Sunday, 15th December 2024

ಗ್ರಾಪಂಗಳಿಗೆ ಚುನಾವಣೆ ಘೋಷಿಸಿ

ಮುರುಗೇಶ ಡಿ

ಕರ್ನಾಟಕದಲ್ಲಿ ಈಗಾಗಲೇ ಚುನಾವಣಾ ಪರ್ವ ಆರಂಭವಾಗಿರುವ ಬೆನ್ನ ಒಂದರ ಮೇಲೊಂದರಂತೆ ಚುನಾವಣೆಗಳು ನಡೆಯು ತ್ತಿವೆ.

ಇದು ಸಂತೋಷದ ವಿಷಯ. ಆದರೆ ಈಗಾಗಲೇ ಗ್ರಾಮ ಪಂಚಾಯಿತಿ ಅವಧಿ ಮುಗಿದು ಐದು ತಿಂಗಳು ಕಳೆದರೂ ಕೂಡ ಗ್ರಾಮ
ಪಂಚಾಯಿತಿ ಚುನಾವಣೆ ನಡೆಸಲು ಸರಕಾರ ಆಸಕ್ತಿ ತೋರಿಸದೆ ನಿರ್ಲಕ್ಷಿಸಿ, ಈವರೆಗೂ ಚುನಾವಣಾ ದಿನಾಂಕ ಘೋಷಿಸದಿರು ವುದು ನಿಜಕ್ಕೂ ಬೇಸರದ ಸಂಗತಿ. ಗ್ರಾಮೀಣ ಭಾಗಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕ್ಷೇತ್ರಗಳು ಕಿಂಚಿತ್ತೂ ಅಭಿವೃದ್ಧಿ ಕಾಣದೆ ಮೂಲ ಸೌಕರ್ಯದಿಂದ ವಂಚಿತವಾಗಿವೆ. ಜತೆಗೆ ಆಗಬೇಕಾಗಿರುವ ಕೆಲಸಗಳು ಹಾಗೆಯೇ ನಿಂತಿವೆ.

ಸರಕಾರ ಕೇವಲ ಕರೋನಾ ನೆಪವೊಡ್ಡಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸದಿರುವುದು ನಿಜಕ್ಕೂ ದುಃಖಕರ. ಈಗಾಗಲೇ ವಿಧಾನಪರಿಷತ್ ಚುನಾವಣೆ ನಡೆದು ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಯೂ ಮುಗಿಯುತ್ತಾ ಬಂದಿದೆ. ಈ ಚುನಾ ವಣೆಗಳಿಗೆ ಎದುರಾಗದೇ ಇರುವ ಕರೋನಾ, ಗ್ರಾಮಪಂಚಾಯಿತಿ ಚುನಾವಣೆಗಳಿಗೆ ಮಾತ್ರ ಅಡ್ಡಿಯಾಗುತ್ತದೆಯೆ? ಗ್ರಾಮ
ಪಂಚಾಯಿತಿ ಮಟ್ಟದಲ್ಲಿ ಆಡಳಿತ ವಿಕೇಂದ್ರೀಕರಣ ಪರಿಣಾಮಕಾರಿಯಾಗಿ ಕೆಲಸ ಮಾಡಲು ರಾಜ್ಯ ಸರಕಾರ ದಯಮಾಡಿ ೬೦೨೧ ಗ್ರಾಮ ಪಂಚಾಯಿತಿಗಳಿಗೆ ಶೀಘ್ರವೇ ಚುನಾವಣೆಗೆ ದಿನಾಂಕ ಘೋಷಿಸಬೇಕಾಗಿದೆ.