ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Eshani: ಉರಿಬಿಸಿಲಿನಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿದ ಬಿಗ್ ಬಾಸ್ ಖ್ಯಾತಿಯ ಇಶಾನಿ

ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಇಶಾನಿ ಇದೀಗ ತಮ್ಮ ಸಮ್ಮರ್ ಟ್ರಿಪ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಕಲರ್ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋವನ್ನು ಇಶಾನಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉರಿಬಿಸಿಲಿನಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿದ ಇಶಾನಿ

Eshani

Profile Vinay Bhat Mar 20, 2025 4:26 PM

ಕನ್ನಡದಲ್ಲಿ ಮಹಿಳೆಯರ ಹಿಪಾಪ್ ಸಾಂಗ್ ಅಂದಾಗ ತಕ್ಷಣ ನೆನಪಿಗೆ ಬರುವುದು ಇಶಾನಿ. ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada 10) ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಇವರು ಈವರೆಗೂ 17 ಇಂಗ್ಲಿಷ್ ಆಲ್ಬಂ, 3 ಕನ್ನಡ ಆಲ್ಬಂ ಮಾಡಿದ್ದಾರೆ. ಇಶಾನಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹೆಚ್ಚಾಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಇದೀಗ ಇವರು ಮತ್ತೊಂದು ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇಶಾನಿ ತಮ್ಮ ಸಮ್ಮರ್ ಟ್ರಿಪ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಿಂದೆಂದಿಗಿಂತಲೂ ಈ ಬಾರಿ ಇನ್ನಷ್ಟು ಬೋಲ್ಡ್‌ ಆಗಿ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸಮುದ್ರ, ಬಿಸಿಲಿನ ಝಳ ಹಾಗೂ ಸುಂದರ ವಾತಾವರಣ ಇರುವ ಜಾಗದಲ್ಲಿ ಫೋಟೋಸ್‌ ತೆಗೆಸಿಕೊಂಡು ಹಾಟ್ ಅವತಾರದಲ್ಲಿ ಮಿಂಚಿದ್ದಾರೆ. ಬಿಕಿನಿ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.

ಪಿಂಕ್ ಕಲರ್ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋವನ್ನು ಇಶಾನಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಕ್ಕೆ ‘ನನಗೆ ನಿಮ್ಮ ಅನುಮತಿ ಬೇಡ’ ಎಂದು ನೆಗೆಟಿವ್ ಕಾಮೆಂಟ್ ಮಾಡೋರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದೀಗ ನಟಿಯ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಇಶಾನಿ ಹುಟ್ಟಿದ್ದು ಮೈಸೂರಿನಲ್ಲಿ. ಆದರೆ, ಬೆಳೆದಿದ್ದು ಬೆಂಗಳೂರು, ದುಬೈ ಹಾಗೂ ಲಾಸ್ ಏಂಜಲೀಸ್‌ನಲ್ಲಿ. ಚಿಕ್ಕವಯಸ್ಸಿನಿಂದಲೂ ಇಶಾನಿಗೆ ಮ್ಯೂಸಿಕ್ ಅಂದ್ರೆ ಇಷ್ಟ. ಇವರು ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚು ದಿನ ಉಳಿಯದಿದ್ದರೂ ತಮ್ಮ ಮಾತು ಹಾಗೂ ಕೃತಿಯಿಂದ ಜನಪ್ರಿಯರಾದರು. ಜೊತೆಗೆ ವಿವಾದ ಕೂಡ ಮಾಡಿಕೊಂಡರು. ಡ್ರೋನ್‌ ಪ್ರತಾಪ್‌ ವಿಚಾರದಲ್ಲಿ ಸಖತ್‌ ಟ್ರೋಲ್‌ ಆಗಿದ್ದರು. ವಿನಯ್ ಹಾಗೂ ನಮ್ರತಾ ಜೊತೆಗೆ ಜ್ಯೂಸ್ ಕುಡಿಯುತ್ತಾ ಕುಳಿತಿದ್ದ ಇಶಾನಿ, ನೇರವಾಗಿಯೇ ಪ್ರತಾಪ್ ಮೇಲೆ ವಾಗ್ದಾಳಿ ನಡೆಸಿದ್ದರು. "ಕಾಗೆ ಗೊತ್ತಿಲ್ವಾ..? ಕಾಗೆ ಕಕ್ಕ ಮಾಡ್ಬಿಟ್ಟು ಎಲ್ಲಾ ಕಡೆ ಹೋಗ್ತಾನೆ ಇರುತ್ತೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ ಉಳ್ಕೊಂಡಿದ್ದಾರೆ ಅಲ್ವಾ" ಎಂದು ಹೇಳಿದ್ದರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

Bhagya Lakshmi Serial: ನನ್ನ ಮುಂದೆ ತಪ್ಪಾಯಿತು ಅಂತ ಕೇಳ್ಕೊ ಎಂದ ತಾಂಡವ್​ಗೆ ಭಾಗ್ಯ ಹೇಳಿದ್ದೇನು ಗೊತ್ತೇ?