Womens Celebrity Leauge: ಸ್ಯಾಂಡಲ್‌ವುಡ್ ವುಮೆನ್ಸ್ ಕ್ರಿಕೆಟ್ ಲೀಗ್ ಆರಂಭಕ್ಕೆ ಕ್ಷಣಗಣನೆ
ಚಿತ್ರರಂಗದ ಹೊಸ ಕ್ರಿಕೆಟ್ ಟೂರ್ನಮೆಂಟ್ ಸ್ಯಾಂಡಲ್ ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್. ಹೆಸರೇ ಹೇಳುವಂತೆ ಇದು ಮಹಿಳಾ ಕ್ರಿಕೆಟ್ ಪಂದ್ಯಾವಳಿ. ಇತ್ತೀಚರಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸ್ಯಾಂಡಲ್‌ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್-SWCL ಸುದ್ದಿಗೋಷ್ಟಿ ಏರ್ಪಡಿಸಲಾಗಿತ್ತು. ನಟ ರಾಜ್ ಬಿ. ಶೆಟ್ಟಿ ಹಾಗೂ ಟೂರ್ನಮೆಂಟ್ ಬ್ರ್ಯಾಂಡ್ ಅಂಬಾಸಿಡರ್ ಆದ ತಾರಾ ಅನುರಾಧ, ಶ್ರುತಿ, ಅನು ಪ್ರಭಾಕರ್ ಹಾಗೂ ಪ್ರಿಯಾಂಕಾ ಉಪೇಂದ್ರ ಭಾಗಿಯಾಗಿದ್ದರು.

celebrity league

ಬೆಂಗಳೂರು: ಕನ್ನಡ ಚಿತ್ರರಂಗವು ಖ್ಯಾತಿ ಗಳಿಸಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು ಎಂಬ ಒಳ್ಳೆ ಧ್ಯೇಯವನ್ನು ಇಟ್ಕೊಂಡು ಚಿತ್ರರಂಗದಲ್ಲಿ ಹೊಸ ಕ್ರಿಕೆಟ್ ಟೂರ್ನಮೆಂಟ್ ಪ್ರಾರಂಭಿಸಲಾಗಿದೆ. ಇದಕ್ಕೆ ಸ್ಯಾಂಡಲ್‌ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್ ಎಂದು ಹೆಸರಿಡಲಾಗಿದೆ. ಹೆಸರೇ ಹೇಳುವಂತೆ ಇದು ಮಹಿಳಾ ಕ್ರಿಕೆಟ್ ಪಂದ್ಯಾವಳಿ. ಇತ್ತೀಚೆಗೆಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸ್ಯಾಂಡಲ್‌ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್ (Sandalwood women's celebrity league)ನ ಸುದ್ದಿ ಗೋಷ್ಠಿ ಏರ್ಪಡಿಸಲಾಗಿತ್ತು. ನಟ ರಾಜ್ ಬಿ. ಶೆಟ್ಟಿ ಹಾಗೂ ಟೂರ್ನಮೆಂಟ್ ಬ್ರ್ಯಾಂಡ್ ಅಂಬಾಸಿಡರ್ ತಾರಾ ಅನುರಾಧ, ಶ್ರುತಿ, ಅನು ಪ್ರಭಾಕರ್ ಹಾಗೂ ಪ್ರಿಯಾಂಕಾ ಉಪೇಂದ್ರ ಭಾಗಿಯಾಗಿದ್ದರು. ಈ ಟೂರ್ನಮೆಂಟ್ ಸಂಸ್ಥಾಪಕ ಪೀಟರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾರಾ ಅನುರಾಧ ಮಾತನಾಡಿ, ʼʼಎಲ್ಲ ಹೆಣ್ಣುಮಕ್ಕಳು ಸೇರಿದ್ರೆ ಲಕ್ಷ್ಮಿಯರು ಸೇರಿದ ಹಾಗೆ. ನನಗೆ ಡಾಕ್ಟರೇಟ್ ಬಂದಾಗ ಎಲ್ಲ ಹೆಣ್ಣು ಮಕ್ಕಳನ್ನು ನಮ್ಮ ಮನೆಯಲ್ಲಿ ಸೇರಿಸಿ ಕಾರ್ಯಕ್ರಮ ಮಾಡಿದ್ದೆ. ಅದು ಪೀಟರ್‌ಗೆ ಸ್ಫೂರ್ತಿ ಕೊಟ್ಟಿತ್ತು. ಆಗ ಹೆಣ್ಣು ಮಕ್ಕಳೆಲ್ಲರನ್ನೂ ಸೇರಿಸಿ ಏನಾದರೂ ಮಾಡೋಣಾ ಅಂತಿದ್ದರು. ಸಿನಿಮಾ ಮಾಡು ಬೆಸ್ಟ್ ಎಂದಿದ್ದೆ. ಅಷ್ಟು ಬಜೆಟ್ ಇಲ್ಲ ಎಂದಿದ್ದ. ಈ ರೀತಿ ಸೃಷ್ಟಿಯಾದ ಕಾರ್ಯಕ್ರಮ ಇದು. ಎಲ್ಲ ಹಿರಿಯ ಕಲಾವಿದರ ಹೆಸರಿನಲ್ಲಿ ಟೀಂ ಮಾಡಿದ್ದಾರೆ. ಜೂನ್‌ನಲ್ಲಿ ಈ ಕ್ರಿಕೆಟ್ ಪಂದ್ಯ ಶುರುವಾಗಲಿದೆʼʼ ಎಂದು ತಿಳಿಸಿದರು.
