Star Cannes Fashion: ಕಾನ್ಸ್ನಲ್ಲಿ ರೇಷ್ಮೆ ಸೀರೆಯಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್
Star Cannes Fashion: ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಟಿ, ಕನ್ನಡತಿ ದಿಶಾ ಮದನ್, 70 ವರ್ಷದ ಹಳೆಯ ವಿಂಟೇಜ್ ಲುಕ್ ನೀಡುವ ರೇಷ್ಮೆ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಂದಲೇ ಕನ್ನಡಿಗರಿಗೆ ಮನಪೂರ್ವಕ ಧನ್ಯವಾದ ಹೇಳಿದ್ದಾರೆ. ಅವರ ಕಾನ್ಸ್ ಲುಕ್ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ದಿಶಾ ಮದನ್, ನಟಿ ಮತ್ತು ಮಾಡೆಲ್


ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಟಿ & ಫ್ಯಾಷನ್ ಇನ್ಫ್ಲೂಯೆನ್ಸರ್ ದಿಶಾ ಮದನ್ ವಿಂಟೇಜ್ ಸೀರೆಯಲ್ಲಿ ಮಿಂಚಿದ್ದಾರೆ. ದಿಶಾ ಈಗಾಗಲೇ ಮೂರ್ನಾಲ್ಕು ಬಗೆಯ ಸೀರೆಗಳಲ್ಲಿ ಕಾಣಿಸಿಕೊಂಡಿದ್ದು, ರೆಡ್ ಕಾರ್ಪೆಟ್ ಮೇಲೆ ಹಳೆಯ ವಿಂಟೇಜ್ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರೆಗೆ ಡಿಸೈನರ್ ಕಾರ್ಸೆಟ್ ಬ್ಲೌಸ್ ಮ್ಯಾಚ್ ಮಾಡಿ, ಹೆಜ್ಜೆ ಹಾಕಿದ್ದಾರೆ.

ಸೀರೆಗಳಲ್ಲಿ ದಿಶಾ ಮಿಂಚಿಂಗ್
ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳೆಲ್ಲರೂ ತಮ್ಮದೇ ಆದ ಹೊಸ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಇದಕ್ಕೆ ತದ್ವಿರುದ್ಧವೆಂಬಂತೆ ದಿಶಾ ಮಾತ್ರ, ಎಲ್ಲಾ ಸಮಯದಲ್ಲೂ ಸೀರೆ ಹಾಗೂ ಸೀರೆಯಿಂದ ಸಿದ್ಧಪಡಿಸಿದ ಔಟ್ಫಿಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರೆಡ್ ಕಾರ್ಪೆಟ್ಗೆ ವಿಂಟೇಜ್ ಸೀರೆ
ಕಾನ್ಸ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ, ದಿಶಾ ಮದನ್, ವಿಶೇಷವಾಗಿ ಕಾಣಿಸಿಕೊಂಡಿದ್ದು, ಸುಮಾರು 70 ವರ್ಷದ ಹಳೆಯ ವಿಂಟೇಜ್ ಲುಕ್ ನೀಡುವ, ರೇಷ್ಮೆ ಸೀರೆಯಲ್ಲಿ ಸಂಭ್ರಮಿಸಿದ್ದಾರೆ. ಈ ಸೀರೆಯೊಂದಿಗೆ ಅದೇ ಕಾಂಬಿನೇಷನ್ಗೆ ಮ್ಯಾಚ್ ಆಗುವಂತಹ ಡಿಸೈನರ್ ಕಾರ್ಸೆಟ್ ಧರಿಸಿದ್ದಾರೆ. ಸೀರೆಯನ್ನು ಇಂಡೋ-ವೆಸ್ಟರ್ನ್ ಲುಕ್ನಲ್ಲಿ ಪ್ರೆಸೆಂಟ್ ಮಾಡಿದ್ದಾರೆ. ಹಣೆಗೊಂದು ಚಿಕ್ಕ ಬಿಂದಿಯನ್ನು ಇಟ್ಟು ಹರ್ಷಿಸಿದ್ದಾರೆ. ಅಷ್ಟೇಕೆ? ಅಲ್ಲಿಂದಲೇ ಕನ್ನಡಿಗರಿಗೆ ಮನಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಕಾನ್ಸ್ನಲ್ಲಿ ಗೌನ್ಗಳನ್ನು ಧರಿಸುವವರು ಹೆಚ್ಚು, ಆದರೆ, ನಾನು ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಸೀರೆಯುಟ್ಟಿದ್ದೇನೆ. ಡಿಸೈನರ್ಗಳಾದ ಅನ್ಮೋಲ್ & ಬಿಂದು ಸಹಕಾರ ಇದಕ್ಕಿದೆ ಎಂದು ಮಾಧ್ಯಮದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ದಿಶಾ ರೇಷ್ಮೆ ಸೀರೆ ಪ್ರೇಮ
ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ನಟಿಸುತ್ತಿರುವ ದಿಶಾ ಫ್ಯಾಷನ್ ಇನ್ಫ್ಲೂಯೆನ್ಸರ್ ಕೂಡ. ಮೊದಲಿನಿಂದಲೂ ಅವರಿಗೆ ಸೀರೆಗಳೆಂದರೇ ಪ್ರೀತಿಯಂತೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಸೀರೆ ಮಾಹಿತಿ ಕುರಿತಂತೆ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ.

ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಟಿ, ಕನ್ನಡತಿ ದಿಶಾ ಮದನ್, 70 ವರ್ಷದ ಹಳೆಯ ವಿಂಟೇಜ್ ಲುಕ್ ನೀಡುವ ರೇಷ್ಮೆ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.