Yuddhakaanda Teaser: ಬಹುನಿರೀಕ್ಷಿತ ಯುದ್ಧಕಾಂಡ ಸಿನಿಮಾದ ಟೀಸರ್ ಬಿಡುಗಡೆ: ಹೆಣ್ಣಿನ ಶೋಷಣೆ ವಿರುದ್ಧ ಅಜಯ್ ರಾವ್ ಹೋರಾಟ
ಯುದ್ಧಕಾಂಡ ಚಿತ್ರದ ಒಂದು ಸೀನ್ ಅನ್ನ ಸ್ವತಃ ಅಜಯ್ ರಾವ್ ಅವರೇ ಶೇರ್ ಮಾಡಿದ್ದಾರೆ. ಈ ದೃಶ್ಯ ನಿಜಕ್ಕೂ ಮನಮುಟ್ಟಿವಂತಿದೆ. ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಅಜಯ್ ರಾವ್ ನಟಿಸಿದ್ದಾರೆ. ಅರ್ಚನಾ ಜೋಯಿಸ್ ಹಾಗೂ ಪ್ರಕಾಶ್ ಬೆಳವಾಡಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.

yuddhakaanda ajay rao 2025

ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ (Ajay Rao) ಸುಮಾರು ಎರಡು ವರ್ಷಗಳ ಬಳಿಕ ಇದೀಗ ಮತ್ತೊಂದು ಸಿನಿಮಾ ಮೂಲಕ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರ ‘ಯುದ್ಧಕಾಂಡ 2’ ಸಿನಿಮಾ ಬಗ್ಗೆ ಜೋರು ಸುದ್ದಿಯಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ 'ಟಾಕ್ಸಿಕ್' ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ ಮುಂದೆ ಬಂದಿದೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯ ಕಥೆ ಚಿತ್ರದಲ್ಲಿದೆ.
ಈ ಚಿತ್ರದ ಒಂದು ಸೀನ್ ಅನ್ನ ಸ್ವತಃ ಅಜಯ್ ರಾವ್ ಅವರೇ ಶೇರ್ ಮಾಡಿದ್ದಾರೆ. ಈ ದೃಶ್ಯ ನಿಜಕ್ಕೂ ಮನಮುಟ್ಟಿವಂತಿದೆ. ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಅಜಯ್ ರಾವ್ ನಟಿಸಿದ್ದಾರೆ. ಅರ್ಚನಾ ಜೋಯಿಸ್ ಹಾಗೂ ಪ್ರಕಾಶ್ ಬೆಳವಾಡಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.
ಟೀಸರ್ನಲ್ಲಿ ಪುಟ್ಟ ಬಾಲಕಿ ಮೇಲೆ ಆಗಿರುವ ಅತ್ಯಾಚಾರದ ವಿರುದ್ಧ ಕೇಸ್ ಅಜಯ್ ರಾವ್ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ. ಚಹಾ ಕೊಡುವ ಹುಡುಗ ಇಲ್ಲಿ ಅಜಯ್ ರಾವ್ ಆಡುವ ಮಾತನ್ನ ಕೇಳಿ ಗಾಬರಿ ಆಗಿರ್ತಾನೆ. ಚಹಾದ ದುಡ್ಡನ್ನ ಕೊಡಲು ಅಜಯ್ ರಾವ್ ಮುಂದಾದಾಗ ಆ ಹುಡುಗ, ಈಗ ದುಡ್ಡೇನೂ ಬೇಡ. ಕೇಸ್ ಗೆದ್ದ ಮೇಲೇನೆ ಈ ಚಹಾದ ದುಡ್ಡು ಕೊಡಿ ಎಂದು ಹೇಳುತ್ತಾನೆ. ಹೀಗೆ ಮೊದಲ ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಅಜಯ್ ರಾವ್ ಕಳೆದ ಮೂರು ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಂಡಿಲ್ಲ. 2022ರಲ್ಲಿ ತೆರೆಕಂಡಿದ್ದ ಶೋಕಿವಾಲ ಅವರು ಅಭಿನಯಿಸಿದ್ದ ಕೊನೆಯ ಸಿನಿಮಾ. ಇದೀಗ ಪವನ್ ಭಟ್ ನಿರ್ದೇಶನದ ಯುದ್ಧಕಾಂಡ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಟನೆ ಜತೆಗೆ ಈ ಚಿತ್ರವನ್ನು ಅವರೇ ನಿರ್ಮಿಸುತ್ತಿರುವುದು ಮತ್ತೊಂದು ವಿಶೇಷತೆ. ಏಪ್ರಿಲ್ 18ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಟೀಸರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಚಿತ್ರತಂಡ ಕುತೂಹಲ ಮೂಡುವಂತೆ ಮಾಡಿದೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ಚಿತ್ರಕ್ಕಿದೆ.
Bhagya Lakshmi Serial: ತಾಂಡವ್ ಮತ್ತೊಮ್ಮೆ ಫ್ಲಾಫ್: ತನ್ಮಯ್ ಸ್ಕೂಲ್ ಫೀಸ್ ಕಟ್ಟಿದ ಭಾಗ್ಯ