇಷಕ ರನ್ನು ದಿಗಿಲುಗೊಳಿಸಿದೆ.
ಆಮ್ ಆದ್ಮಿ ಈ ಬಾರಿ ಅಧಿಕಾರದ ಗದ್ದುಗೆಯೇರದು ಎಂಬ ಸುಳಿವಿದ್ದರೂ, ಪಕ್ಷದ ಬುಡವನ್ನೇ ಅಲುಗಾಡಿಸುವಷ್ಟರ ಮಟ್ಟಿಗಿನ ಅದರ ಸೋಲು ನಿಜಕ್ಕೂ ಅಚ್ಚರಿ ತಂದಿದೆ. ಪಕ್ಷದಲ್ಲಿ ಕೆಳಹಂತದ ಧುರೀಣರು ಸೋತರೆ ಅದು ಸುದ್ದಿಯಾಗುವುದಿಲ್ಲ. ಆದರೆ ಅರವಿಂದ ಕೇಜ್ರಿವಾಲ್, ಸತ್ಯೇಂದರ್ ಜೈನ್, ಮನೀಶ್ ಸಿಸೋಡಿಯಾ, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್‌ರಂಥ ಉನ್ನತ ಮಟ್ಟದ ನಾಯಕರುಗಳೂ ನೆಲಕಚ್ಚಿರುವುದು ಪಕ್ಷದ ಜಂಘಾಬಲವನ್ನೇ ಉಡಗಿಸಿದೆ. ಈ ಸೋಲನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಿಕೊಳ್ಳಲಾಗದ ಹತಾಶ ಸ್ಥಿತಿಗೆ ಪಕ್ಷ ತಲುಪಿದೆ.
ಆಡಳಿತದ ದೃಷ್ಟಿಯಲ್ಲಿ ಕೇಜ್ರಿವಾಲರು ತಮ್ಮ ಮೊದಲ ಅವಧಿಯಲ್ಲಿ ಮೆಚ್ಚುಗೆ ಗಳಿಸಿದ್ದರು. ಆದರೆ ಎರಡನೇ ಅವಧಿಯಲ್ಲಿ ಕೇಂದ್ರ ಸರಕಾರದೊಂದಿಗೆ ನಿರಂತರ ಸಂಘರ್ಷಕ್ಕೆ ಇಳಿದ ಪರಿಣಾಮ ಅವರ ಜನಪ್ರಿಯತೆ ಕುಸಿಯತೊಡಗಿತು. ಕಳೆದ ನಾಲ್ಕಾರು ವರ್ಷಗಳಿಂದ ದೆಹಲಿಯ ಜನರು ಈ ಸಂಘರ್ಷಕ್ಕೆ ಮೂಕಸಾಕ್ಷಿಯಾದರು. ತಮ್ಮದಲ್ಲದ ಸರಕಾರ ಎಂಬ ಕಾರಣಕ್ಕೆ ಕೇಂದ್ರದ ಆಳುಗರು ಆಮ್ ಆದ್ಮಿಗಳ ಸರಕಾರಕ್ಕೆ ಸಹಕಾರ ನೀಡಲಿಲ್ಲ ಮತ್ತು ಅಡೆತಡೆ ಉಂಟುಮಾಡಿತ್ತು ಎಂಬ ವಾದದಲ್ಲಿ ಹುರುಳಿದ್ದರೂ, ಈ ಸಂಘರ್ಷವು ಅವರ ಆಡಳಿತದ ಬಗ್ಗೆ ಜನರು ಹೇವರಿಕೆ ಪಟ್ಟುಕೊಳ್ಳುವಂತೆ ಮಾಡಿತ್ತು.
ಇಂಥ ‘ಪಕ್ಷ ಸಂಘರ್ಷಗಳು’ ನಮ್ಮ ದೇಶದಲ್ಲಿ ಹೊಸ ಬೆಳವಣಿಗೆಯಲ್ಲ. ಡಬಲ್ ಎಂಜಿನ್ ಸರಕಾರ ಗಳು ಇಲ್ಲದಿದ್ದರೆ ಇದು ತೀರಾ ಸಾಮಾನ್ಯ. ಆದರೂ ಕೇಂದ್ರದೊಡನೆ ಸದಾ ಸಂಘರ್ಷಕ್ಕಿಳಿಯದೆ, ದೆಹಲಿಯ ಅಭಿವೃದ್ಧಿಯ ನಿಟ್ಟಿನಲ್ಲಾದರೂ ಸ್ವಲ್ಪ ‘ಕೊಡು-ಕೊಳ್ಳುವ’ ಧೋರಣೆ ತೋರಿಸಿದ್ದಿದ್ದರೆ, ಹೊಂದಾಣಿಕೆ ಮಾಡಿಕೊಂಡಿದ್ದಿದ್ದರೆ ಆಮ್ ಆದ್ಮಿಗೆ ಇಂಥ ದುಬಾರಿ ಬೆಲೆ ತೆರಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ.
ಸಂಘರ್ಷ ಹೀಗೇ ಮುಂದುವರಿದರೆ ದೆಹಲಿಯ ಅಭಿವೃದ್ಧಿ ಮರೀಚಿಕೆಯಾಗಬಹುದು ಮತ್ತು ತಮ್ಮ ಬದುಕು ಹೈರಾಣಾಗಬಹುದು ಎಂಬ ಕಾರಣಕ್ಕೆ ಜನರು ಆಮ್ ಆದ್ಮಿ ಸರಕಾರವನ್ನು ಕೆಳಗಿಳಿಸಲು ಮನಸ್ಸು ಮಾಡಿದಂತೆ ಕಾಣುತ್ತದೆ.
ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರ-ವಿರೋಧಿ ವೇದಿಕೆಯ ಮೇಲೆ ಜನ್ಮತಾಳಿದ್ದು. ಅಣ್ಣಾ ಹಜಾರೆ ಯವರಂಥ ಗಾಂಧಿವಾದಿ ಇದರ ಹಿಂದೆ ಇದ್ದರು. ಆದರೆ, ಈ ಪಕ್ಷವು ಭ್ರಷ್ಟಾಚಾರದ ಆರೋಪ ಗಳಿಂದಾಗಿಯೇ ಇಂದು ಅಧಿಕಾರವನ್ನು ಕಳೆದುಕೊಂಡಿದ್ದು ವಿಪರ್ಯಾಸ. ಅಬಕಾರಿ ಹಗರಣದ ವಿಷಯಕ್ಕೇ ಬರೋಣ. ಇದರ ಸತ್ಯಾಸತ್ಯತೆ ಏನೇ ಇರಲಿ, ಬೆಂಕಿಯಿಲ್ಲದೆ ಹೊಗೆ ಬಾರದು ಎಂಬುದು ಸಾಮಾನ್ಯ ಅಭಿಪ್ರಾಯವಾಗಿದ್ದು, ಇದು ಆಮ್ ಆದ್ಮಿ ಸರಕಾರವನ್ನು ನುಂಗಿಹಾಕಿತು ಎಂಬ ಮಾತಿ ನಲ್ಲಿ ಸತ್ಯವಿದೆ.
ಈ ಪ್ರಕರಣದಲ್ಲಿ ಕೇಜ್ರಿವಾಲರೊಂದಿಗೆ ಹಲವು ಪ್ರಮುಖ ಮಂತ್ರಿಗಳು ಜೈಲಿಗೆ ಹೋಗಿದ್ದು, ಜಾಮೀನಿಗಾಗಿ ಪರದಾಡಿದ್ದು ಇವನ್ನೆಲ್ಲಾ ಒಮ್ಮೆ ನೆನಪಿಸಿಕೊಳ್ಳಿ. ಸುದೀರ್ಘ ಕಾನೂನು ಹೋರಾ ಟ, ಕೇಜ್ರಿವಾಲರ ಜೈಲುವಾಸ, ತನ್ಮೂಲಕ ದಿನನಿತ್ಯದ ಆಡಳಿತದಲ್ಲಿ ಅಸ್ತವ್ಯಸ್ತತೆ, ಜೈಲಿನಲ್ಲಿ ಅವರಿಗೆ ನೀಡಲಾಗುತ್ತಿದ್ದ ಆಹಾರದ ಬಗೆಗಿನ ಜಿಜ್ಞಾಸೆ ಮುಂತಾದ ವಿಷಯಗಳಿಂದ ಜನರು ರೋಸಿ ಹೋಗಿದ್ದರು.
