Supreme Court: ಭಾಷೆ ಧರ್ಮವಲ್ಲ; ಉರ್ದು ನಾಮಫಲಕ ಬಳಕೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮಹಾರಾಷ್ಟ್ರದ ಮುನ್ಸಿಪಲ್ ಕೌನ್ಸಿಲ್ ಕಟ್ಟಡದ ನಾಮಫಲಕದಲ್ಲಿ ಉರ್ದು ಬಳಕೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಮಂಗಳವಾರ ಭಾಷೆ ಸಂಸ್ಕೃತಿ ಮತ್ತು ಜನರನ್ನು ವಿಭಜಿಸಲು ಕಾರಣವಾಗಬಾರದು ಮತ್ತು ಉರ್ದು “ಗಂಗಾ-ಜಮುನಿ ತೆಹ್ಜೀಬ್ ಅಥವಾ ಹಿಂದೂಸ್ತಾನಿ ತೆಹ್ಜೀಬ್ನ ಅತ್ಯುತ್ತಮ ಮಾದರಿಯಾಗಿದೆ” ಎಂದು ಕೋರ್ಟ್ ಹೇಳಿದೆ.


ಮುಂಬೈ: ಮಹಾರಾಷ್ಟ್ರದ ಮುನ್ಸಿಪಲ್ ಕೌನ್ಸಿಲ್ ಕಟ್ಟಡದ ನಾಮಫಲಕದಲ್ಲಿ ಉರ್ದು ಬಳಕೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಭಾಷೆ ಸಂಸ್ಕೃತಿ ಮತ್ತು ಜನರನ್ನು ವಿಭಜಿಸಲು ಕಾರಣವಾಗಬಾರದು ಮತ್ತು ಉರ್ದು “ಗಂಗಾ-ಜಮುನಿ ತೆಹ್ಜೀಬ್ ಅಥವಾ ಹಿಂದೂಸ್ತಾನಿ ತೆಹ್ಜೀಬ್ನ ಅತ್ಯುತ್ತಮ ಮಾದರಿಯಾಗಿದೆ” ಎಂದು ಕೋರ್ಟ್ ಹೇಳಿದೆ. ಮಹಾರಾಷ್ಟ್ರ ಸ್ಥಳೀಯ ಪ್ರಾಧಿಕಾರಗಳ (ಅಧಿಕೃತ ಭಾಷೆಗಳು) ಕಾಯ್ದೆ, 2022 ರ ಅಡಿಯಲ್ಲಿ ಉರ್ದು ಬಳಕೆಯನ್ನು ವಿರೋಧಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಲು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ನಿರಾಕರಿಸಿದೆ.
ಅಕೋಲಾ ಜಿಲ್ಲೆಯ ಪಾತೂರ್ ಮುನ್ಸಿಪಲ್ ಕೌನ್ಸಿಲ್ ಕಚೇರಿಯ ಸೈನ್ ಬೋರ್ಡ್‌ನಲ್ಲಿ ಉರ್ದು ಇರುವುದನ್ನು ವಿರೋಧಿಸಿದ ಮಾಜಿ ಕೌನ್ಸಿಲರ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ನಮ್ಮ ಪರಿಕಲ್ಪನೆಗಳು ಸ್ಪಷ್ಟವಾಗಿರಲಿ. ಭಾಷೆ ಧರ್ಮವಲ್ಲ. ಭಾಷೆ ಧರ್ಮವನ್ನು ಪ್ರತಿನಿಧಿಸುವುದಿಲ್ಲ. ಭಾಷೆ ಒಂದು ಸಮುದಾಯಕ್ಕೆ, ಒಂದು ಪ್ರದೇಶಕ್ಕೆ, ಜನರಿಗೆ ಸೇರಿದೆ, ಧರ್ಮಕ್ಕೆ ಅಲ್ಲ ಎಂದು ಹೇಳಿದೆ. ಭಾಷೆಯು ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ನಂಬಿಕೆಗಳನ್ನು ಹೊಂದಿರುವ ಜನರನ್ನು ಹತ್ತಿರಕ್ಕೆ ತರುವ ವಿಚಾರಗಳ ವಿನಿಮಯಕ್ಕೆ ಒಂದು ಮಾಧ್ಯಮವಾಗಿದೆ ಮತ್ತು ಅದು ಅವರ ವಿಭಜನೆಗೆ ಕಾರಣವಾಗಬಾರದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾಷೆಯು ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ನಂಬಿಕೆಗಳನ್ನು ಹೊಂದಿರುವ ಜನರನ್ನು ಹತ್ತಿರಕ್ಕೆ ತರುವ ವಿಚಾರಗಳ ವಿನಿಮಯಕ್ಕೆ ಒಂದು ಮಾಧ್ಯಮವಾಗಿದೆ ಮತ್ತು ಅದು ಅವರ ವಿಭಜನೆಗೆ ಕಾರಣವಾಗಬಾರದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉರ್ದು ಭಾಷೆಯೂ ಹಾಗೆಯೇ, ಗಂಗಾ-ಜಮುನಿ ತಹಜೀಬ್ ಅಥವಾ ಹಿಂದೂಸ್ತಾನಿ ತಹಜೀಬ್‌ನ ಅತ್ಯುತ್ತಮ ಮಾದರಿಯಾಗಿದೆ , ಇದು ಉತ್ತರ ಮತ್ತು ಮಧ್ಯ ಭಾರತದ ಬಯಲು ಪ್ರದೇಶದ ಸಂಯೋಜಿತ ಸಾಂಸ್ಕೃತಿಕ ನೀತಿಯಾಗಿದೆ. ಆದರೆ ಭಾಷೆ ಕಲಿಕೆಗೆ ಸಾಧನವಾಗುವ ಮೊದಲು, ಅದರ ಆರಂಭಿಕ ಮತ್ತು ಪ್ರಾಥಮಿಕ ಉದ್ದೇಶ ಯಾವಾಗಲೂ ಸಂವಹನವಾಗಿ ಉಳಿಯುತ್ತದೆ ಎಂದು ಕೋರ್ಟ್ ಹೇಳಿದೆ. ಮ್ಮ ತಪ್ಪು ಕಲ್ಪನೆಗಳು, ಬಹುಶಃ ಒಂದು ಭಾಷೆಯ ವಿರುದ್ಧ ನಮ್ಮ ಪೂರ್ವಾಗ್ರಹಗಳನ್ನು, ನಮ್ಮ ರಾಷ್ಟ್ರದ ಈ ಮಹಾನ್ ವೈವಿಧ್ಯತೆಯಾಗಿರುವ ವಾಸ್ತವದ ವಿರುದ್ಧ ಧೈರ್ಯದಿಂದ ಮತ್ತು ಸತ್ಯವಾಗಿ ಪರೀಕ್ಷಿಸಬೇಕಾಗಿದೆ. ನಮ್ಮ ಶಕ್ತಿ ಎಂದಿಗೂ ನಮ್ಮ ದೌರ್ಬಲ್ಯವಾಗಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಪ್ರದೇಶದ ನಿವಾಸಿಗಳು ಉರ್ದು ಭಾಷೆಯನ್ನು ಚೆನ್ನಾಗಿ ತಿಳಿದಿದ್ದರೆ, ಅಧಿಕೃತ ಮಂಡಳಿಗಳಲ್ಲಿ ಅದರ ಉಪಸ್ಥಿತಿಯನ್ನು ಆಕ್ಷೇಪಿಸಲು ಯಾವುದೇ ಸರಿಯಾದ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸುದ್ದಿಯನ್ನೂ ಓದಿ: Supreme Court: ವಕ್ಫ್ ತಿದ್ದುಪಡಿ ಕಾಯ್ದೆ; ಸುಪ್ರೀಂ ಕೋರ್ಟ್ ನಲ್ಲಿ ಇಂದು ಅರ್ಜಿಗಳ ವಿಚಾರಣೆ
ಪುರಸಭೆಯ ವ್ಯಾಪ್ತಿಯಲ್ಲಿ ವಾಸಿಸುವ ಜನರು ಅಥವಾ ಜನರ ಗುಂಪೊಂದು ಉರ್ದು ಭಾಷೆಯನ್ನು ತಿಳಿದಿದ್ದರೆ, ಅಧಿಕೃತ ಭಾಷೆಯ ಜೊತೆಗೆ ಅಂದರೆ ಮರಾಠಿಯ ಜೊತೆಗೆ ಉರ್ದುವನ್ನು ಬಳಸಿದರೆ, ಕನಿಷ್ಠ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಯಾವುದೇ ಆಕ್ಷೇಪಣೆ ಇರಬಾರದು" ಎಂದು ನ್ಯಾಯಾಲಯ ಹೇಳಿದೆ.