ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಜೆಡಿ ವ್ಯಾನ್ಸ್ ಮಕ್ಕಳಿಗೆ ಪ್ರಧಾನಿ ಮೋದಿ ಸ್ಪೆಶಲ್‌ ಗಿಫ್ಟ್‌- ಅಬ್ಬಾ... ಎಷ್ಟು ಕ್ಯೂಟ್‌ ಆಗಿದೆ ಈ ಉಡುಗೊರೆ!

ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಲೋಕ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಸೋಮವಾರ ಆಗಮಿಸಿದ ಜೆ.ಡಿ. ವ್ಯಾನ್ಸ್ (JD Vance), ಮತ್ತು ಅವರ ಪತ್ನಿ ಉಷಾ (Usha vance) ಹಾಗೂ ಅವರ ಮೂವರು ಮಕ್ಕಳಾದ ಮಿರಾಬೆಲ್, ಇವಾನ್ ಮತ್ತು ವಿವೇಕ್ ಅವರನ್ನು ಸ್ವತಃ ತಾವೇ ಮುಂದೆ ನಿಂತು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ಬಳಿಕ ಅವರೊಂದಿಗೆ ಕೊಂಚ ಸಮಯ ಕಳೆದರು. ಈ ವೇಳೆ ಮಕ್ಕಳಿಗೆ ಪ್ರಧಾನಿ ಮೋದಿ ನವಿಲುಗರಿಯನ್ನು ಉಡುಗೊರೆಯಾಗಿ ನೀಡಿದರು.

ಜೆಡಿ ವ್ಯಾನ್ಸ್ ಮಕ್ಕಳಿಗೆ ನವಿಲುಗರಿ ಉಡುಗೊರೆ ನೀಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Moid) ಅವರು ಸೋಮವಾರ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance) ಕುಟುಂಬದೊಂದಿಗೆ ಸಮಯ ಕಳೆದರು. ಈ ಸಂದರ್ಭದಲ್ಲಿ ವ್ಯಾನ್ಸ್ ಅವರ ಮಕ್ಕಳಾದ ಮಿರಾಬೆಲ್ ( Mirabel ), ಇವಾನ್ (Ewan) ಮತ್ತು ವಿವೇಕ್ (Vivek) ಅವರಿಗೆ ನವಿಲು ಗರಿಗಳನ್ನು (peacock feather) ಮೋದಿ ಉಡುಗೊರೆಯಾಗಿ ನೀಡಿದರು. ತಮ್ಮ ನಿವಾಸಕ್ಕೆ ಆಗಮಿಸಿದ ಜೆಡಿ ವ್ಯಾನ್ಸ್ ಅವರ ಕುಟುಂಬವನ್ನು ಆತ್ಮೀಯವಾಗಿ ಸ್ವಾಗತಿಸಿ ಪ್ರಧಾನಿ ಮೋದಿ ಅವರು ವ್ಯಾನ್ಸ್ ಅವರ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಾನ್ಸ್ ಮಕ್ಕಳನ್ನು ತಮ್ಮ ಮಡಿಲಿನಲ್ಲಿ ಕೂರಿಸಿ ಪ್ರಧಾನಿಯವರು ಅವರೊಂದಿಗೆ ತಮಾಷೆಯಾಗಿ ಮಾತನಾಡುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪತ್ನಿ ಉಷಾ ಮತ್ತು ಮೂವರು ಮಕ್ಕಳೊಂದಿಗೆ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಅವರು ಜೈಪುರಕ್ಕೆ ಭೇಟಿ ನೀಡಲಿದ್ದು, ಬುಧವಾರ ಐತಿಹಾಸಿಕ ತಾಜ್ ಮಹಲ್ ಅನ್ನು ವೀಕ್ಷಿಸಲಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ 7, ಲೋಕ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಆಗಮಿಸಿದ ಜೆ.ಡಿ. ವ್ಯಾನ್ಸ್, ಮತ್ತು ಅವರ ಪತ್ನಿ ಉಷಾ ಹಾಗೂ ಅವರ ಮೂವರು ಮಕ್ಕಳಾದ ಮಿರಾಬೆಲ್, ಇವಾನ್ ಮತ್ತು ವಿವೇಕ್ ಅವರನ್ನು ಸ್ವತಃ ತಾವೇ ಮುಂದೆ ನಿಂತು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ಬಳಿಕ ಅವರೊಂದಿಗೆ ಕೊಂಚ ಸಮಯ ಕಳೆದರು.

