Nimisha Priya: ನಿಮಿಷಾ ಪ್ರಿಯಾ ಉಳಿಸಲು ಧಾರ್ಮಿಕ ರಾಜತಾಂತ್ರಿಕತೆ; ಯಾರಿದು ಮುತ್ಸದ್ದಿ ಮುಫ್ತಿ?
ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಯೊಳಗಾದ ನರ್ಸ್ ನಿಮಿಷಾ ಪ್ರಿಯಾ ಪರವಾಗಿ ಅವರನ್ನು ಉಳಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ನಿಮಿಷಾ ಪ್ರಿಯಾ ಮರಣ ದಂಡನೆಯನ್ನು ಮುಂದೂಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಭಾರತ ‘ಮುತ್ಸದ್ದಿ ಮುಫ್ತಿ’ ಶೇಖ್ ಅಬೂಬಕರ್ ಅಹ್ಮದ್ ಕುರಿತು ಮಾಹಿತಿ ಇಲ್ಲಿದೆ.


ಸನಾ: ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಯೊಳಗಾದ ನರ್ಸ್ ನಿಮಿಷಾ ಪ್ರಿಯಾ ಪರವಾಗಿ ಅವರನ್ನು ಉಳಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ನಿಮಿಷಾ ಪ್ರಿಯಾ ಮರಣ ದಂಡನೆಯನ್ನು ಮುಂದೂಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಭಾರತ ‘ಮುತ್ಸದ್ದಿ ಮುಫ್ತಿ’ ಶೇಖ್ ಅಬೂಬಕರ್ ಅಹ್ಮದ್ (Sheikh Abubakr Ahmad) ಅವರು ಮೃತನ ಕುಟುಂಬಸ್ಥರೊಂದಿಗೆ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ. ಧಾರ್ಮಿಕ ರಾಜತಾಂತ್ರಿಕತೆಯ ಮೂಲಕ ನಿಮಿಷಾ ಅವರನ್ನು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ.
ಕೇರಳದ ಶೇಖ್ ಅಬೂಬಕರ್ ಅಹ್ಮದ್ ಸುನ್ನಿ ಧರ್ಮಗುರು. ಇವರು ಶೇಖ್ ಅಬುಬಕರ್ ಅಹ್ಮದ್ ಎಂದೇ ಚಿರಪರಿಚಿತರು. ಇವರು ಭಾರತದ ‘ಮುತ್ಸದ್ದಿ ಮುಫ್ತಿ’ಅಥವಾ ಇವರನ್ನು ಸರಳವಾಗಿ ಎ.ಪಿ, ಉಸ್ತಾದ್ ಎಂದು ಕರೆಯುತ್ತಾರೆ. ಒಂದು ಕಡೆ ಭಾರತ ಸರ್ಕಾರ ಇನ್ನೊಂದು ಕಡೆ ಇವರು ಇಬ್ಬರು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲ ಮಾರ್ಗಗಳೂ ಮುಚ್ಚಿಹೋದಾಗ ‘ಧಾರ್ಮಿಕ ರಾಜತಾಂತ್ರಿಕತೆ’ ಕೆಲಸ ಮಾಡಿದೆ.
94 ವರ್ಷದ ಶೇಖ್ ಅಬೂಬಕರ್ ಅಹ್ಮದ್ ಒಂದು ಕಾಲದಲ್ಲಿ ಮತಧರ್ಮಶಾಸ್ತ್ರದ ಕಟ್ಟಾ ಅನುಯಾಯಿಯಾಗಿದ್ದರು ಮತ್ತು ಪರಾನುಭೂತಿಯ ಸಾಮಾಜಿಕ ನೇತಾರರಾಗಿ ಗುರುತಿಸಿಕೊಂಡಿದ್ದರು. ಮುಫ್ತಿಯಾರ್ ಅವರಿಗೆ ಧರ್ಮ, ರಾಜಕೀಯ ಮತ್ತು ಸಾರ್ವಜನಿಕ ಜೀವನವು ಒಂದಕ್ಕೊಂದು ತಳಕು ಹಾಕಿಕೊಂಡಿರುವ, ಅಷ್ಟೇನು ಸುಲಭವಲ್ಲದ ಕೇರಳದಲ್ಲಿ ವಿಶೇಷ ಸ್ಥಾನಮಾನವಿದೆ.
1978ರಲ್ಲಿ ಕೋಳಿಕ್ಕೋಡ್ ನಲ್ಲಿ ಅವರು ಸ್ಥಾಪಿಸಿದ ಅತ್ಯಂತ ವಿಸ್ತಾರವಾದ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಸಂಕೀರ್ಣವಾಗಿರುವ ಶಾಲೆ ಪ್ರಸಿದ್ಧವಾಗಿದೆ. ಇಲ್ಲಿ ಇಸ್ಲಾಮಿಕ್ ಧರ್ಮಶಾಸ್ತ್ರ, ಅರೇಬಿಕ್, ಆಧುನಿಕ ವಿಜ್ಞಾನ ಮತ್ತು ವೃತ್ತಿಪರ ತರಬೇತಿಯನ್ನು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಸಮಾನವಾದ ಶಿಕ್ಷಣ ದೊರೆಯುತ್ತದೆ. ಇದಕ್ಕೆ 2016ರಲ್ಲಿ ಅಖಿಲ ಭಾರತ ತಂಜಿಮ್ ಉಲಮಾ-ಎ-ಇಸ್ಲಾಂ (All India Tanzeem Ulama-e-Islam) ಸಂಸ್ಥೆಯು ಇವರಿಗೆ ‘ಮುತ್ಸದಿ ಮುಫ್ತಿ’ (Grand Mufti) ಎಂಬ ಬಿರುದನ್ನು ನೀಡಿದೆ. ಕಾಂತಾಪುರಂ ಅವರು ಯೆಮನ್ ನಲ್ಲಿ ಶತಮಾನಗಳಷ್ಟು ಹಳೆಯದಾದ ಸೂಫಿ ಜಾಲ ಮತ್ತು ಧಾರ್ಮಿಕ ಸಂಸ್ಥೆಗಳ ಜೊತೆ ನಂಟನ್ನು ಹೊಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Nimisha Priya: ನಿಮಿಷಾ ಪ್ರಿಯಾ ಅಪರಾಧಿ...ಎಂದಿಗೂ ಆಕೆಯನ್ನು ಕ್ಷಮಿಸಲಾಗದು ಎಂದ ಮೆಹದಿ ಸಹೋದರ; ಕಂದಿದ ಭರವಸೆಯ ಬೆಳಕು?
ಏನಿದು ನಿಮಿಷಾ ಕೇಸ್
ನಿಮಿಷಾ ಪ್ರಿಯಾ 2017 ರಲ್ಲಿ ತನ್ನ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಅಬ್ದೋ ಮಹ್ದಿ ಅವರ ಕೊಲೆ ಆರೋಪದ ಮೇಲೆ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ . ನಿಮಿಷಾ ಪ್ರಿಯಾಳನ್ನು ಮರಣದಂಡನೆಯಿಂದ ರಕ್ಷಿಸಲು ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ಹಣವನ್ನು ಪಾವತಿಸುವ ಮೂಲಕ ಮರಣದಂಡನೆಯನ್ನು ಮಾತುಕತೆ ಮೂಲಕ ಪರಿಹರಿಸಬಹುದು ಎಂದು ಹೇಳಲಾಗಿದೆ.