Chikkaballapur News: 14ನೇ ಸಚಿವ ಸಂಪುಟದ ತೀರ್ಮಾನಗಳಿಗೆ ಅಂತಿಮ ಗಡುವು ನೀಡಿ : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ
ಶಾಶ್ವತ ನೀರಾವರಿಗೆ ಸಂಬಂಧಪಟ್ಟಂತೆ ನಂದಿಬೆಟ್ಟದ ಸಚಿವ ಸಂಪುಟದ ಸಭೆಯ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಆದರೆ ಆನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. 2025ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಆಗಿರುವ ವಿಚಾರಗಳಿಗೆ ಮಾತ್ರ ಆಡಳಿತಾತ್ಮಕ ಅನುಮೋದನೆಯನ್ನು ಈ ಸಭೆಯಲ್ಲಿ ಪಡೆಯಲಾಗಿದೆ.ಇದು ಜಿಲ್ಲೆಗೆ ಮಾಡಿರುವ ದ್ರೋಹ ಎಂದು ಬೇಸರಿಸಿದರು.

೧೪ನೇ ಸಚಿವ ಸಂಪುಟದ ತೀರ್ಮಾನಗಳಿಗೆ ಅಂತಿಮ ಗಡುವು ನೀಡಿ ಅಷ್ಟರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇಲ್ಲವಾದಲ್ಲಿ ಹೋರಾಟ ಎದುರಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದರು.

ಚಿಕ್ಕಬಳ್ಳಾಪುರ : ನಂದಿಬೆಟ್ಟದಲ್ಲಿ ಜು.೨ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ಘೋಷಣೆ ಆಗಿರುವ ಯೋಜನೆಗಳನ್ನು ಕೈಗೆತ್ತಿಕೊಂಡು ಮುಗಿಸುವ ಬಗ್ಗೆ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅಂತಿಮ ಗಡುವು ನೀಡಬೇಕು.ನಿಗಧಿತ ಗಡುವಿನೊಳಗೆ ಕಾಮಗಾರಿ ಮುಗಿಸ ಬೇಕು.ಇಲ್ಲದಿದ್ದಲ್ಲಿ ಬಿಜೆಪಿ ಜಿಲ್ಲಾ ಘಟಕ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಒತ್ತಾಯಿಸಿದರು.
ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಶಾಶ್ವತ ನೀರಾವರಿಗೆ ಸಂಬಂಧಪಟ್ಟಂತೆ ನಂದಿಬೆಟ್ಟದ ಸಚಿವ ಸಂಪುಟದ ಸಭೆಯ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಆದರೆ ಆನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. 2025ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಆಗಿರುವ ವಿಚಾರಗಳಿಗೆ ಮಾತ್ರ ಆಡಳಿತಾತ್ಮಕ ಅನುಮೋದನೆಯನ್ನು ಈ ಸಭೆಯಲ್ಲಿ ಪಡೆಯಲಾಗಿದೆ.ಇದು ಜಿಲ್ಲೆಗೆ ಮಾಡಿರುವ ದ್ರೋಹ ಎಂದು ಬೇಸರಿಸಿದರು.
ಮಾವು ಬೆಳೆಗಾರರಿಗೆ ನೆರವು ನೀಡುವ ವಿಚಾರ, ಟೊಮೆಟೋ ಬೆಳೆಗಾರರಿಗೆ ನೆರವು ನೀಡುವ ವಿಚಾರವನ್ನು ಈ ಸಭೆಯಲ್ಲಿ ಕೈಬಿಟ್ಟಿರುವುದು ಸರಿಯಲ್ಲ.