ಈ ಹಗರಣಗಳು ಇನ್ನೂ ತಾರ್ಕಿಕ ಅಂತ್ಯವನ್ನು ಕಾಣದ್ದರಿಂದ ಮತ್ತು ಅಕಸ್ಮಾತ್ ಆಮ್ ಆದ್ಮಿ ಪಕ್ಷವು ಇನ್ನೊಮ್ಮೆ ಅಧಿಕಾರ ಹಿಡಿದರೆ ಈ ಅಡೆತಡೆಗಳು ಮುಂದುವರಿಯುವುದು ಖಾತ್ರಿಯಾಗಿದ್ದ ರಿಂದ, ದೆಹಲಿಯ ಜನರು ಪೊರಕೆಯನ್ನು ಕಿತ್ತೆಸೆದು ಕಮಲವನ್ನು ಮುಡಿಗೇರಿಸಿ ಕೊಂಡಿದ್ದಾರೆ ಎಂಬ ತರ್ಕದಲ್ಲಿ ಅರ್ಥ ಕಾಣುತ್ತದೆ. ಕೇಜ್ರಿವಾಲ್‌ರ ಹೆಗಲೇರಿರುವ ಪ್ರಕರಣಗಳು ಮತ್ತು ಅವುಗಳ ಸಂಕೀರ್ಣತೆಯನ್ನು ಗಮನಿಸಿದರೆ, ಅವುಗಳಿಂದ ಹೊರಬರಲು ಅವರಿಗೆ ಶಕಗಳೇ ಬೇಕಾಗಬಹುದು ಎನಿಸುತ್ತದೆ.
ಆಮ್ ಆದ್ಮಿಯ ಸೋಲಿನ ಕಾರಣಗಳ ಚರ್ಚೆ ಜೋರಾಗಿ ನಡೆಯುತ್ತಿದೆ. ಹಿತಾಸಕ್ತರು ತಂತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಕಾರಣಗಳನ್ನು ನೀಡುತ್ತಿದ್ದಾರೆ. ಪಕ್ಷವು ತಾನು ನೀಡಿದ್ದ ಭರವಸೆಗಳ ಈಡೇರಿಕೆಯಲ್ಲಿ ಭಾರಿ ವಿಫಲವಾಗಿದ್ದು, ಮಧ್ಯಮವರ್ಗದವರು ಕೇಜ್ರಿವಾಲರ ನಡೆಗೆ ಮತ್ತು ರಾಜಕೀಯ ವೈಖರಿಗೆ ಭ್ರಮನಿರಸನಗೊಂಡಿದ್ದು, ಜೈಲಿಗೆ ಹೋದರೂ ಕುರ್ಚಿ ಬಿಡದಿದ್ದುದು, ವಾಯುಮಾಲಿನ್ಯ ನಿವಾರಣೆಯ ನಿಟ್ಟಿನಲ್ಲಿನ ತುಘಲಕ್ ನಿರ್ಧಾರಗಳು, ಸ್ವಚ್ಛತೆ-ನೀರು-ರಸ್ತೆಯಂಥ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಿರೀಕ್ಷಿತ ಸಾಧನೆ ಮಾಡದಿದ್ದುದು, ಸಾರಿಗೆ ದಟ್ಟಣೆ ನಿವಾರಣೆ ವಿಷಯದಲ್ಲಿ ಸರ್ವಸಮ್ಮತ ನಿಯಮಾವಳಿ ಮತ್ತು ವ್ಯವಸ್ಥೆಯನ್ನು ರೂಪಿಸದಿದ್ದುದು ಆಮ್ ಆದ್ಮಿಯ ಸೋಲಿಗೆ ಕಾರಣ ಎಂಬ ವಾದದಲ್ಲಿ ಸತ್ಯವಿದೆ.
ಆದರೆ, ಅದಕ್ಕೆ ಮಾರ್ಮಿಕ ಪೆಟ್ಟು ನೀಡಿದ್ದು, ಕೇಂದ್ರದ ಬಿಜೆಪಿ ಸರಕಾರದ ಇತ್ತೀಚಿನ 2 ಮಹತ್ವದ ನಿರ್ಣಯಗಳು. ಆದಾಯಕರ ನೀಡುವ ನೌಕರರು ದೆಹಲಿಯಲ್ಲಿ ಸುಮಾರು 5 ಲಕ್ಷದಷ್ಟಿದ್ದು, ಇವರು ಕನಸಿನಲ್ಲೂ ನಿರೀಕ್ಷಿಸದಿದ್ದ ಆದಾಯಕರ ರಿಯಾಯಿತಿಯನ್ನು ನೀಡಿದ್ದು ಈ ಪೈಕಿ ಒಂದು. ರಿಯಾಯಿತಿಯ ಸುಳಿವಿದ್ದರೂ ಈ ಮಟ್ಟದಲ್ಲಿ ದಕ್ಕಬಹುದೆಂದು ಅವರು ನಿರೀಕ್ಷಿಸಿರಲಿಲ್ಲ.
