ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Zeeshan Siddique: ಬಾಬಾ ಸಿದ್ದಿಕ್ ಪುತ್ರ ಜೀಶನ್ ಸಿದ್ದಿಕ್‌ಗೆ 'ಡಿ ಕಂಪನಿ'ಯಿಂದ ಕೊಲೆ ಬೆದರಿಕೆ; ₹10 ಕೋಟಿ ಹಣಕ್ಕೆ ಬೇಡಿಕೆ

Zeeshan Siddique: ಎನ್‌ಸಿಪಿ ನಾಯಕ ಹಾಗೂ ಮಾಜಿ ಕಾಂಗ್ರೆಸ್ ಶಾಸಕ(Former Congress MLA) ಜೀಶನ್ ಸಿದ್ದಿಕ್ಅವರಿಗೆ ಸೋಮವಾರ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ತಕ್ಷಣವೇ ಬಾಂದ್ರಾ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಬಾಂದ್ರಾ ಪೊಲೀಸ್ ತಂಡವು ಜೀಶನ್ ನಿವಾಸಕ್ಕೆ ತೆರಳಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಬಾಬಾ ಸಿದ್ದಿಕ್ ಪುತ್ರ ಜೀಶನ್‌ಗೆ ಜೀವ ಬೆದರಿಕೆ...!

Profile Sushmitha Jain Apr 22, 2025 10:45 AM

ಮುಂಬೈ: ಎನ್‌ಸಿಪಿ (ಅಜಿತ್ ಪವಾರ್ ಬಣ) (NCP (Ajit Pawar faction)) ನಾಯಕ ಹಾಗೂ ಮಾಜಿ ಕಾಂಗ್ರೆಸ್ ಶಾಸಕ(Former Congress MLA) ಜೀಶನ್ ಸಿದ್ದಿಕ್(Zeeshan Siddique) ಅವರಿಗೆ ಸೋಮವಾರ ಇಮೇಲ್ ಮೂಲಕ ಕೊಲೆ ಬೆದರಿಕೆ(Death Threat) ಬಂದಿದ್ದು, ತಕ್ಷಣವೇ ಬಾಂದ್ರಾ ಪೊಲೀಸರು(Bandra Police) ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಬಾಂದ್ರಾ ಪೊಲೀಸ್ ತಂಡವು ಜೀಶನ್‌ ನಿವಾಸಕ್ಕೆ ತೆರಳಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಬೆದರಿಕೆಯ ಮೂಲವನ್ನು ಪತ್ತೆಹಚ್ಚಲು ಮತ್ತು ಜೀಶನ್ಅವರ ಸುರಕ್ಷತೆಯನ್ನು ಖಚಿತಪಡಿಸಲು ತನಿಖೆ ಆರಂಭವಾಗಿದೆ. ಮುಂಬೈ ಕ್ರೈಂ ಬ್ರಾಂಚ್ ಕೂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಮಾಜಿ ಶಾಸಕ ಜೀಶನ್ ಸಿದ್ದಿಕ್, ದಿವಂಗತ ನಾಯಕ ಬಾಬಾ ಸಿದ್ದಿಕ್ ಅವರ ಪುತ್ರರಾಗಿದ್ದಾರೆ. "ಎರಡು ದಿನಗಳಲ್ಲಿ ಮೂರು ಇಮೇಲ್‌ಗಳು ಬಂದಿವೆ. 'ಡಿ ಕಂಪನಿ'ಯಿಂದ ಎಂದು ಹೇಳಿಕೊಂಡು, ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ₹10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನ ಅಧಿಕೃತ ಇಮೇಲ್ ಐಡಿಗೆ ಈ ಇಮೇಲ್‌ಗಳು ಬಂದಿವೆ. ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದು, ಬಾಂದ್ರಾ ಪೊಲೀಸ್ ತಂಡ ನನ್ನ ನಿವಾಸಕ್ಕೆ ಬಂದು ಹೇಳಿಕೆ ದಾಖಲಿಸಿದೆ” ಎಂದು ಜೀಶನ್ ಸಿದ್ದಿಕ್ ಹೇಳಿದ್ದಾರೆ.

ಮಾಜಿ ಶಾಸಕ ಜೀಶನ್ ಸಿದ್ದಿಕ್ ಬಾಬಾ ಸಿದ್ದಿಕ್ ಅವರಿಗೆ ಬೆದರಿಕೆ ಇಮೇಲ್ ಬಂದಿದೆ. ಬಾಂದ್ರಾ ಪೊಲೀಸ್ ಠಾಣೆಯು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಉಪ ಪೊಲೀಸ್ ಆಯುಕ್ತ ನಿಮಿತ್ ಗೋಯಲ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಒಡಿಶಾದಲ್ಲಿ ಅಮಾನವೀಯ ಘಟನೆ; ಯುವಕರಿಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ, ಮೂತ್ರ ಸೇವಿಸಲು ಒತ್ತಾಯ!

ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ಜೀಶನ್ ಸಿದ್ದಿಕ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಸ್ತುತ ಅವರಿಗೆ 'ವೈ' ವಿಭಾಗದ ರಕ್ಷಣೆ ಒದಗಿಸಲಾಗಿದೆ. ತಂದೆಯ ಹತ್ಯೆಯ ನಂತರ ಝೀಶಾನ್‌ಗೆ ಕೆಲವು ಕೊಲೆ ಬೆದರಿಕೆಗಳು ಬಂದಿವೆ. ಬಾಬಾ ಸಿದ್ದಿಕ್, ಮಾಜಿ ರಾಜ್ಯ ಸಚಿವರಾಗಿದ್ದು 2024ರ ಅಕ್ಟೋಬರ್ 12 ರಂದು ಪೂರ್ವ ಬಾಂದ್ರಾದ ನಿರ್ಮಲ್ ನಗರ ಪ್ರದೇಶದಲ್ಲಿ ಗುಂಡೇಟಿಗೆ ಬಲಿಯಾಗಿದ್ದರು. ಇದೇ ವೇಳೆ ಬಾಂದ್ರಾ ಪೊಲೀಸರು ಜೀಶನ್ ಸಿದ್ದಿಕ್ ಅವರ ಭದ್ರತಾ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಜೀಶನ್ ಇತ್ತೀಚೆಗೆ ಮತ್ತೊಂದು ಕೊಲೆ ಬೆದರಿಕೆ ಬಂದಿರುವುದನ್ನು ದೃಢಪಡಿಸಿದ್ದಾರೆ.