ಪೀಟರ್ ಮಾತನಾಡಿ, ʼʼನಾನು ಕನ್ನಡ ಸಿನಿಮಾಗಳನ್ನು ದುಬೈಯಲ್ಲಿ ರಿಲೀಸ್ ಮಾಡಬೇಕು ಎಂಬ ಪ್ರಯತ್ನ ನಡೆಸುತ್ತಿದ್ದೇನೆ. ಅದಕ್ಕೆ ಕಾರಣ ರಾಕ್‌ಲೈನ್ ವೆಂಕಟೇಶ್. ಅವರು ನಿಮ್ಮ ಜತೆ ಇದ್ದೇನೆ ಎಂದು ಸಪೋರ್ಟ್ ಮಾಡಿದರು. ʼಕಾಟೇರʼ ಚಿತ್ರವನ್ನು ಗಲ್ಫ್‌ನಲ್ಲಿ ರಿಲೀಸ್ ಮಾಡಲು ಅವಕಾಶ ಕೊಟ್ಟರು. ಅದು ದೊಡ್ಡ ಯಶಸ್ಸು ಆಯ್ತು. ಈಗ ಹಳೆ ದಿಗ್ಗಜ ಕಲಾವಿದರಿಗೆ ಹೆಸರಿನಲ್ಲಿ ಟೀಂ ಮಾಡಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದೇವೆ. ದುಬೈಯಲ್ಲಿ ಪಂದ್ಯಗಳು ನಡೆಯಲಿವೆ. ಇದು ಅಲ್ಲಿನ ಆಡಿಯನ್ಸ್‌ಗೆ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ತಿಳಿಸಿಕೊಟ್ಟಂತಾಗುತ್ತದೆ. ಈ ಮೂಲಕ ಅಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು ಎಂಬ ಯೋಚನೆ ಇದೆʼʼ ಎಂದರು.
ಪೀಟರ್ ಅವರ ಬ್ಯಾನರ್ ಓವರ್ ಸೀಸನ್ ಎಂಟರ್‌ಟೈನ್‌ಮೆಂಟ್ ಈ ಪಂದ್ಯವನ್ನು ಪ್ರೆಸೆಂಟ್ ಮಾಡಲಿದೆ. ದುಬೈಯಲ್ಲಿ ಟೂರ್ನಮೆಂಟ್ ಏರ್ಪಡಿಸಿರುವುದು ವಿಶೇಷ. SWCLನ ಟ್ರಾವೆಲ್ ಪಾರ್ಟನರ್ ಆಗಿ Easy2trip ಸಾಥ್ ಕೊಡಲಿದೆ.
ಇದನ್ನು ಓದಿ: Maayavi Movie: ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವುಳ್ಳ ʼಮಾಯಾವಿʼ ಚಿತ್ರದ ಟೀಸರ್, ಹಾಡು ಬಿಡುಗಡೆ
ಪಾರ್ವತಮ್ಮ ರಾಜ್‍ಕುಮಾರ್, ಲೀಲಾವತಿ, ಜಯಂತಿ, ಕಲ್ಪನಾ, ಮಂಜುಳಾ ಇತ್ಯಾದಿ ತಂಡಗಳು ಇದ್ದು, ತಾರಾ ಅನುರಾಧಾ, ಮಾಲಾಶ್ರೀ, ಶ್ರುತಿ, ಅನು ಪ್ರಭಾಕರ್ ಹಾಗೂ ಪ್ರಿಯಾಂಕಾ ಉಪೇಂದ್ರ ಬ್ರ್ಯಾಂಡ್ ಅಂಬಾಸಿಡರ್ ಆಗಿ ತಂಡಗಳನ್ನು ಮುನ್ನಡೆಸಲಿದ್ದಾರೆ. ಹೀಗೆ ಹಿರಿಯ ಕಲಾವಿದರ ಹೆಸರಿನಲ್ಲಿ ಟೀಂ ಮಾಡಲಾಗಿದೆ. ಒಟ್ಟು ಐದು ತಂಡಗಳಿದ್ದು, ಐದು ತಂಡಗಳ ಕ್ಯಾಪ್ಟನ್, ಬ್ರ್ಯಾಂಡ್ ಅಂಬಾಸಿಡರ್ ಯಾರು? ಸ್ಪಾನ್ಸರ್ ಯಾರು ಅನ್ನೋದನ್ನು ಮುಂದಿನ ದಿನಗಳಲ್ಲಿ ಮಾಹಿತಿ ತಿಳಿದು ಬರಲಿದೆ.