ಇದು ಅವರಿಗೆ ಬಂಪರ್ ಲಾಟರಿಯಾಗಿದ್ದರ ಜತೆಗೆ, ಚುನಾವಣೆಯಲ್ಲಿ ಬಿಜೆಪಿಗೆ ಅನಿರೀಕ್ಷಿತ ‘ಡಿವಿ ಡೆಂಡ್’ ನೀಡಿತು. ಹಾಗೆಯೇ, ಸರಕಾರಿ ನೌಕರರಿಗೆ 8ನೇ ವೇತನ ಆಯೋಗ ರಚಿಸಿದ್ದು ಮತ್ತು ಇದರ ನ್ವಯ ನೌಕರರಲ್ಲಿ ಗಣನೀಯ ಪ್ರಮಾಣದಲ್ಲಿ ಸಂಬಳದ ಹೆಚ್ಚಳದ ಭರವಸೆ ಮೂಡಿಸಿದ್ದು, ದೆಹಲಿಯಲ್ಲಿ ಗಮನಾರ್ಹ ಪ್ರಮಾಣದಲ್ಲಿರುವ ಸರಕಾರಿ ನೌಕರರನ್ನು ಬುಟ್ಟಿಗೆ ಹಾಕಿಕೊಂಡಿತು.
ಹಾಗೆಯೇ ಬಜೆಟ್ ಅನುದಾನದಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಗಳಿಗೆ ಆದ್ಯತೆ ನೀಡಿ, ದೆಹಲಿ ಯಲ್ಲಿರುವ ಆ ರಾಜ್ಯದವರನ್ನು ಸೆಳೆದುಕೊಂಡಿದ್ದು ಇನ್ನೊಂದು ವಿಶೇಷ.ಇತ್ತೀಚಿನ ಚುನಾವಣೆ ಗಳಲ್ಲಿ ಮೋಡಿ ಮಾಡಿದ ಉಚಿತಗಳು/ಗ್ಯಾರಂಟಿಗಳ ಭರವಸೆಗಳನ್ನು ‘ಬಿಟ್ಟಿ-ಭಾಗ್ಯಗಳು’ ಎಂದು ತಾನು ಲೇವಡಿಮಾಡಿದರೂ, ಆಮ್ ಆದ್ಮಿ ಪಕ್ಷ ನೀಡಿದ ಉಚಿತಗಳನ್ನು ನೀವಾಳಿಸಿ ತೆಗೆಯುವಂತೆ ದೆಹಲಿಯ ಜನರಿಗೆ ಉಚಿತಗಳ ಭರವಸೆಯ ಪ್ರವಾಹವನ್ನು ಹರಿಬಿಟ್ಟಿದ್ದು ಬಿಜೆಪಿಗೆ ವರವಾಗಿ ಪರಿಣಮಿಸಿತು.
ಇಂಥ ಭರವಸೆಗಳ ವಿಷಯದಲ್ಲಿ ಕೇಜ್ರಿವಾಲರಿಗಿಂತ ಮೋದಿಯವರಿಗೆ ಹೆಚ್ಚು ಅಂಕ ಇರುವುದು ಎಲ್ಲರಿಗೂ ತಿಳಿದ ವಿಷಯವೇ. ಉಚಿತಗಳ ತುರುಸಿನ ಸ್ಪರ್ಧೆಯಲ್ಲಿ ಮೋದಿಯವರು ಕೇಜ್ರಿವಾಲ ರನ್ನು ಹಿಂದಿಕ್ಕಿಬಿಟ್ಟರು.