ಇದನ್ನೂ ಓದಿ: Chikkaballapur News: ನವ ಓದುವಿನಂತೆ ಸಿಂಗಾರಗೊಂಡ ನಂದಿ ಗ್ರಾಮ, ಬೆಟ್ಟದ ಮೇಲೆ ಅಧಿಕಾರಿಗಳ ಕಲರವ
ಕೆಐಎಡಿಬಿ ಹೆಸರಿನಲ್ಲಿ ರೈತರ ಭೂಮಿ ಪಡೆಯುತ್ತಿರುವ ವಿಚಾರ ಪ್ರಸ್ತಾಪವಾಗಿಲ್ಲ.ಸರಕಾರ ಕೂಡಲೇ ಎ.ಮತ್ತು ಬಿ ವಲಯದ ಭೂಮಿಯನ್ನು ಪಡೆಯಬಾರದು ಎಂದು ಹೇಳಿದ್ದರೂ ಜಂಗಮಕೋಟೆ ಭಾಗದಲ್ಲಿ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿ ರುವುದನ್ನು ಕೂಡಲೇ ನಿಲ್ಲಿಸಬೇಕು.ರಾಜ್ಯದಲ್ಲಿ ಈಗಾಗಲೇ ವಶಪಡಿಸಿಕೊಂಡಿರುವ ಲಕ್ಷಾಂತರ ಎಕರೆ ಭೂಮಿಯಲ್ಲಿ ಶೇ೧೦ರಷ್ಟು ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಆಗಿಲ್ಲ.ರೈತರಿಗೆ ಲಕ್ಷ ಎರಡು ಲಕ್ಷ ಕೊಟ್ಟು ಪಡೆದು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ನೀಡಿರುವ ಭೂಮಿಯ ಬೆಲೆ ಕೋಟಿಗಟ್ಟಲೆ ಬೆಳೆದಿದೆ.ಇದನ್ನು ಮನಗಂಡು ಭೂಮಿ ಒತ್ತುವರಿ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
ಹೆಚ್.ಎನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಲಿಲ್ಲ ಎಂದರೆ ಜಿಲ್ಲೆಯ ಜಲಮೂಲ ಗಳು ಮಾಲಿನ್ಯಕ್ಕೆ ಒಳಗಾಗುತ್ತವೆ.ಜನತೆ ಕ್ಯಾನ್ಸರ್ ಇತ್ಯಾದಿ ರೋಗಗಳಿಗೆ ಒಳಗಾಗುತ್ತಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ಈ ಬಗ್ಗೆ ಪ್ರಸ್ತಾಪ ಆಗದಿರುವುದು ಸರಕಾರದ ಅಸಡ್ಡೆಯನ್ನು ಎತ್ತಿ ತೋರಿಸು ತ್ತದೆ. ಕೂಡಲೇ ೩ನೇ ಹಂತದ ಶುದ್ದೀಕರಣ ಮಾಡಿ ಎಂದು ಒತ್ತಾಯಿಸಿದರು.
ರಾಜ್ಯದ ಸಂಪುಟ ಸಭೆಯು ಜಿಲ್ಲೆಯ ನಾಗರೀಕರ ಬಹುದಿನಗಳ ಕನಸಾದ ಶುದ್ದ ನೀರಾವರಿ, ಆರೋಗ್ಯ, ರೈತರ ಪರ ಯೋಜನೆಗಳ ಘೋಷಣೆ, ಎನ್.ಹೆಚ್. ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣ ಹಾಗೂ ನಿಂತಿರುವ ಅಭಿವೃದ್ಧಿ ಕೆಲಸಗಳಿಗೆ ಅನುದಾನಗಳ ಬಿಡುಗಡೆ ಮಾಡುವ ಬಗ್ಗೆ ಇದ್ದ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ತಿಳಿಸಿದರು.
ಈಗ ೧೪ನೇ ಸಚಿವ ಸಂಪುಟದಲ್ಲಿ ಅನುಮೋದನೆಗೂಂಡಿರುವ ಯೋಜನೆಗಳನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸದಿದ್ದಲ್ಲಿ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾದ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷರಾದ ಕೆ .ವಿ. ನಾಗರಾಜ್ , ರಾಜ್ಯ ಬಿ.ಎಂ.ಟಿ.ಸಿ. ಮಂಡಳಿ ಮಾಜಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್ ಮುರಳಿಧರ್, ಕೆ.ಬಿ. ಮುರಳಿ ಹಾಗೂ ಮಧುಸೂರ್ಯ ನಾರಾಯಣರೆಡ್ಡಿ , ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ ,ಜಿಲ್ಲಾ ಕಾರ್ಯದರ್ಶಿ ಆರ್. ಎನ್. ಅಶೋಕ್ , ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಆನಂದ್ ಗೌಡ, ಕಲಾ ನಾಗರಾಜ್, ಜಿಲ್ಲಾ ಮಾಧ್ಯಮ ಸಂಚಾಲಕ ವಿ. ಮಧುಚಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.