ಅಮೆರಿಕ ಇನ್ನು ದೊಡ್ಡಣ್ಣ ಅಲ್ಲ!
ಅಣ್ವಸ್ತ್ರ ಪ್ರಯೋಗವು ತನ್ನ ಸರ್ವನಾಶಕ್ಕೆ ಹೇತುವಾಗುತ್ತದೆ ಎಂಬುದು ಪಾಕಿಸ್ತಾನಕ್ಕೆ ಗೊತ್ತು ಮತ್ತು ಭಾರತಕ್ಕೆ ತನ್ನ ಜವಾಬ್ದಾರಿಯ ಸಂಪೂರ್ಣ ಅರಿವಿದೆ. ಹೀಗಿರುವಾಗ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಈ ‘ಅಣುಬಾಂಬ’ ಪ್ರಯೋಗವು ನಿರೀಕ್ಷೆಯಂತೆಯೇ ಟುಸ್ ಆಯಿತು. ಯಾವ ದೇಶವೂ ಅವರ ಈ ಮಾತನ್ನು ನಂಬಲಿಲ್ಲ


ಪ್ರತಿಸ್ಪಂದನ
ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು
ತನ್ನ ಮಧ್ಯಸ್ಥಿಕೆಯಿಂದಾಗಿಯೇ ಭಾರತ-ಪಾಕ್ ನಡುವೆ ಕದನವಿರಾಮ ಏರ್ಪಟ್ಟಿತೆಂದೂ, ಅಣ್ವಸ ಯುದ್ಧದಿಂದ ಲಕ್ಷಾಂತರ ಜೀವಹಾನಿಯಾಗುವುದು ತನ್ನ ಪ್ರಯತ್ನದಿಂದಲೇ ತಪ್ಪಿತೆಂದೂ ಅಪ್ಪಟ ಸುಳ್ಳುಗಳನ್ನು ಹೇಳುವ ಮೂಲಕ ಅಮೆರಿಕವು ಜಗತ್ತಿನೆದುರು ತನ್ನ ಘನತೆಯನ್ನು ತಾನೇ ಕುಗ್ಗಿಸಿ ಕೊಂಡಿದೆ. ಪಾಕ್ ಸೇನಾಧಿಕಾರಿಯು ಭಾರತದ ಸೇನಾಧಿಕಾರಿಯನ್ನು ಸಂಪರ್ಕಿಸಿ ಬೇಡಿಕೊಂಡಾಗ ಶಾಂತಿ ಪ್ರಿಯ ಭಾರತವು ಕದನ ವಿರಾಮಕ್ಕೆ ಸಮ್ಮತಿಸಿರುವುದು ಇಡೀ ಜಗತ್ತಿಗೆ ಗೊತ್ತಿದೆ. ಇನ್ನು, ಅಣ್ವಸ್ತ್ರ ಪ್ರಯೋಗದ ಬಗ್ಗೆ ಪಾಕಿಸ್ತಾನವು ಬರೀ ಪೊಳ್ಳು ಬೆದರಿಕೆಗಳನ್ನು ಒಡ್ದುತ್ತಿದ್ದರೆ, ಭಾರತವು ಅಂಥ ಒಂದು ಪೊಳ್ಳು ಮಾತನ್ನೂ ಆಡಲಿಲ್ಲ. ಹೀಗಿರುವಾಗ, ಅಣ್ವಸ ಯುದ್ಧ ಆಗುತ್ತಿತ್ತು ಎಂಬ ಹೇಳಿಕೆಯೇ ಹಾಸ್ಯಾಸ್ಪದ.
ಅಣ್ವಸ್ತ್ರ ಪ್ರಯೋಗವು ತನ್ನ ಸರ್ವನಾಶಕ್ಕೆ ಹೇತುವಾಗುತ್ತದೆ ಎಂಬುದು ಪಾಕಿಸ್ತಾನಕ್ಕೆ ಗೊತ್ತು ಮತ್ತು ಭಾರತಕ್ಕೆ ತನ್ನ ಜವಾಬ್ದಾರಿಯ ಸಂಪೂರ್ಣ ಅರಿವಿದೆ. ಹೀಗಿರುವಾಗ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಈ ‘ಅಣುಬಾಂಬ’ ಪ್ರಯೋಗವು ನಿರೀಕ್ಷೆಯಂತೆಯೇ ಟುಸ್ ಆಯಿತು. ಯಾವ ದೇಶವೂ ಅವರ ಈ ಮಾತನ್ನು ನಂಬಲಿಲ್ಲ.