ಲೋಕಸಭಾ ಚುನಾವಣೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿ ಮುಜುಗರಕ್ಕೊಳಗಾದ ಬಿಜೆಪಿಯು ಈ ಬಾರಿ ತನ್ನ ಕಾರ್ಯತಂತ್ರವನ್ನು ಅನುಭವದ ಹಿನ್ನೆಲೆಯಲ್ಲಿ ಬದಲಿಸಿತ್ತು. ಅಯೋಧ್ಯಾ ಮಂದಿರ, ಕುಂಭಮೇಳದಂಥ ಧಾರ್ಮಿಕ/ ದೇಶಭಕ್ತಿಯ ವಿಷಯಗಳಿಗೆ ಒತ್ತುನೀಡದೇ, ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನಕಲ್ಯಾಣದಂಥ ವಿಷಯಗಳಿಗೆ ಆದ್ಯತೆ ನೀಡಿತು. ಹಾಗೆಯೇ ಆಮ್ ಆದ್ಮಿ ಸರಕಾರದ ಭ್ರಷ್ಟಾಚಾರವನ್ನು ಬ್ರಹ್ಮಾಸವನ್ನಾಗಿ ಬಳಸಿತು.
ಚುನಾವಣೆ ದೆಹಲಿಯಲ್ಲಾಗಿದ್ದರಿಂದ, ಮೋದಿ ಮತ್ತು ಅಮಿತ್ ಶಾ ಪ್ರಚಾರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತಾಗಿ ಪಕ್ಷಕ್ಕೆ ಭಾರಿ ಅನುಕೂಲವಾಯಿತು. ಅಮಿತ್ ಶಾ ಅವರಂತೂ ‘ವಿಶೇಷ ಕಾರ್ಯಪಡೆ’ಯನ್ನೇ ರಚಿಸಿ, ತಮ್ಮೊಂದಿಗೆ ಕಾರ್ಯಕರ್ತರನ್ನೂ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷಕ್ಕೆ ಗೆಲುವು ತಂದಿತ್ತರು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಆಸಕ್ತಿ ತೋರದಿದ್ದ ರಾಷ್ಟ್ರೀ ಯ ಸ್ವಯಂಸೇವಕ ಸಂಘವು, ಮಹಾರಾಷ್ಟ್ರ ಚುನಾವಣೆಯಂತೆ ದೆಹಲಿಯಲ್ಲೂ ಕ್ರಿಯಾಶೀಲ ವಾಗಿದ್ದು ಬಿಜೆಪಿ ಹೊತ್ತಿದ್ದ ಕಾರ್ಯಭಾರವನ್ನು ಸುಲಭಗೊಳಿಸಿತು.
‘ಇಬ್ಬರ ಜಗಳ ಮೂರನೆಯವನಿಗೆ ಲಾಭ’ ಎಂಬುದು ಹಳೆಯ ಗಾದೆ. ‘ಇಂಡಿಯ’ ಒಕ್ಕೂಟದ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳ ಒಳಜಗಳ-ವಿಚ್ಛೇದನವು ದೆಹಲಿಯಲ್ಲಿ ಬಿಜೆಪಿಗೆ ವರವಾಗಿ ಪರಿಣ ಮಿಸಿತು. ವರದಿಗಳ ಪ್ರಕಾರ, ಸುಮಾರು 17 ಕ್ಷೇತ್ರಗಳಲ್ಲಿ ಆಮ್ ಆದ್ಮಿಯ ಗೆಲುವಿಗೆ ಕಾಂಗ್ರೆಸ್ ಅಡ್ಡ ಗಾಲು ಹಾಕಿದೆಯಂತೆ. ಕ್ಷುಲ್ಲಕ ವಿಷಯಗಳನ್ನು, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅವೆರಡೂ ಒಟ್ಟಾಗಿ ಹೋರಾಡಿದ್ದಿದ್ದರೆ, ಬಿಜೆಪಿಯ ಓಟಕ್ಕೆ ಸ್ವಲ್ಪ ತಡೆಯೊಡ್ಡಬಹುದಿತ್ತು.
ಕೆಲವರು ಇತಿಹಾಸದಿಂದ ಪಾಠ ಕಲಿಯುವುದಿಲ್ಲ ಎಂಬುದು ಕಾಂಗ್ರೆಸ್‌ನ ಶೂನ್ಯ ಸಂಪಾದನೆ ಯಲ್ಲಿ ಇನ್ನೊಮ್ಮೆ ಸಾಬೀತಾಗಿದೆ. ಒಂದೆರಡು ನಿದರ್ಶನಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್ 2014ರಿಂದ ಪಾತಾಳಕ್ಕೆ ಇಳಿಯುತ್ತಿದೆ. ತನ್ನ ಸೋಲಿಗಿರುವ ಕಾರಣವನ್ನು ಹುಡುಕುವಲ್ಲಿ ಅದು ಇನ್ನೊಮ್ಮೆ ವಿಫಲವಾಗಿದೆ.
