ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fawad Khan Movie: ಪಾಕ್ ನಟ ಫಯಾದ್ ಖಾನ್ ನಟನೆಯ ಅಬಿರ್ ಗುಲಾಲ್ ಸಿನಿಮಾದ ಹಾಡುಗಳು ಯೂಟ್ಯೂಬ್‌ನಿಂದ ಡಿಲೀಟ್

ಪಾಕ್ ನಟ ಫವಾದ್ ಖಾನ್(Fawad Khan movie) ನಟಿಸಿರುವ ಹಿಂದಿ ಸಿನಿಮಾವೊಂದರ ಮೇಲೆ ಉಗ್ರರ ದಾಳಿಯ ನೇರ ಎಫೆಕ್ಟ್ ಬಿದ್ದಿದೆ. ಭಾರತದಲ್ಲಿ ಬಿಡುಗಡೆ ಆಗಬೇಕಿದ್ದ ಪಾಕಿಸ್ತಾನದ ನಟನ ಸಿನಿಮಾ ಒಂದಕ್ಕೆ ಇದೀಗ ಅವಕಾಶ ನಿರಾಕರಿಸಲಾಗಿದೆ. ಈ ಸಿನಿಮಾದ ಹಾಡು ಮತ್ತು ಟೀಸರ್ ನ ತುಣುಕು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ.

ಪಾಕ್‌ ನಟ ಸಿನಿಮಾ ಹಾಡು ಯೂಟ್ಯೂಬ್‌ನಿಂದ ಡಿಲೀಟ್

Profile Pushpa Kumari Apr 25, 2025 1:00 PM

ನವದೆಹಲಿ: ಬರೋಬ್ಬರಿ 26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್‌ ಉಗ್ರರ ದಾಳಿ ಬೆನ್ನಲ್ಲೇ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಕೆಲ ರಾಜತಾಂತ್ರಿಕ ದಿಟ್ಟ ಹೆಜ್ಜೆಗಳನ್ನು ತೆಗೆದುಕೊಂಡಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಅದು ಸಿನಿಮಾರಂಗದ ಮೇಲೂ ಎಫೆಕ್ಟ್ ಆಗಿದೆ. ಹೌದು, ಪಾಕ್ ನಟ ಫವಾದ್ ಖಾನ್ (Fawad Khan) ನಟಿಸಿರುವ ಹಿಂದಿ ಸಿನಿಮಾವೊಂದರ ಮೇಲೆ ಉಗ್ರರ ದಾಳಿಯ ನೇರ ಹೊಡೆತ ಬಿದ್ದಿದೆ. ಭಾರತದಲ್ಲಿ ಬಿಡುಗಡೆ ಆಗಬೇಕಿದ್ದ ಪಾಕಿಸ್ತಾನದ ನಟನ ಸಿನಿಮಾ ಒಂದಕ್ಕೆ ಇದೀಗ ಅವಕಾಶ ನಿರಾಕರಿಸಲಾಗಿದೆ. ಪಾಕ್ ಮೂಲದ ನಟ ಫವಾದ್ ಖಾನ್ ಅಭಿನಯದ ಅಬಿರ್ ಗುಲಾಲ್ ಸಿನಿಮಾ ಬಹಿಷ್ಕರಿಸುವ ಮಾತು ಕೇಳಿ ಬಂದ ಬೆನ್ನಲ್ಲೆ ಈ ಸಿನಿಮಾದ ಹಾಡು ಮತ್ತು ಟೀಸರ್‌ನ ತುಣುಕು ಯೂಟ್ಯೂಬ್ ನಿಂದ ತೆಗೆದುಹಾಕಲಾಗಿದೆ.

ಪಾಕ್ ನಟ ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿರುವ ಅಬಿರ್ ಗುಲಾಲ್ ಸಿನಿಮಾ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಸದ್ಯ ತೆರೆಗೆ ಬರಲು ಸಿದ್ಧವಾಗಿರುವ ಈ ಸಿನಿಮಾ ರಿಲೀಸ್‌ಗೆ ನಿಷೇಧ ಹೇರಲಾಗಿದೆ. ಈ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಮೂಲಗಳು ಹೇಳಿವೆ. ಈ ನಡುವೆ  ಬಹಿಷ್ಕಾರಕ್ಕಾಗಿ ವ್ಯಾಪಕ ಕರೆಗಳು ಬಂದ ಕಾರಣ, ಚಿತ್ರದ ಪ್ರಚಾರ ಹಾಡುಗಳನ್ನು ಯೂಟ್ಯೂಬ್ ನಿಂದ ತೆಗೆದು ಹಾಕಲಾಗಿದೆ ಎಂದು ಕೂಡ ವರದಿಯಾಗಿದೆ.

