Asia Cup Participation: ಏಷ್ಯಾ ಕಪ್ ಟೂರ್ನಿಯಿಂದ ಭಾರತ ಹಿಂದೆ ಸರಿದಿಲ್ಲ; ದೇವಜಿತ್ ಸೈಕಿಯಾ ಸ್ಪಷ್ಟನೆ
Asia Cup 2025: ಪಾಕಿಸ್ಥಾನವು ಉಗ್ರಪೋಷಣೆ ಮಾಡುತ್ತಿರುವ ಕಾರಣ ಭಾರತ ತಂಡ ಬಿಸಿಸಿಐ ನಿರ್ದೇಶನದಂತೆ ಪುರುಷರ ಏಷ್ಯಾ ಕಪ್ ಮತ್ತು ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ವರದಿಯಾಗಿತ್ತು.


ಮುಂಬಯಿ: ಮುಂಬರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಮತ್ತು 2025ರ ಪುರುಷರ ಏಷ್ಯಾ ಕಪ್ ಟೂರ್ನಿಯಿಂದ ಭಾರತ ಹಿಂದೆ ಸರಿದಿದೆ(Asia Cup Participation) ಎಂಬ ವರದಿಗಳನ್ನು ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಕಾರ್ಯದರ್ಶಿ ದೇವಜಿತ್ ಸೈಕಿಯಾ(Devajit Saikia) ತಳ್ಳಿಹಾಕಿದ್ದಾರೆ. ಇಂತಹ ಯಾವುದೇ ವದಂತಿ ನಂಬಬೇಡಿ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತ ಏಷ್ಯಾ ಕಪ್‌ನಿಂದ ಹಿಂದೆ ಸರಿದಿದೆ ಎನ್ನುವ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಮುಂಬರುವ ಕಾರ್ಯಕ್ರಮಗಳ ಕುರಿತು ಬಿಸಿಸಿಐ(BCCI) ಇನ್ನೂ ಎಸಿಸಿ (ಏಷ್ಯನ್ ಕ್ರಿಕೆಟ್ ಕೌನ್ಸಿಲ್) ಜತೆ ಯಾವುದೇ ಚರ್ಚೆ ನಡೆಸಿಲ್ಲ" ಎಂದು ಹೇಳಿದ್ದಾರೆ.
"ಸೋಮವಾರ(ಮೇ 19) ಬೆಳಗ್ಗೆಯಿಂದ, ಏಷ್ಯಾ ಕಪ್ ಮತ್ತು ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಎರಡೂ ಎಸಿಸಿ ಟೂರ್ನಿಗಳಲ್ಲಿ ಭಾಗವಹಿಸದಿರಲು ಬಿಸಿಸಿಐ ನಿರ್ಧಾರ ತೆಗೆದುಕೊಂಡಿದೆ ಎಂಬ ಕೆಲವು ಸುದ್ದಿಗಳು ನಮ್ಮ ಗಮನಕ್ಕೆ ಬಂದಿವೆ. ಅಂತಹ ಸುದ್ದಿಗಳನ್ನು ನಂಬಬೇಡಿ. ಏಕೆಂದರೆ ಇಲ್ಲಿಯವರೆಗೆ, ಬಿಸಿಸಿಐ ಮುಂದಿನ ಎಸಿಸಿ ಈವೆಂಟ್‌ಗಳ ಬಗ್ಗೆ ಚರ್ಚಿಸಿಲ್ಲ ಅಥವಾ ಅಂತಹ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ" ಎಂದು ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಆರ್‌ಸಿಬಿ ಸೇರಿದ ಜಿಂಬಾಬ್ವೆಯ ಘಾತಕ ವೇಗಿ
ಪಾಕಿಸ್ಥಾನವು ಉಗ್ರಪೋಷಣೆ ಮಾಡುತ್ತಿರುವ ಕಾರಣ ಭಾರತ ತಂಡ ಬಿಸಿಸಿಐ ನಿರ್ದೇಶನದಂತೆ ಪುರುಷರ ಏಷ್ಯಾ ಕಪ್ ಮತ್ತು ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ವರದಿಯಾಗಿತ್ತು.