ಇದನ್ನೂ ಓದಿ: R T VittalMurthy Column: ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ
ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗುವತ್ತ ಚೀನಾವು ದಾಪುಗಾಲಿಡುತ್ತಿರುವಾಗ ಮತ್ತು ಭಾರತವು ಈ ಪೈಪೋಟಿಯಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವಾಗ ಅಮೆರಿಕವು ಇನ್ನಾದರೂ ದೊಡ್ಡಣ್ಣನಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಡಾಲರಿನ ಬದಲಿಗೆ ಜಪಾನಿನ ಯೆನ್, ಭಾರತದ ರುಪಾಯಿ ಮೊದಲಾದ ಕರೆನ್ಸಿಗಳು ವಿವಿಧ ದೇಶಗಳಲ್ಲಿ ವಿನಿಮಯಕ್ಕಾಗಿ ಬಳಕೆಯಾಗುವ ಸಾಧ್ಯತೆ ಯನ್ನು ಭವಿಷ್ಯದಲ್ಲಿ ಅಲ್ಲಗಳೆಯಲಾಗದು.
ಈಗಾಗಲೇ ಟ್ರಂಪ್ ಅವರಿಗೆ ಈ ಕುರಿತು ಕಳವಳ ಉಂಟಾಗಿದ್ದು, ಜಗತ್ತಿಗೆ ’ತೆರಿಗೆ ಭೂತ’ವನ್ನು ಬಿಂಬಿಸುವ ಸಂದರ್ಭದಲ್ಲಿ ವಿದೇಶಿ ವಿನಿಮಯ ಕರೆನ್ಸಿಯ ಬಗ್ಗೆಯೂ ಬೆದರಿಕೆಯ ಹೇಳಿಕೆಗಳನ್ನು ಕೊಟ್ಟಿದ್ದಾರೆ. ವಿಶ್ವದಲ್ಲಿ ತೀವ್ರವಾಗಿ ಬದಲಾಗುತ್ತಿರುವ ಆರ್ಥಿಕ-ಸಾಮಾಜಿಕ-ರಾಜಕೀಯ ಸ್ಥಿತಿಗತಿ ಗಳನ್ನು ಗಮನಿಸಿ ಅಮೆರಿಕವು ಇನ್ನಾದರೂ, ತಾನು ದೊಡ್ಡಣ್ಣ ಎಂಬ ಭ್ರಮೆಯಿಂದ ವರ್ತಿಸುವು ದನ್ನು ಕೈಬಿಡಬೇಕು.
ಸ್ವವೈಭವೀಕರಣದ ಎರಡು ಸುಳ್ಳು ಹೇಳಿಕೆಗಳಿಂದ ಜಾಗತಿಕ ಮಟ್ಟದಲ್ಲಿ ತನ್ನ ಘನತೆ ಕುಗ್ಗಿರುವು ದನ್ನು ಟ್ರಂಪ್ ಅವರು ಒಂದು ಪಾಠವಾಗಿ ಸ್ವೀಕರಿಸಬೇಕು. ಭಾರತ-ಪಾಕ್ ಸಂಘರ್ಷದುದ್ದಕ್ಕೂ ಭಾರತವು ಕಾಯ್ದುಕೊಂಡಿರುವ ಸ್ಥಿರತೆಯನ್ನು, ಪ್ರದರ್ಶಿಸಿರುವ ಪರಾಕ್ರಮವನ್ನು, ನಿರ್ವಹಿಸಿರುವ ಜಾಗತಿಕ ಹೊಣೆಗಾರಿಕೆಯನ್ನು ಮತ್ತು ತೋರಿರುವ ಸಂಯಮವನ್ನು ಅಮೆರಿಕವು ಅರಿಯಬೇಕು ಮತ್ತು ಒಪ್ಪಿಕೊಳ್ಳಬೇಕು. ಮುಖ್ಯವಾಗಿ, ಭಾರತ-ಪಾಕ್ ವಿಷಯದಲ್ಲಿ ತಾನು ಹಸ್ತ ಕ್ಷೇಪ ಮಾಡುವ ದುಸ್ಸಾಹಸವನ್ನು ನಿಲ್ಲಿಸಬೇಕು.
(ಲೇಖಕರು ಸಾಹಿತಿ)