ಈ ಹಿಂದೆ ಚಿತ್ರದ ಎರಡು ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಖುದಯಾ ಇಷ್ಕ್ ಎಂಬ ರೊಮ್ಯಾಂಟಿಕ್ ಟ್ರ್ಯಾಕ್ ಮತ್ತು ಅಂಗ್ರೇಜಿ ರಂಗಾಸಿಯಾ ಎಂಬ ಜೋಶ್ ನೃತ್ಯದ ಹಾಡುಗಳು ಇನ್ಮುಂದೆ ಯೂಟ್ಯೂಬ್‌ನಲ್ಲಿ ಲಭ್ಯವಿರುವುದಿಲ್ಲ. ಈ ಹಾಡುಗಳು ನಿರ್ಮಾಣ ಕಂಪೆನಿಯಾದ ಎ ರಿಚರ್ ಲೆನ್ಸ್ ಎಂಟರ್‌ಟೈನ್‌ಮೆಂಟ್‌ನ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಿ ಚಿತ್ರದ ಸಂಗೀತ ಹಕ್ಕು ಹೊಂದಿರುವ ಲೇಬಲ್ ಹೊರತು ಪಡಿಸಿ ಅಧಿಕೃತ ಯೂಟ್ಯೂಬ್ ಪುಟದಿಂದಲೂ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.

ಪಾಕ್ ನಟ ಫವಾದ್ ಖಾನ್ ಕೂಡ ಪಾಕ್ ದಾಳಿಯ ಬಗ್ಗೆ ಪೋಸ್ಟ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಘೋರ ದಾಳಿಯ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ದುಃಖವಾಯಿತು. ಈ ಭಯಾನಕ ಘಟನೆಯ ಸಂತ್ರಸ್ತರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಕುಟುಂಬಗಳಿಗೆ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ’ ಎಂದು ಅವರು ಬರೆದುಕೊಂಡ ಪೋಸ್ಟ್ ಸದ್ಯ ವೈರಲ್ ಆಗಿದೆ.

ಇದನ್ನು ಓದಿ: Actor Fawad Khan: ಪಾಕ್ ನಟ ಫವಾದ್ ಖಾನ್ ನಟನೆಯ ಚಿತ್ರಕ್ಕೆ ಭಾರೀ ವಿರೋಧ! ಕಾರಣ ಏನು?

ಪಾಕ್ ನಟನ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಾವು ಬಿಡುವುದಿಲ್ಲ. ನಿರ್ಮಾಪಕರು ಚಿತ್ರವನ್ನು ಬಿಡುಗಡೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್  ಅಧ್ಯಕ್ಷ ಬಿಎನ್ ತಿವಾರಿ ಕೂಡ ದೃಢ ನಿರ್ಧಾರ ಕೈಗೊಂಡಿದ್ದು ಸಿನಿಮಾ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಅಬೀರ್ ಗುಲಾಲ್ ಅವರನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.2019ರಲ್ಲೂ ಪುಲ್ವಾಮಾ ದಾಳಿಯಲ್ಲಿ 35 ಅರೆಸೇನಾಪಡೆ ಸಿಬ್ಬಂದಿ ಬಲಿಯಾದ ನಂತರ ಭಾರತೀಯ ಚಲನಚಿತ್ರೋದ್ಯಮದ ಪಾಕಿಸ್ತಾನಿ ಕಲಾವಿದರು, ಗಾಯಕರು ಮತ್ತು ತಂತ್ರಜ್ಞರನ್ನು ಬಹಿಷ್ಕರಿಸುವಂತೆ ಸಂಘಟನೆ ಕರೆ ನೀಡಿತ್ತು.