AR Rahman: ಎ.ಆರ್.ರೆಹಮಾನ್ ವಿರುದ್ಧ ಕಾಪಿರೈಟ್ ವಿವಾದ; 2 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 2ʼ ಸಿನಿಮಾದ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬೇರೆ ಹಾಡೊಂದರ ಸಂಗೀತ ಬಳಕೆ ಮಾಡಿ ಕೃತಿ ಚೌರ್ಯ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ಕೋಟಿ ರೂ. ದಂಡವನ್ನು ದೆಹಲಿ ಹೈಕೋರ್ಟ್ ವಿಧಿಸಿದೆ.

AR Rahman

ನವ ದೆಹಲಿ: ಸಂಗೀತ ಮಾಂತ್ರಿಕ, ಭಾರತದ ನಂ 1. ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್‌ಗೆ (AR Rahman) ದಿಲ್ಲಿ ಹೈಕೋರ್ಟ್ 2 ಕೋಟಿ ರೂ. ದಂಡ ವಿಧಿಸಿದೆ. ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 2ʼ ಸಿನಿಮಾದ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬೇರೆ ಹಾಡೊಂದರ ಸಂಗೀತ ಬಳಕೆ ಮಾಡಿ ಕೃತಿ ಚೌರ್ಯ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ಕೋಟಿ ರೂ. ದಂಡವನ್ನು ದಿಲ್ಲಿ ಹೈಕೋರ್ಟ್ ವಿಧಿಸಿದೆ. ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದಂತೆ ಗಾಯಕ ಫಯಾಜ್ ವಾಸಿ ಫುದ್ದೀನ್ ದಾಗರ್ ಎನ್ನುವವರು ಈ ಆರೋಪ ಮಾಡಿದ್ದು ಈ ಕುರಿತಂತೆ ಕೋರ್ಟ್‌ಗೆ ಅರ್ಜಿ ಕೂಡ ಸಲ್ಲಿಸಿದ್ದರು. ಇದೇ ಪ್ರಕರಣದಲ್ಲಿ ಹೈಕೋರ್ಟ್ 2 ಕೋಟಿ ರೂ. ದಂಡ ವಿಧಿಸಿದೆ.
ʼಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿನ ʼವೀರ ರಾಜ ವೀರ’ ಹಾಡಿಗೆ ಸಂಬಂಧಿಸಿ ಈ ಆರೋಪ ಕೇಳಿ ಬಂದಿದೆ. ಈ ಹಾಡಿನ ವಿರುದ್ಧ ಉಸ್ತಾದ್ ಫಯಾಜ್ ದಾಗರ್ ಕೃತಿಚೌರ್ಯದ ಆರೋಪ ಹೊರಿಸಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೂಲ ಹಾಡಿನ ಸಂಗೀತ, ಬೀಟ್, ರಾಗ, ಹಿನ್ನೆಲೆ ಸಂಗೀತವನ್ನು ಎ.ಆರ್. ರೆಹಮಾನ್, ತಮ್ಮ ಹಾಡಿನಲ್ಲಿ ಯಥಾವತ್ತಾಗಿ ಬಳಸಿಕೊಂಡಿದ್ದಾರೆ ಎಂದು ಗಾಯಕ ಫೈಯಾಜ್ ಆರೋಪಿಸಿದ್ದರು.
ಪದ್ಮಶ್ರೀ ಪುರಸ್ಕೃತ ಭಾರತೀಯ ಗಾಯಕ ಫೈಯಾಜ್ ವಾಸಿಫುದ್ದೀನ್ ದಾಗರ್ 2023ರಲ್ಲಿ ಈ ಹಾಡನ್ನು ತಮ್ಮ ತಂದೆ ನಾಸಿರ್ ಫೈಯಾಜುದ್ದೀನ್ ದಾಹರ್ ಮತ್ತು ಚಿಕ್ಕಪ್ಪ ಜಹೀರುದ್ದೀನ್ ದಾಗರ್ ಅವರ ಸಂಯೋಜನೆಯ ʻಶಿವ ಸ್ತುತಿʼಯಿಂದ ನಕಲು ಮಾಡಲಾಗಿದೆ ಎಂದು ಆರೋಪಿಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಇದೀಗ ಆರೋಪ ಸಾಬೀತಾಗಿದ್ದು ನ್ಯಾಯಾಲದ ರಿಜಿಸ್ಟ್ರಿಯಲ್ಲಿ 2 ಕೋಟಿ ರೂ. ಠೇವಣಿ ಇಡುವಂತೆ ರೆಹಮಾನ್ ಮತ್ತು ʻಮದ್ರಾಸ್ ಟಾಕೀಸ್ʼ ನಿರ್ಮಾಣ ಸಂಸ್ಥೆಗೆ ನ್ಯಾಯಾಲಯ ಸೂಚನೆ ನೀಡಿದೆ.
ಇದನ್ನು ಓದಿ: Fawad Khan Movie: ಪಾಕ್ ನಟ ಫಯಾದ್ ಖಾನ್ ನಟನೆಯ ಅಬಿರ್ ಗುಲಾಲ್ ಸಿನಿಮಾದ ಹಾಡುಗಳು ಯೂಟ್ಯೂಬ್‌ನಿಂದ ಡಿಲೀಟ್
ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಎ.ಆರ್. ರೆಹಮಾನ್ ಅವರಿಗೆ 2 ಕೋಟಿ ರೂ. ದಂಡವನ್ನು ಹೇರಿದೆ. ಅದರ ಜತೆಗೆ ಕೋರ್ಟ್ ಕಲಪಾದ ಖರ್ಚಿಗೆ 2 ಲಕ್ಷ ರೂ.ಯನ್ನು ಹೆಚ್ಚುವರಿಯಾಗಿ ದಾಗರ್ ಕುಟುಂಬಕ್ಕೆ ನೀಡಬೇಕು ಎಂದಿದೆ. ಮಾತ್ರವಲ್ಲ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಯಾವೆಲ್ಲ ವೇದಿಕೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆಯೋ ಅಲ್ಲೆಲ್ಲ ಮೂಲ ಹಾಡಿನ ಸಂಗೀತ ನಿರ್ದೇಶಕರ ಹೆಸರನ್ನು ಸೇರಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.