ಪ್ರಧಾನಿ ಮೋದಿ ಅವರು ವ್ಯಾನ್ಸ್ ಕುಟುಂಬ ಆಗಮಿಸಿದ ತಕ್ಷಣ ವ್ಯಾನ್ಸ್ ಅವರನ್ನು ತಬ್ಬಿ ಸ್ವಾಗತಿಸಿದರು. ಬಳಿಕ ಉಷಾ ವ್ಯಾನ್ಸ್ ಅವರ ಕ್ಷೇಮ ಸಮಾಚಾರವನ್ನು ಕೇಳಿದರು. ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಧಾನಿಯವರು ಜೆ.ಡಿ. ವ್ಯಾನ್ಸ್ ಮತ್ತು ಅವರ ಪುತ್ರರೊಂದಿಗೆ ತಮಾಷೆಯಾಗಿ ಸಂವಹನ ನಡೆಸುವುದನ್ನು ಕೂಡ ಕಾಣಬಹುದು. ಪ್ರಧಾನಿ ಮೋದಿ ಅವರ ಮಡಿಲಲ್ಲಿ ಇವಾನ್ ಮತ್ತು ವಿವೇಕ್ ಕುಳಿತು ಅವರೊಂದಿಗೆ ಮಾತನಾಡಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಬಳಿಕ ಪ್ರಧಾನಿ ಮೋದಿ ಅವರು ಇವಾನ್, ವಿವೇಕ್ ಮತ್ತು ಮಿರಾಬೆಲ್ ಅವರಿಗೆ ತಲಾ ಒಂದೊಂದು ನವಿಲು ಗರಿಯನ್ನು ಉಡುಗೊರೆಯಾಗಿ ನೀಡಿದರು. ಅನಂತರ ವ್ಯಾನ್ಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಸ್ಪೆಶಲ್‌ ವಿಡಿಯೊ ಇಲ್ಲಿದೆ



ಭಾನುವಾರ ಭಾರತಕ್ಕೆ ಆಗಮಿಸಿರುವ ವ್ಯಾನ್ಸ್ ಕುಟುಂಬವು ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ದಂಪತಿ ಮತ್ತು ಮೂವರು ಮಕ್ಕಳು ಸಾಂಪ್ರದಾಯಿಕ ಭಾರತೀಯ ಶೈಲಿಯ ಉಡುಪುಗಳನ್ನು ಧರಿಸಿದ್ದರು. ಇವಾನ್ ಮತ್ತು ವಿವೇಕ್ ಕುರ್ತಾ- ಪೈಜಾಮಾ ಧರಿಸಿದ್ದರೆ ಮಿರಾಬೆಲ್ ಅನಾರ್ಕಲಿ ಶೈಲಿಯ ಉಡುಪನ್ನು ಕಸೂತಿ ಮಾಡಿದ ಜಾಕೆಟ್‌ನೊಂದಿಗೆ ಧರಿಸಿದ್ದರು.



ದೇವಾಲಯದ ಭೇಟಿಯ ಅನಂತರ ಅವರು ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಭಾರತದಲ್ಲಿ ಆತ್ಮೀಯ ಆತಿಥ್ಯವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Road Rage: ಬೆಂಗಳೂರಿನಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ ವಿಂಗ್‌ ಕಮಾಂಡರ್‌ ಕೋಲ್ಕತ್ತಾಗೆ ‌ಪರಾರಿ

ನನ್ನನ್ನು ಮತ್ತು ನನ್ನ ಕುಟುಂಬವನ್ನು ಈ ಸುಂದರ ಸ್ಥಳಕ್ಕೆ ಸ್ವಾಗತಿಸಿರುವುದಕ್ಕೆ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ಹೆಚ್ಚಿನ ನಿಖರತೆ ಮತ್ತು ಕಾಳಜಿಯಿಂದ ಈ ಸುಂದರವಾದ ದೇವಾಲಯವನ್ನು ನಿರ್ಮಿಸಿದ್ದೀರಿ ಎಂಬುದು ಭಾರತಕ್ಕೆ ದೊಡ್ಡ ಗೌರವ. ವಿಶೇಷವಾಗಿ ನಮ್ಮ ಮಕ್ಕಳು ಅದನ್ನು ಇಷ್ಟಪಟ್ಟರು. ದೇವರು ಆಶೀರ್ವದಿಸಲಿ ಎಂದು ವ್ಯಾನ್ಸ್ ಹೇಳಿಕೊಡಿದ್ದಾರೆ. ಅನಂತರ ವ್ಯಾನ್ಸ್ ಮತ್ತು ಅವರ ಕುಟುಂಬವು ಜನಪಥ್‌ನಲ್ಲಿರುವ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂಗೆ ಭೇಟಿ ನೀಡಿತು. ಸೋಮವಾರ ಪ್ರಧಾನಿ ಮೋದಿಯವರೊಂದಿಗೆ ಮಾತುಕತೆಯ ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಭೋಜನವನ್ನು ಸವಿದರು.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಈ ಭೇಟಿಯು ಭಾರತ-ಯುಎಸ್ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್, ಇದು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.