Chaitra Vasudevan: 2 ಲಕ್ಷದ ಸೀರೆಯುಟ್ಟು ಎರಡನೇ ಮದುವೆಯಾದ ಚೈತ್ರಾ ವಾಸುದೇವನ್
ಉದ್ಯಮಿ ಜಗದೀಪ್ ಜೊತೆ ನಿರೂಪಕಿ ಚೈತ್ರಾ ವಾಸುದೇವನ್ ಹಸೆಮಣೆ ಏರಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ಅವರು, ಜಗದೀಪ್ ಎಲ್. ಅವರ ಜೊತೆ ವಿವಾಹವಾದರು. ಎರಡು ಕಡೆಯ ಕುಟುಂಬಸ್ಥರು ಸೇರಿದಂತೆ, ಆಪ್ತರು, ಸ್ನೇಹಿತರು ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿದೆ.

chaitra vasudevan marriage

ಚಂದನವನದ ಸ್ಟಾರ್ ನಿರೂಪಕಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಅದ್ಧೂರಿಯಾಗಿ ಎರಡನೇ ಮದುವೆಯಾಗಿದ್ದಾರೆ. ಉದ್ಯಮಿ ಜಗದೀಪ್ ಜೊತೆ ನಿರೂಪಕಿ ಹಸೆಮಣೆ ಏರಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ಅವರು, ಜಗದೀಪ್ ಎಲ್. ಅವರ ಜೊತೆ ವಿವಾಹವಾದರು. ಎರಡು ಕಡೆಯ ಕುಟುಂಬಸ್ಥರು ಸೇರಿದಂತೆ, ಆಪ್ತರು, ಸ್ನೇಹಿತರು ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಪ್ಯಾರಿಸ್‌ಗೆ ಹೋಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿದ್ದರು.
ಆ್ಯಂಕರ್ ಚೈತ್ರಾ ವಾಸುದೇವನ್ ಅವರಿಗೆ ಇದು 2ನೇ ಮದುಗೆ ಆಗಿದೆ. ನಿರೂಪಕಿ ಮತ್ತು ಈವೆಂಟ್ ಆರ್ಗನೈಸರ್ ಆಗಿರುವ ಚೈತ್ರಾ ವಾಸುದೇವನ್, ಹಲವು ಸೆಲೆಬ್ರಿಟಿಗಳ ಮದುವೆ ಹಾಗೂ ಇತರ ಕಾರ್ಯಕ್ರಮಗಳನ್ನು ಕೂಡ ಅದ್ಧೂರಿಯಾಗಿ ಆಯೋಜಿಸಿದ್ದರು. ಹೀಗಾಗಿ ಈ ಜೋಡಿಯ ಮದುವೆಗೂ ಅನೇಕ ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ. ಅದರಲ್ಲಿ ಧ್ರುವ ಸರ್ಜಾ ಕೂಡ ಮದುವೆಗೆ ಆಗಮಿಸಿ, ವಧು ವರರಿಗೆ ಶುಭಕೋರಿದ್ದಾರೆ. ಹಾಗೇ ಅನುಪ್ರಭಾಕರ್ ಕೂಡ ಮದುವೆಗೆ ಆಗಮಿಸಿ, ನವದಂಪತಿಗೆ ಶುಭಾಶಯ ತಿಳಿಸಿದ್ದಾರೆ.
ಸೀರೆಯಲ್ಲಿ ಹರಳಿನ ಆಭರಣಗಳನ್ನು ತೊಟ್ಟು ತುಂಬಾ ಸುಂದರವಾಗಿ ಮದುಮಗಳು ಚೈತ್ರಾ ವಾಸುದೇವನ್ ಮಿಂಚಿದ್ದಾರೆ. ಮದುವೆ ಬಳಿಕ ಮಾತಾಡಿದ ನಟಿ ಚೈತ್ರಾ ವಾಸುದೇವನ್ ಅವರು ನಮಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದೇವೇಳೆ ಸೀರೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇವರು, ಮದುವೆಯಲ್ಲಿ ನಾನು ಧರಿಸಿದ ಸೀರೆಯ ಬೆಲೆ 2 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ. ನಿರೂಪಕಿ ಆಗಿ ವೇದಿಕೆ ಮೇಲೆ ಬರುವಾಗಲೂ ನಾನು ಭಿನ್ನವಾದ ಕಾಸ್ಟ್ಯೂಮ್ ಹಾಕುತ್ತೇನೆ. ಅದನ್ನು ಜನರು ಇಷ್ಟಪಟ್ಟು ಗುರುತಿಸುತ್ತಾರೆ. ಇದು ನನಗೆ ಸ್ಪೆಷಲ್ ದಿನ. ಹಾಗಾಗಿ ಸ್ಪೆಷಲ್ ಆಗಿ ರೆಡಿ ಆಗಿದ್ದೇನೆ ಎಂದರು.
ಪ್ಯಾರೀಸ್ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ನಲ್ಲಿ ಮಾಡಿರುವ ಕುರಿತು ಮಾತನಾಡಿದ ಅವರು, ಪ್ಯಾರೀಸ್ ಮತ್ತು ಫ್ರಾನ್ಸ್ಗೆ ಹೋಗುವ ಪ್ಲ್ಯಾನ್ ಮೊದಲೇ ಇತ್ತು. ಆ ಬಳಿಕ ಮದುವೆ ಫಿಕ್ಸ್ ಆಯಿತು. ಆದ್ದರಿಂದ ಜಗದೀಪ್ ಅವರನ್ನೂ ಕರೆದುಕೊಂಡು ಹೋಗುವ ಪ್ಲ್ಯಾನ್ ಮಾಡಿರುವುದಾಗಿ ತಿಳಿಸಿದರು. ಇದು ಆಗಿದ್ದು ಅಚಾನಕ್ ಅಷ್ಟೇ ಎಂದಿದ್ದರು.
ಈ ಹಿಂದೆ ಚೈತ್ರಾ ಅವರು 2017 ರಲ್ಲಿಯೇ ಸತ್ಯ ನಾಯ್ಡು ಅವರನ್ನ ಮದುವೆ ಆಗಿದ್ದರು. ಅಪ್ಪ ಅಮ್ಮನ ಆಸೆಯಂತೆ ಮದುವೆ ಆಗಿದ್ದ ಚೈತ್ರಾ ವಾಸುದೇವನ್, ಬಳಿಕ ವಿಚ್ಛೇದನ ಪಡೆದುಕೊಂಡರು. ಇದೀಗ ಚೈತ್ರಾ ವಾಸುದೇವನ್ ಅವರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಜಗದೀಪ್ ಅವರನ್ನು ಮದುವೆ ಆಗಿದ್ದಾರೆ.
Chaithra Kundapura: ಕೂಲಿಂಗ್ ಗ್ಲಾಸ್ ಹಾಕಿ ಸಖತ್ ಸೈಲಿಶ್ ಲುಕ್ನಲ್ಲಿ ಮಿಂಚಿದ ಚೈತ್ರಾ ಕುಂದಾಪುರ