ಬದಲಾದ ಚಿಂತನೆಗಳಿಗೆ ಸ್ಪಂದಿಸದೇ, ತನ್ನ ಹಳೆಯ ಸಿದ್ಧಾಂತಗಳಿಗೇ ಜೋತುಬಿದ್ದು ಚುನಾವಣೆ ಯಲ್ಲಿ ಅದು ನೆಲಕಚ್ಚುತ್ತಿದೆ. ಇಡೀ ದೇಶವೇ ಒಪ್ಪಿರುವ ಕೆಲ ಪರಿಕಲ್ಪನೆಗಳನ್ನು, ದೇಶದಲ್ಲಿ ಸಾರಾ ಸಗಟಾಗಿ ತಿರಸ್ಕರಿಸಲ್ಪಡುತ್ತಿರುವ ಸೆಕ್ಯುಲರಿಸಂನ ಹೆಸರಲ್ಲಿ ಅದು ವಿರೋಧಿಸಿ ಬಹುಸಂಖ್ಯಾತ ರಿಂದ ದೂರವಾಗುತ್ತಿದೆ. ಅಂದರೆ, ತ್ರಿವಳಿ ತಲಾಖ್ ರದ್ದತಿ ವಿಧೇಯಕ, 370ನೇ ವಿಧಿಯ ರದ್ದತಿ, ಸದ್ಯದಲ್ಲಿ ಮಂಡಿಸಲ್ಪಡುವ ಏಕರೂಪ ನಾಗರಿಕ ಸಂಹಿತೆ, ಹಿಜಾಬ್ ನಿಷೇಧ ಮುಂತಾದ ವಿಷಯ ಗಳಲ್ಲಿ ಅದು ಅಪಸ್ವರವೆತ್ತಿ, ಅಪಾಯವನ್ನು ಆಹ್ವಾನಿಸಿಕೊಂಡಿದೆ.
‘ಇಂಡಿಯ’ ಒಕ್ಕೂಟದ ಸದಸ್ಯ ಪಕ್ಷದವರೊಬ್ಬರು ಸನಾತನ ಧರ್ಮವನ್ನು ಟೀಕಿಸಿದಾಗ ಕಾಂಗ್ರೆಸ್ಸಿ ಗರು ಜಾಣಮೌನ ವಹಿಸಿದರು, ಅಯೋಧ್ಯಾ ರಾಮಮಂದಿರವನ್ನು ಜಗತ್ತೇ ಸಂಭ್ರಮಿಸುವಾಗ ಅಪಸ್ವರವೆತ್ತಿದರು. ಸಾಲದೆಂಬಂತೆ, “ಕುಂಭಮೇಳದಲ್ಲಿ ಮಿಂದರೆ ಬಡತನ ನಿವಾರಣೆಯಾಗು ವುದೇ?" ಎಂದು ಕೇಳಿ ಹಿಂದೂಗಳ ಭಾವನೆಯನ್ನು ಕೆಣಕಿದರು.
ಇವೆಲ್ಲವನ್ನೂ ಗಮನಿಸಿ ಜನರು ಬಹುಶಃ ಕಾಂಗ್ರೆಸ್‌ಗೆ ಮತಹಾಕಿಲ್ಲ ಎಂಬ ವಿಶ್ಲೇಷಣೆಯಲ್ಲಿ ಅರ್ಥವಿಲ್ಲದಿಲ್ಲ. ‘ಸೆಕ್ಯುಲರಿಸಂ’ ಎಂಬ ಕಾಂಗ್ರೆಸ್‌ನ ಟ್ರಂಪ್‌ಕಾರ್ಡ್ ಚಲಾವಣೆ ಕಳೆದುಕೊಂಡಿದೆ. ರಾಷ್ಟ್ರದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಇನ್ನೊಮ್ಮೆ ಮೆರೆಯಬೇಕಾದರೆ, ಅದು ತನ್ನ ಸಿದ್ಧಾಂತಗಳನ್ನು ಬದಲಿಸಿಕೊಂಡು, ದೇಶದ ಜನರ ಬದಲಾದ ಚಿಂತನೆಗೆ ಸ್ಪಂದಿಸಬೇಕು. ಇಲ್ಲ ದಿದ್ದರೆ ಅದು ಇತಿಹಾಸದ ಪುಟಗಳನ್ನು ಸೇರುವುದು ನಿಶ್ಚಿತ.
(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)